ETV Bharat / bharat

ದೆಹಲಿಯ ಕಾಂಜಾವಾಲಾ ಹಿಟ್ ಅಂಡ್ ರನ್ ಪ್ರಕರಣ: ಇನ್ನುಳಿದ ಆರೋಪಿಗಳಿಗೆ ಪೊಲೀಸರ ಶೋಧ..

author img

By

Published : Jan 5, 2023, 4:20 PM IST

ದೆಹಲಿಯ ಕಾಂಜಾವಾಲಾ ಹಿಟ್ ಅಂಡ್ ರನ್ ಪ್ರಕರಣ - ಸಮಯದಲ್ಲಿ ಅಮಿತ್ ಕಾರನ್ನು ಓಡಿಸುತ್ತಿದ್ದರು, ದೀಪಕ್ ಅಲ್ಲ ಎಂಬುದು ಬೆಳಕಿಗೆ - ದೆಹಲಿಯ ವಿಶೇಷ ಸಿಪಿ ಸಾಗರ್ ಪ್ರೀತ್ ಹೂಡಾ ಸ್ಪಷ್ಟನೆ

Delhi Police Special CP Sagar Preet Hooda spoke.
ದೆಹಲಿ ಪೊಲೀಸರ ವಿಶೇಷ ಸಿಪಿ ಸಾಗರ್ ಪ್ರೀತ್ ಹೂಡಾ ಮಾತನಾಡಿದರು.

ನವದೆಹಲಿ: ಕಂಝಾವಾಲಾ ಹಿಟ್ ಅಂಡ್ ರನ್ ಪ್ರಕರಣದಲ್ಲಿ ದೆಹಲಿ ಪೊಲೀಸರ ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿ ಹೊರಬಿದ್ದಿದೆ. ಈ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳ ಕೈವಾಡವೂ ಬಯಲಿಗೆ ಬಂದಿದೆ. ಒಟ್ಟಾರೆ ಏಳು ಜನರ ವಿರುದ್ಧ ಆರೋಪವಿದ್ದು, ಇನ್ನುಳಿದವರನ್ನು ಶೀಘ್ರ ಬಂಧಿಸಲಾಗುವುದು ಎಂದು ದೆಹಲಿ ಪೊಲೀಸರ ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಸಿಪಿ ಸಾಗರ್ ಪ್ರೀತ್ ಹೂಡಾ ಗುರುವಾರ ತಿಳಿಸಿದ್ದಾರೆ.

ದೆಹಲಿ ಪೊಲೀಸರು ಗುರುವಾರ ಕಾಂಜಾವಾಲಾ ಪ್ರಕರಣದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿಗಳನ್ನು ಪೊಲೀಸರು ವಿಚಾರಿಸಿದಾಗ, ಕಂಝಾವಾಲಾ ಹಿಟ್ ಅಂಡ್ ರನ್ ಘಟನೆಯ ಸಮಯದಲ್ಲಿ ಅಮಿತ್ ಕಾರನ್ನು ಓಡಿಸುತ್ತಿದ್ದರು. ದೀಪಕ್ ಅಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಮತ್ತಿಬ್ಬರನ್ನು ಆರೋಪಿಗಳನ್ನು ಗುರುತಿಸಿದ್ದು, ಆರೋಪಿಗಳನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ದೆಹಲಿ ಪೊಲೀಸರ ವಿಶೇಷ ಸಿಪಿ ಸಾಗರ್ ಪ್ರೀತ್ ಹೂಡಾ ಹೇಳಿದರು.

ಒಬ್ಬ ಆರೋಪಿ ಅಶುತೋಷ್ ಬಂಧಿತ ಆರೋಪಿಗಳು ಕಾರಿಗೆ ಬೇಡಿಕೆ ಇಟ್ಟಿದ್ದರು. ಇದೇ ವೇಳೆ, ಮತ್ತೊಬ್ಬ ಆರೋಪಿ ಅಂಕುಶ್ ಕೂಡ ಆರೋಪಿಗಳ ಜತೆ ಸಂಪರ್ಕದಲ್ಲಿದ್ದನು. ಇನ್ನುಳಿದ ಆರೋಪಿಗಳಿಬ್ಬರಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅದೇ ಪೊಲೀಸರ ತನಿಖೆಯ ವೇಳೆ ಬಂಧಿತ ಆರೋಪಿಗಳು ನೀಡಿದ ಹೇಳಿಕೆಯೂ ತಪ್ಪು ಎಂಬುದು ಬೆಳಕಿಗೆ ಬಂದಿದೆ. ಘಟನೆ ನಡೆದಾಗ ದೀಪಕ್ ಕಾರು ಚಲಾಯಿಸಿರಲಿಲ್ಲ. ಆದರೆ, ಅಮಿತ್ ಕಾರು ಚಲಾಯಿಸುತ್ತಿದ್ದ ಕಾರಣ ಅಮಿತ್ ಬಳಿ ಲೈಸೆನ್ಸ್ ಇಲ್ಲ, ಹಾಗಾಗಿ ದೀಪಕ್ ಕಾರು ಚಲಾಯಿಸುತ್ತಿದ್ದ ಎಂದು ಆರೋಪಿಗೆ ಅಂಕುಶ್ ತಿಳಿಸಿದ್ದಾನೆ ಎನ್ನಲಾಗಿದೆ.

ವಿವಿಧ ಸ್ಥಳಗಳಲ್ಲಿ ದೊರೆತ ಸಿಸಿಟಿವಿ ದೃಶ್ಯಾಗಳಿಂದ ಸ್ಪಷ್ಟ ನಿರ್ಧಾರಕ್ಕೆ ಬರಲು ಆಗುತ್ತಿಲ್ಲ. ಈ ವೇಳೆ, ಇಲ್ಲಿಯವರೆಗೂ ಅಂಜಲಿಯ ಸ್ಕೂಟಿ ಮಾತ್ರ ಪೊಲೀಸರು ವಶಪಡಿಸಿಕೊಂಡಿದ್ದು, ಆಕೆಯ ಮೊಬೈಲ್ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ನಿಧಿ ಜತೆಗಿನ ಅಂಜಲಿ ಗೆಳೆತನದ ವಿಚಾರವಾಗಿ ಡಿಸೆಂಬರ್ 29ರಿಂದ ಡಿಸೆಂಬರ್ 31ರ ನಡುವೆ ಅವರ ನಡುವೆ 25ರಿಂದ 30 ಕರೆಗಳು ಬಂದಿದ್ದವು. ಸಿಡಿಆರ್ ವರದಿಯ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್ ವಿಶೇಷ ಸಿಪಿ ಸಾಗರ್ ಪ್ರೀತ್ ಹೂಡಾ ಮಾಹಿತಿ ನೀಡಿದರು.

ತನಿಖೆ ಪ್ರಗತಿಯಲ್ಲಿದ್ದು, ಅಗತ್ಯವಿದ್ದರೆ ಪೊಲೀಸರು ಸುಳ್ಳು ಪತ್ತೆ ಪರೀಕ್ಷೆ ಮತ್ತು ಆರೋಪಿಗಳ ನಾರ್ಕೋ ಪರೀಕ್ಷೆಗೆ ಸಹ ಒತ್ತಾಯಿಸಬಹುದು. ಇದಲ್ಲದೇ, ದೆಹಲಿ ಪೊಲೀಸರು ಈ ವಿಷಯದಲ್ಲಿ ಶೀಘ್ರ ಇತ್ಯರ್ಥಕ್ಕಾಗಿ ತ್ವರಿತ ನ್ಯಾಯಾಲಯದ ಮೊರೆ ಹೋಗಬೇಕಾಗಿದೆ. ಪೊಲೀಸರು ಆದಷ್ಟು ಬೇಗ ಈ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

'ದೆಹಲಿ ಪೊಲೀಸರು' ದಾರಿ ತಪ್ಪಿದ್ದಾರಾ?: ಘಟನೆಯಲ್ಲಿ ಬಂಧಿತ ಆರೋಪಿಗಳನ್ನು ಮೊದಲ ವಿಚಾರಣೆಗೆ ಒಳಪಡಿಸಿದಾಗ, ಕಾರಿನಲ್ಲಿ ಜೋರಾಗಿ ಸಂಗೀತ ಮೊಳಗುತ್ತಿತ್ತು. ಈ ವೇಳೆ ಕಾರಿನಡಿಯಲ್ಲಿ ಯಾರೋ ಸಿಕ್ಕಿಬಿದ್ದಿರುವುದು ತಿಳಿದಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಘಟನೆಯ ವೇಳೆ ಆರೋಪಿ ದೀಪಕ್ ಖನ್ನಾ ಕಾರು ಚಲಾಯಿಸುತ್ತಿದ್ದ ಘಟನೆಯ ಸ್ವಲ್ಪ ಸಮಯದ ನಂತರ, ಕಾರಿನ ಕೆಳಗೆ ಏನೋ ಸಿಕ್ಕಿಹಾಕಿಕೊಂಡಿದೆ ಎಂದು ತನ್ನ ಸಹಚರರಿಗೆ ತಿಳಿಸಿದ್ದನು. ಅದರೆ, ವಾಹನ ಮುಂದೆ ಚಲಿಸುವಂತೆ ಸಹಚರರು ಹೇಳಿದ್ದರು ಎಂದಿದ್ದಾನೆ.

ಆರಂಭದಲ್ಲಿ ಪೊಲೀಸರು ಆರೋಪಿಗಳ ಹೇಳಿಕೆಗಳನ್ನು ಪರಿಶೀಲಿಸಲು ಮತ್ತು ಘಟನೆಯ ಪ್ರತ್ಯಕ್ಷದರ್ಶಿಗಳನ್ನು ಹುಡುಕಲು ಗಂಭೀರವಾಗಿ ಕೆಲಸ ಮಾಡಿದ್ದಾರೆ, ಅನೇಕ ಪ್ರಶ್ನೆಗಳಿಗೆ ಈಗಾಗಲೇ ಉತ್ತರ ಸಿಗುತ್ತಿತ್ತು. ಘಟನೆ ನಡೆದು ಎರಡು ದಿನಗಳಾದರೂ ಪೊಲೀಸರಿಗೆ ಸ್ಕೂಟಿಯಲ್ಲಿ ಅಂಜಲಿಯ ಸ್ನೇಹಿತೆ ಕೂಡ ಇದ್ದಳು ಎಂಬ ಮಾಹಿತಿ ಗೊತ್ತಿರಲಿಲ್ಲ. ಅದೇ ಸಮಯದಲ್ಲಿ, ಘಟನೆ ನಡೆದು 5 ದಿನಗಳು ಕಳೆದರೂ, ಅಂಜಲಿಯನ್ನು ಕಾರಿನ ಕೆಳಗೆ ಎಷ್ಟು ಕಿಲೋಮೀಟರ್ ಎಳೆದೊಯ್ದಿದ್ದಾರೆ ಎಂದು ಪೊಲೀಸರಿಗೆ ಹೇಳಲು ಸಾಧ್ಯವಾಗುತ್ತಿಲ್ಲ. 12 ಕಿ.ಮೀ.ಗೂ ಹೆಚ್ಚು ದೂರ ಎಳೆಯಲಾಗಿದೆ ಎಂದು ಸಾಗರ್ ಪ್ರೀತ್ ಹೂಡಾ ಹೇಳಿದ್ದಾರೆ. ಆದರೆ, ವಾಸ್ತವದಲ್ಲಿ ಇದು ಎಷ್ಟು ದೂರದಲ್ಲಿದೆ ಎಂಬುದು ಸ್ಪಷ್ಟವಾಗಿಲ್ಲ.

ಇದರ ಹೊರತಾಗಿಯೂ, ಆರಂಭದಲ್ಲಿ ಸೆಕ್ಷನ್ 279 ಮತ್ತು ಸೆಕ್ಷನ್ 304 ಎ ವಿಧಿಗಳಡಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ರೆಡ್ಡಿ ಅಕ್ರಮ ಆಸ್ತಿ ಮುಟ್ಟುಗೋಲು : ಅನುಮೋದನೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಸಿಬಿಐ ಹೈಕೋರ್ಟ್ ಮೊರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.