ETV Bharat / bharat

ನಾಯಿಗಳಿಗೆ ಬಟ್ಟೆ ಹೊಲಿದು ವರ್ಷಕ್ಕೆ 1 ಕೋಟಿ ರೂ. ವ್ಯವಹಾರ : ಹೈದರಾಬಾದ್​​ನಲ್ಲಿ ಹೊಸ ಟ್ರೆಂಡ್​!!

'ಡಾಗ್​ ಓ ಬೌ' ಎಂಬ ಸ್ಟಾರ್ಟಪ್​ ಕಂಪನಿ (Dog o bow startup company)ಮೂಲಕ ಹೈದ್ರಾಬಾದ್​ನಲ್ಲಿ(Hyderabad) ಶ್ವಾನಗಳಿಗಾಗಿಯೇ ಬಟ್ಟೆ ತಯಾರಿಕಾ ಮಳಿಗೆಗಳನ್ನು ಆರಂಭಿಸಿ ಸುಂದರವಾದ, ವಿವಿಧ ವಿನ್ಯಾಸದ ಬಟ್ಟೆಗಳನ್ನು(Beautiful clothes for pets) ತಯಾರಿಸುತ್ತಿದ್ದಾರೆ ಮಹಾರಾಷ್ಟ್ರದ ಫ್ಯಾಷನ್ ಡಿಸೈನರ್ ನಿಮಿಷಾ ದೀಕ್ಷಿತ್​..

clothes for pets
ನಾಯಿಗಳಿಗೂ ತರಹೇವಾರಿ ಬಟ್ಟೆಯ ಸಿಂಗಾರ
author img

By

Published : Nov 12, 2021, 6:30 PM IST

Updated : Nov 13, 2021, 12:42 PM IST

ಬಣ್ಣ ಬಣ್ಣದ ಫ್ರಾಕ್​, ಚಂದದ ಅಂಗಿಯನ್ನು ತೊಟ್ಟು ಓಡಾಡುತ್ತಿರುವ ಶ್ವಾನಗಳು.. ಇದನ್ನು ಕಂಡು ಹಿರಿ ಹಿರಿ ಹಿಗ್ಗುವ ಶ್ವಾನ ಪ್ರಿಯರು. ಹೈದ್ರಾಬಾದ್​ನಲ್ಲೀಗ ಹೊಸ ಫ್ಯಾಶನ್​ ಶುರುವಾಗಿದೆ.

ಹಬ್ಬದ ಸಮಯದಲ್ಲಿ ತಾವು ಹೊಸ ಬಟ್ಟೆಗಳನ್ನು ಖರೀದಿಸುವುದು ಮಾತ್ರವಲ್ಲದೇ ತಮ್ಮ ನಾಯಿಗಳಿಗೂ ಹೊಸ ಬಟ್ಟೆಗಳನ್ನು ಖರೀದಿಸುತ್ತಿದ್ದಾರೆ ಶ್ವಾನ ಪ್ರಿಯರು.

ಹೈದ್ರಾಬಾದ್​ನಲ್ಲಿ ಶ್ವಾನಗಳಿಗಾಗಿಯೇ ಬಟ್ಟೆ ತಯಾರಿಕಾ ಮಳಿಗೆಗಳನ್ನು ಆರಂಭಿಸಿ ಸುಂದರವಾದ ವಿವಿಧ ವಿನ್ಯಾಸದ ಬಟ್ಟೆಗಳನ್ನು ತಯಾರಿಸುತ್ತಿದ್ದಾರೆ ಮಹಾರಾಷ್ಟ್ರದ ಫ್ಯಾಷನ್ ಡಿಸೈನರ್ ನಿಮಿಷಾ ದೀಕ್ಷಿತ್​.

2018ರಲ್ಲಿ 'ಡಾಗ್​ ಓ ಬೌ' ಎಂಬ ಸ್ಟಾರ್ಟಪ್​ ಕಂಪನಿ ಆರಂಭಿಸಿದ ನಿಮಿಷಾ ದೀಕ್ಷಿತ್ ಅವರು ಹೈದರಾಬಾದ್​ನ ಬಂಜಾರಾ ಹಿಲ್ಸ್​ ಮತ್ತು ಕೂಕಟ್​ಪಲ್ಲಿಯಲ್ಲಿ ಎರಳು ಮಳಿಗೆಯನ್ನು ಹೊಂದಿದ್ದಾರೆ.

50 ಜನ ಸಿಬ್ಬಂದಿಯನ್ನು ಹೊಂದಿರುವ ಅವರು, ವಿವಿಧ ಮೆಟ್ರೋ ಸಿಟಿಗಳಿಗೆ ಶ್ವಾನಗಳ ವಿವಿಧ ವಿನ್ಯಾಸದ ಬಟ್ಟೆಗಳನ್ನು ಸರಬರಾಜು ಮಾಡುತ್ತಿದ್ದಾರೆ. ವರ್ಷಕ್ಕೆ 1 ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ ಎಂದು ನಿಮಿಷಾ ದೀಕ್ಷಿತ್​ ತಿಳಿಸಿದ್ದಾರೆ.

ಸಾಕು ಪ್ರಾಣಿಗಳಿಗಾಗಿ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಟ್ಯಾಂಗ್ರಿಸ್, ಟಕ್ಸೆಡೋಸ್, ಶೇರ್ವಾನಿ, ಫ್ರಾಕ್‌ಗಳಂತಹ ಬಟ್ಟೆ ಮತ್ತು ಹಾಸಿಗೆಗಳನ್ನು ತಯಾರಿಸುತ್ತೇವೆ. ಚೆನ್ನೈನಲ್ಲಿಯೂ ಕಂಪನಿಯ ಶಾಖೆ ಇದೆ. ಅಲ್ಲಿಯೂ ಉತ್ತಮ ವಹಿವಾಟು ನಡೆಯುತ್ತಿದೆ ಎಂದರು.

Last Updated : Nov 13, 2021, 12:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.