ETV Bharat / bharat

ಹೊಸ ಕೋವಿಡ್​ ಸೃಷ್ಟಿಸಿದ ಆತಂಕ : ದೇಶದ ಜನರಿಗೆ ಲಸಿಕೆ ಭದ್ರತೆ ಒದಗಿಸಿ ಎಂದ ರಾಹುಲ್‌ ಗಾಂಧಿ

author img

By

Published : Nov 27, 2021, 4:53 PM IST

ಓರ್ವ ವ್ಯಕ್ತಿಯ ಫೋಟೋದೊಂದಿಗೆ ವ್ಯಾಕ್ಸಿನೇಷನ್​ನ ನಿಜವಾದ​ ಅಂಕಿ-ಅಂಶ ಹೆಚ್ಚಿನ ಕಾಲ ಮುಚ್ಚಿಡಲು ಸಾಧ್ಯವಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಶೇ.31.19ರಷ್ಟು ಜನಸಂಖ್ಯೆ ಮಾತ್ರ ಪೂರ್ಣ ಪ್ರಮಾಣದ ಲಸಿಕೆ ಪಡೆದುಕೊಂಡಿದ್ದಾರೆಂದು ತೋರಿಸುವ ಚಾರ್ಟ್​ ಕೂಡ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ..

Rahul Gandhi tweet on New variant
Rahul Gandhi tweet on New variant

ನವದೆಹಲಿ : ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ವೈರಸ್​ನ ರೂಪಾಂತರ ತಳಿ ಪತ್ತೆಯಾಗಿದೆ. ಭಾರತ ಸೇರಿದಂತೆ ಅನೇಕ ದೇಶಗಳು ಈಗಾಗಲೇ ಮಹತ್ವದ ನಿರ್ಧಾರ ಕೈಗೊಂಡಿವೆ. ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಿಂದ ಭಾರತಕ್ಕೆ ಬರುವ ವಿದೇಶಿಗರ ಮೇಲೆ ಹದ್ದಿನ ಕಣ್ಣಿಡಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್ ರೂಪಾಂತರ ಸೋಂಕು ಕಂಡು ಬರುತ್ತಿದ್ದಂತೆ ಕಾಂಗ್ರೆಸ್​​ ಮುಖಂಡ ರಾಹುಲ್​ ಗಾಂಧಿ ಟ್ವೀಟ್ ಮಾಡಿದ್ದು, ದೇಶದ ಜನರಿಗೆ ಲಸಿಕೆ ಭದ್ರತೆ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಹೊಸ ರೂಪಾಂತರ ದೊಡ್ಡ ಬೆದರಿಕೆಯಾಗಿದೆ. ದೇಶದ ಜನರಿಗೆ ಕೇಂದ್ರ ಸರ್ಕಾರ ಲಸಿಕೆಯ ಭದ್ರತೆ ಒದಗಿಸಬೇಕೆಂದು ತಿಳಿಸಿದ್ದಾರೆ.

  • New variant is a serious threat.

    High time GOI gets serious about providing vaccine security to our countrymen.

    Bad vaccination figures can’t be hidden for long behind one man’s photo. #Omicron pic.twitter.com/3J7E8TEwXT

    — Rahul Gandhi (@RahulGandhi) November 27, 2021 " class="align-text-top noRightClick twitterSection" data=" ">

ಇದೇ ವೇಳೆ ಕೇಂದ್ರ ಸರ್ಕಾರದ ಲಸಿಕೆ ವಿತರಣೆ ಬಗ್ಗೆ ಪ್ರಶ್ನೆ ಮಾಡಿರುವ ರಾಹುಲ್​, ಓರ್ವ ವ್ಯಕ್ತಿಯ ಫೋಟೋದೊಂದಿಗೆ ವ್ಯಾಕ್ಸಿನೇಷನ್​ನ ನಿಜವಾದ​ ಅಂಕಿ-ಅಂಶ ಹೆಚ್ಚಿನ ಕಾಲ ಮುಚ್ಚಿಡಲು ಸಾಧ್ಯವಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಶೇ.31.19ರಷ್ಟು ಜನಸಂಖ್ಯೆ ಮಾತ್ರ ಪೂರ್ಣ ಪ್ರಮಾಣದ ಲಸಿಕೆ ಪಡೆದುಕೊಂಡಿದ್ದಾರೆಂದು ತೋರಿಸುವ ಚಾರ್ಟ್​ ಕೂಡ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿರಿ: ನ. 29ರಂದು ಟ್ರ್ಯಾಕ್ಟರ್ ರ್‍ಯಾಲಿ ನಡೆಸದಿರಲು ಕಿಸಾನ್​ ಯೂನಿಯನ್​​ ನಿರ್ಧಾರ.. ಕೇಂದ್ರಕ್ಕೆ ಡಿ.4ರ ಗಡುವು

ದೆಹಲಿ ಸಿಎಂ ಕೇಜ್ರಿವಾಲ್​​ ಮನವಿ : ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್ ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಓಮಿಕ್ರಾನ್ ಸೋಂಕು ಪತ್ತೆಯಾಗಿರುವ ದೇಶಗಳಿಂದ ಭಾರತಕ್ಕೆ ಬರುವ ವಿಮಾನಯಾನ ಸೇವೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಕೇಜ್ರಿವಾಲ್​, ಕೊರೊನಾದಿಂದ ಭಾರತ ಇದೀಗ ಚೇತರಿಸಿಕೊಂಡಿದೆ. ಇದೀಗ ಹೊಸ ವೈರಸ್​​ ದೇಶದಲ್ಲಿ ಪ್ರಸರಣವಾಗದಂತೆ ತಡೆಯಲು ಎಲ್ಲ ಅಗತ್ಯ ಕ್ರಮಕೈಗೊಳ್ಳಿ ಎಂದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ರೂಪಾಂತರ ವೈರಸ್​ಗೆ ಇದೀಗ ಓಮಿಕ್ರಾನ್​ ಎಂದು ಹೆಸರಿಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.