ETV Bharat / bharat

Omicron: ಪುರಿ ಶ್ರೀ ಜಗನ್ನಾಥನ ಸಾರ್ವಜನಿಕ ದರ್ಶನಕ್ಕೆ ಹೊಸ ನಿಯಾವಳಿ! - ಪುರಿ ಶ್ರೀ ಜಗನ್ನಾಥ ದೇಗುಲ

ಒಮಿಕ್ರಾನ್​​ ಹಿನ್ನೆಲೆಯಲ್ಲಿ ಪುರಿ ಶ್ರೀಜಗನ್ನಾಥ ದೇವಾಲಯದ ಆಡಳಿತ ಮಂಡಳಿ ಸಾರ್ವಜನಿಕ ದರ್ಶನಕ್ಕಾಗಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

Puri jagannatha temple
ಪುರಿ ಶ್ರೀ ಜಗನ್ನಾಥ ದೇವಾಲಯ
author img

By

Published : Dec 15, 2021, 10:11 PM IST

ಪುರಿ(ಒಡಿಶಾ) : ಒಮಿಕ್ರಾನ್​​ ಹಿನ್ನೆಲೆಯಲ್ಲಿ ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿ ಸಾರ್ವಜನಿಕ ದರ್ಶನಕ್ಕಾಗಿ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ.

ಡಿಸೆಂಬರ್​ 10ರಂದು ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಗುರುವಾರ (ನಾಳೆಯಿಂದ) ಹೊಸ ನಿಯಾವಳಿಗಳು(ಪ್ರಮಾಣಿತ ಕಾರ್ಯವಿಧಾನದ ನಿಯಮಾವಳಿ) ಜಾರಿಗೆ ಬರಲಿವೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಹೊಸ ನಿಯದನ್ವಯ ಸಾರ್ವಜನಿಕ ದರ್ಶನಕ್ಕಾಗಿ ದೇಗುಲ ತೆರೆದಿರುವ ಎಲ್ಲಾ ದಿನಗಳಲ್ಲಿ ಬೆಳಗ್ಗೆ 05:30 ರಿಂದ ರಾತ್ರಿ 09:30 ರವರೆಗೆ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

New SOP Issued For Darshan At Jagannath Temple In Puri
ದೇಗುಲ ಆಡಳಿಯ ಮಂಡಳಿ ಹೊರಡಿಸಿರುವ ಹೊಸ ನಿಯಮಗಳು

ಕೋವಿಡ್​ ನಿಯಂತ್ರಣ ಮತ್ತು ಹೊಸವರ್ಷ ಆಚರಣೆ ಹಿನ್ನೆಲೆಯಲ್ಲಿ ಅಧಿಕ ಸಂಖ್ಯೆ ಜನ ಸೇರುವ ಸಾಧ್ಯತೆ ಇದೆ. ಈ ಸಂಬಂಧ ಡಿಸೆಂಬರ್ 31 ಮತ್ತು ಜನವರಿ 1 ರಂದು ದೇವರ ಸಾರ್ವಜನಿಕ ದರ್ಶನವನ್ನು ನಿರ್ಬಂಧಿಸಲಾಗಿದೆ. ಉಳಿದಂತೆ ಪ್ರತಿ ಭಾನುವಾರ ದೇಗುಲ ಬಂದ್​ ಇರಲಿದೆ ಎಂದು ತಿಳಿಸಿದೆ. ಸದ್ಯ ಒಡಿಶಾದಲ್ಲಿ ಯಾವುದೇ ಒಮಿಕ್ರಾನ್​ ಪ್ರಕರಣ ಪತ್ತೆಯಾಗಿಲ್ಲ.

ಇದನ್ನೂ ಓದಿ: ಮೂರು ದಿನಗಳ ಬಾಂಗ್ಲಾ ಪ್ರವಾಸ ಕೈಗೊಂಡ ರಾಷ್ಟ್ರಪತಿ ಕೋವಿಂದ್: ಕುಟುಂಬಸ್ಥರಿಗೆ ಅದ್ದೂರಿ ಸ್ವಾಗತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.