ETV Bharat / bharat

ಮಣ್ಣಿನಲ್ಲಿ ನವಜಾತ ಹೆಣ್ಣು ಶಿಶು ಜೀವಂತ ಹೂತು ಅಮಾನವೀಯತೆ: ಗ್ರಾಮಸ್ಥರ ನೆರವಿನಿಂದ ರಕ್ಷಣೆ

ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಖಿತೌಲಿಯಾ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಮಹಿಳೆಯರು ಬಹಿರ್ದೆಸೆಗೆ ಹೋದಾಗ ಮಣ್ಣಿನಲ್ಲಿ ಶಿಶುವನ್ನು ಜೀವಂತವಾಗಿ ಹೂತಿರುವುದು ಪತ್ತೆಯಾಗಿದೆ.

newborn-girl-buried-alive-in-field-badaun-up
ಮಣ್ಣಿನಲ್ಲಿ ನವಜಾತ ಹೆಣ್ಣು ಶಿಶು ಜೀವಂತ ಹೂತು ಅಮಾನವೀಯತೆ: ಗ್ರಾಮಸ್ಥರ ನೆರವಿನಿಂದ ರಕ್ಷಣೆ
author img

By

Published : Sep 9, 2022, 7:10 PM IST

ಬದೌನ್ (ಉತ್ತರ ಪ್ರದೇಶ): ನವಜಾತ ಹೆಣ್ಣು ಶಿಶುವೊಂದನ್ನು ಮಣ್ಣಿನಲ್ಲಿ ಜೀವಂತವಾಗಿ ಹೂತು ಹೋಗಿದ್ದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ​ಗ್ರಾಮಸ್ಥರ ನೆರವಿನಿಂದ ಶಿಶುವನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಇಲ್ಲಿನ ಕದರ್‌ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಖಿತೌಲಿಯಾ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಗ್ರಾಮದ ಮಹಿಳೆಯರು ಬಹಿರ್ದೆಸೆಗೆ ಹೋಗಿದ್ದರು. ಈ ವೇಳೆ ಮಗು ಅಳುವ ಶಬ್ದ ಕೇಳಿದೆ. ಅಂತೆಯೇ, ಸ್ಥಳಕ್ಕೆ ಹೋಗಿ ನೋಡಿದಾಗ ಮಣ್ಣಿನಲ್ಲಿ ಶಿಶುವನ್ನು ಜೀವಂತವಾಗಿ ಹೂತಿರುವುದು ಪತ್ತೆಯಾಗಿದೆ. ಆಗ ಈ ಬಗ್ಗೆ ತಕ್ಷಣವೇ ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಗ್ರಾಮಸ್ಥರ ನೆರವಿನಿಂದ ಶಿಶುವನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: ಹೊಲದಲ್ಲಿ ಜೀವಂತ ಶಿಶು ಹೂತು ಹೋದ ಹೃದಯಹೀನರು: ರಕ್ಷಿಸಿ ಜೀವ ಉಳಿಸಿದ ರೈತ

ಈ ಶಿಶು ಆಗಷ್ಟೇ ಹುಟ್ಟಿರುವಂತೆ ಇದ್ದು, ಮಣ್ಣಿನಲ್ಲಿ ಅರ್ಧಂಬರ್ಧ ಹೂಳಲಾಗಿತ್ತು. ಹೀಗಾಗಿ ಶಿಶು ಇನ್ನೂ ಉಸಿರಾಡುತ್ತಿತ್ತು. ಯಾರೋ ಅಪರಿಚಿತರು ಶಿಶು ಕಣ್ಣು ತೆರೆಯುವ ಮೊದಲೇ ಈ ಕೃತ್ಯ ಎಸಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ರಕ್ಷಣೆ ಮಾಡಿರುವ ಶಿಶುವನ್ನು ಮಹಿಳಾ ಪೊಲೀಸರಿಗೆ ಒಪ್ಪಿಸಲಾಗಿದ್ದು, ಹೊಸ ಬಟ್ಟೆ ತೊಡಿಸಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿ ಶಿಶುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಹಿಂಗೋಲಿ ಮೂಢನಂಬಿಕೆಯ ಪರಮಾವಧಿ.. ಆರು ತಿಂಗಳ ಹಸುಳೆಗೆ ಮಹಿಳೆಯರಿಂದ ಪೂಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.