ನವದೆಹಲಿ: ಆದಾಯ ತೆರಿಗೆದಾರರು ತೆರಿಗೆ ಪಾವತಿಯಿಂದ ನುಣುಚಿಕೊಳ್ಳುವುದನ್ನು ಕಂಡು ಹಿಡಿಯಲು ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಈ ಮೂಲಕ ತೆರಿಗೆ ವಂಚಕರನ್ನು ಗುರುತಿಸಿ ಅವರ ಮೇಲೆ ಹೆಚ್ಚು ಟಿಡಿಎಸ್ (ಟ್ಯಾಕ್ಸ್ ಡಿಡಕ್ಟೆಡ್ ಆಟ್ ಸೋರ್ಸ್) ವಿಧಿಸಲು ಸರ್ಕಾರ ನಿರ್ಧಾರ ಮಾಡಿದ್ದು, ಜುಲೈ 1ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ.
-
CBDT issues Circular No. 11 of 2021 dt 21.06.2021 on implementation of section 206AB & 206CCA wrt higher tax deduction/collection for certain non-filers. New functionality issued for compliance checks for sec 206AB & 206CCA to ease compliance burden of tax deductors/collectors. pic.twitter.com/1DP39BKVZi
— Income Tax India (@IncomeTaxIndia) June 21, 2021 " class="align-text-top noRightClick twitterSection" data="
">CBDT issues Circular No. 11 of 2021 dt 21.06.2021 on implementation of section 206AB & 206CCA wrt higher tax deduction/collection for certain non-filers. New functionality issued for compliance checks for sec 206AB & 206CCA to ease compliance burden of tax deductors/collectors. pic.twitter.com/1DP39BKVZi
— Income Tax India (@IncomeTaxIndia) June 21, 2021CBDT issues Circular No. 11 of 2021 dt 21.06.2021 on implementation of section 206AB & 206CCA wrt higher tax deduction/collection for certain non-filers. New functionality issued for compliance checks for sec 206AB & 206CCA to ease compliance burden of tax deductors/collectors. pic.twitter.com/1DP39BKVZi
— Income Tax India (@IncomeTaxIndia) June 21, 2021
ಕಳೆದ ಎರಡು ವರ್ಷಗಳಿಂದ ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆ (ಐಟಿಆರ್) ಸಲ್ಲಿಸದ ವ್ಯಕ್ತಿಗಳಿಗೆ ಹೆಚ್ಚಿನ ಟಿಡಿಎಸ್ ವಿಧಿಸಲಾಗುತ್ತದೆ. ತೆರಿಗೆ ಕಟ್ಟದ ವ್ಯಕ್ತಿ ಕೊನೆಯ ಎರಡು ಐಟಿಆರ್‌ಗಳನ್ನು ಸಲ್ಲಿಸಿದ್ದಾನೋ ಇಲ್ಲವೋ ಎಂದು ಪರಿಶೀಲಿಸಲು, ಹೊಸ ತೆರಿಗೆ ಪೋರ್ಟಲ್ ಸೌಲಭ್ಯವನ್ನು ಆದಾಯ ತೆರಿಗೆ ಹೊಂದಲಿದೆ.
2020-21ರ ಹಣಕಾಸು ವರ್ಷದ ಬಜೆಟ್‌ನಲ್ಲಿ, ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದವರಲ್ಲಿ ಟಿಡಿಎಸ್ ಮತ್ತು ಐಟಿಆರ್ ಹೆಚ್ಚಿರುತ್ತದೆ ಎಂದು ಮಾಹಿತಿ ಒದಗಿಸಲಾಗಿದೆ. ಹೊಸ ವ್ಯವಸ್ಥೆ ಇಂಥವರನ್ನು ಪತ್ತೆ ಹಚ್ಚಲು ಸಹಕಾರ ನೀಡುತ್ತದೆ.
ಇದನ್ನೂ ಓದಿ: ಲಕ್ಷದ್ವೀಪ ಕರ್ನಾಟಕ ಹೈಕೋರ್ಟ್ ವ್ಯಾಪ್ತಿಗೆ ಒಳಪಡುತ್ತಾ? ಅಧಿಕಾರಿಗಳು ಹೇಳೋದೇನು?
ಈ ವಿಚಾರಕ್ಕೆ ಸಂಬಂಧಿಸಿದಂತೆ ಹಣಕಾಸು ಕಾಯ್ದೆಯ ಸೆಕ್ಷನ್ 206 ಎಬಿ ಮತ್ತು 206 ಸಿಸಿಎಗಳನ್ನು ಜಾರಿಗೊಳಿಸಿರುವುದಾಗಿ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಸೋಮವಾರ ಸುತ್ತೋಲೆ ಹೊರಡಿಸಿದ್ದು ಈ ಕುರಿತಂತೆ ಟ್ವೀಟ್ ಮಾಡಿದೆ.