ರಾಯ್‌ಪುರ: ಛತ್ತೀಸ್‌ಗಢ ವಿಧಾನಸಭೆಯಲ್ಲಿ ನೂತನ ಮೀಸಲಾತಿ ಮಸೂದೆ ಅಂಗೀಕಾರಗೊಂಡಿದೆ. ರಾಜ್ಯದಲ್ಲಿ ಬುಡಕಟ್ಟು ಸಮುದಾಯಕ್ಕೆ ಮಾಡಲಾಗಿದ್ದ ಮೀಸಲಾತಿ ಕಡಿತದ ಸಮಸ್ಯೆಯನ್ನು ವಿಧಾನಸಭೆಯಲ್ಲಿ ಮಸೂದೆ ಪಾಸ್ ಮಾಡುವ ಮೂಲಕ ಪರಿಹರಿಸಲಾಗಿದೆ. ಹೊಸ ಮೀಸಲಾತಿ ಮಸೂದೆಗೆ ಛತ್ತೀಸ್‌ಗಢ ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ.
ಈ ಮಸೂದೆಯ ಪ್ರಕಾರ ಈಗ ಛತ್ತೀಸ್‌ಗಢದಲ್ಲಿ ಪರಿಶಿಷ್ಟ ಪಂಗಡಕ್ಕೆ ಶೇ.32, ಪರಿಶಿಷ್ಟ ಜಾತಿಗೆ ಶೇ.13, ಒಬಿಸಿಗೆ ಶೇ.27 ಮತ್ತು ಇಡಬ್ಲ್ಯೂಎಸ್‌ಗೆ ಶೇ.4 ಮೀಸಲಾತಿಯನ್ನು ನೀಡಲಾಗಿದೆ. ಈ ಹೊಸ ವಿಧೇಯಕಕ್ಕೆ ಛತ್ತೀಸ್‌ಗಢ ವಿಧಾನಸಭೆ ಸರ್ವಾನುಮತದಿಂದ ಒಪ್ಪಿಗೆ ನೀಡಿದೆ.
ಸೆಪ್ಟೆಂಬರ್ 19, 2022 ರವರೆ ಛತ್ತೀಸ್ಗಢದಲ್ಲಿದಲ್ಲಿ ಮೀಸಲು ನೀತಿ ಈ ರೀತಿ ಇತ್ತು
ಜಾತಿ | 19 ಸೆಪ್ಟೆಬರ್2022 | ಹೊಸ ಮೀಸಲಾತಿ ನೀತಿ |
ಅನುಸೂಚಿತ ಜಾತಿ | ಶೇ 12 | ಶೇ 13 |
ಪರಿಶಿಷ್ಟ ಪಂಗಡ | ಶೇ 32 | ಶೇ 32 |
ಇತರೆ ಹಿಂದುಳಿದ ವರ್ಗ | ಶೇ14 | ಶೇ 27 |
ಸಾಮಾನ್ಯ ವರ್ಗದ ಬಡವರು | ಶೇ 10 | ಶೇ 04 |
ಒಟ್ಟು ಮೀಸಲಾತಿ | ಶೇ 68 | ಶೇ 76 |
2012 ರಲ್ಲಿ ಎಸ್ಸಿಗೆ ಶೇ 16 ರಷ್ಟು ಮೀಸಲಾತಿ ಇದ್ದರೆ, ಎಸ್ಟಿಗೆ ಶೇ 20 ಹಾಗೂ ಒಬಿಸಿ ಅವರಿಗೆ ಶೇ 14ರಷ್ಟು ರಿಜರ್ವೇಷನ್ ನೀಡಲಾಗಿತ್ತು. ಒಟ್ಟು ಶೇ 50 ರಷ್ಟು ಮೀಸಲಾತಿ ನೀಡಲಾಗಿತ್ತು. ಬಳಿಕ ಈ ಮೀಸಲಾತಿಯನ್ನು ಶೇ 68ಕ್ಕೆ ಏರಿಕೆ ಮಾಡಲಾಗಿತ್ತು. ಇದೀಗ ಅದು 76ಕ್ಕೆ ಹೆಚ್ಚಳ ಮಾಡಲಾಗಿದೆ.
ನೂತನ ಮೀಸಲಾತಿ ಮಸೂದೆ ಕುರಿತು ಸಿಎಂ ಭೂಪೇಶ್ ಬಾಘೇಲ್ ಹೇಳಿದ್ದೇನು: ಹೊಸ ಮೀಸಲಾತಿ ಮಸೂದೆ ಮಂಡನೆ ಕುರಿತು ಸದನದಲ್ಲಿ ಮಾತನಾಡಿದ ಸಿಎಂ ಭೂಪೇಶ್ ಬಾಘೇಲ್, ಪ್ರತಿಪಕ್ಷದ ನಾಯಕರನ್ನು ಅಭಿನಂದಿಸುತ್ತೇನೆ. ಅವರು ಉತ್ತಮ ಸಲಹೆಗಳನ್ನು ನೀಡಿದರು ಎಂದರು. ಇದೇ ಗಳಿಗೆಯಲ್ಲಿ ಈ ಸಲಹೆ ನೀಡಲು ಪ್ರತಿಪಕ್ಷಗಳು ಎರಡು ತಿಂಗಳು ಹತ್ತು ದಿನಗಳ ಸಮಯ ತೆಗೆದುಕೊಂಡವು ಎಂದು ತರಾಟೆಗೆ ತೆಗೆದುಕೊಂಡರು. ಜನರಿಗಾಗಿ ಈ ಹೊಸ ಮೀಸಲು ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಬಿಜೆಪಿಗೆ ಈ ಬಗ್ಗೆ ಹೇಳಲು ಏನೂ ಉಳಿದಿಲ್ಲ. ಹೀಗಾಗಿ ಅದು ಅನಗತ್ಯ ಆರೋಪ ಮಾಡುತ್ತಿವೆ ಎಂದು ಪ್ರತಿಪಕ್ಷಗಳ ವಿರುದ್ಧ ಸಿಎಂ ಹರಿಹಾಯ್ದರು.
ಛತ್ತೀಸ್‌ಗಢದ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರ ಸ್ಥಿತಿ ದುರ್ಬಲವಾಗಿದೆ. ಅವರಿಗೆ ಮೀಸಲಾತಿಯಲ್ಲಿ ಸ್ಥಾನ ನೀಡಲಾಗುತ್ತಿದೆ ಎಂದ ಬಾಘೇಲ್ಜನಗಣತಿ ಮಾಡುವಂತೆ ನಾವು ಕೇಂದ್ರ ಸರ್ಕಾರಕ್ಕೆ ಹೇಳಿದ್ದೇವೆ. ನಾವು ಸಮುದಾಯದ ಜನ ಸಂಖ್ಯಾ ಆಧಾರದ ಮೇಲೆ ಎಸ್‌ಸಿ ವರ್ಗಕ್ಕೆ ಶೇ 16 ರಷ್ಟು ಮೀಸಲಾತಿ ನೀಡುತ್ತೇವೆ. ನಮ್ಮ ಸಚಿವರು ಇಂದೇ ರಾಜಭವನಕ್ಕೆ ಹೋಗುತ್ತಾರೆ. ರಾಜ್ಯಪಾಲರಿಗೆ ಸಹಿ ಹಾಕುವಂತೆ ಮನವಿ ಮಾಡುತ್ತೇವೆ ಎಂದರು.
ಸಂವಿಧಾನದ ಪರಿಚ್ಚೇದ 9 ಕ್ಕೆ ಸೇರಿಸಲು ಸಿಎಂ ಒತ್ತಾಯ: ಈ ಮೀಸಲಾತಿ ಮಸೂದೆಯನ್ನು ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸಲು ನಮ್ಮ ಪಕ್ಷ ಒತ್ತಾಯಿಸಲಿದೆ. ಈ ಸಂಬಂಧ ಸರ್ವ ಪಕ್ಷಗಳ ಸದಸ್ಯರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಒತ್ತಾಯಿಸಲಿದ್ದೇವೆ ಎಂದು ಸಿಎಂ ಭೂಪೇಶ್ ಬಾಘೇಲ್ ಇದೇ ವೇಳೆ ಹೇಳಿದರು.
ಛತ್ತೀಸ್‌ಗಢದಲ್ಲಿ ಶೇಕಡಾ 76 ರಷ್ಟು ಮೀಸಲಾತಿ ಇರಲಿದೆ. ಇಂದು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ಮಸೂದೆಯನ್ನು ರಾಜ್ಯಪಾಲರ ಒಪ್ಪಿಗೆಗಾಗಿ ಇಂದೇ ಕಳುಹಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ತಮಿಳುನಾಡಿನಲ್ಲಿ ಶೇ.69, ಮಹಾರಾಷ್ಟ್ರದಲ್ಲಿ ಶೇ.68ರಷ್ಟು ಮೀಸಲಾತಿ ಈಗಾಗಲೇ ಜಾರಿಯಲ್ಲಿದೆ ಇದೆ ಎಂದು ಬಾಘೇಲ್ ಇದೇ ವೇಳೆ ನೆನಪಿಸಿದರು.
ಸಿಹಿ ಹಂಚಿ ಸಂಭ್ರಮ: ಹೊಸ ಮೀಸಲಾತಿ ವಿಧೇಯಕ ಅಂಗೀಕಾರವಾದ ಬಳಿಕ ಕಾಂಗ್ರೆಸ್ ಪಕ್ಷವು ಸಂಭ್ರಮಾಚರಣೆ ಮಾಡಿದೆ. ಮುಖಂಡರು-ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂತಸ ಪಟ್ಟರು. ಇದನ್ನು ಬಘೇಲ್ ಸರ್ಕಾರದ ದೊಡ್ಡ ಸಾಧನೆ ಎಂದು ಕಾಂಗ್ರೆಸ್ ಬಣ್ಣಿಸಿಕೊಂಡಿದೆ.
ಇದನ್ನು ಓದಿ: ಕೊಚ್ಚಿಯಲ್ಲಿ 197 ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ವಿಮಾನ ತುರ್ತು ಭೂಸ್ಪರ್ಶ