ನವದೆಹಲಿ: ನೂತನ ಸಂಸತ್ತಿನ ಕಟ್ಟಡವು 2022ರ ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳುವ ಗುರಿ ಹೊಂದಿದ್ದು ದೇಶ ಸ್ವಾತಂತ್ರ್ಯವಾಗಿ 75ನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಬಳಕೆಗೆ ಮುಕ್ತವಾಗಲಿದೆ ಎಂದು ಸರ್ಕಾರ ಇಂದು ಸಂಸತ್ತಿಗೆ ತಿಳಿಸಿದೆ.
ಸೆಂಟ್ರಲ್ ವಿಸ್ಟಾ ಮಾಸ್ಟರ್ ಯೋಜನೆ ಅಭಿವೃದ್ಧಿಯ ಭಾಗವಾಗಿರುವ ಸಾಮಾನ್ಯ ಕೇಂದ್ರ ಕಾರ್ಯದರ್ಶಿ ಕಟ್ಟಡಗಳು, ಕೇಂದ್ರದ ಸಮ್ಮೇಳನ ಕೇಂದ್ರ, ಪ್ರಧಾನ ಮಂತ್ರಿಗಳ ನಿವಾಸ, ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಕಟ್ಟಡ ಹಾಗೂ ಉಪರಾಷ್ಟ್ರಪತಿಗಳ ಎನ್‌ಕ್ಲೇವ್‌ಗೂ 2021ರ ಮೇ 31 ರಂದು ಪರಿಸರ ಸಚಿವಾಲಯದಿಂದ ಪರಿಸರ ಅನುಮತಿ ಪಡೆಯಲಾಗಿದೆ ಎಂದು ಸರ್ಕಾರ ಹೇಳಿದೆ. ಹೊಸ ಸಂಸತ್ತಿನ ಕಟ್ಟಡಕ್ಕೆ ಕಳೆದ ವರ್ಷ ಜೂನ್ 17 ರಂದು ಪರಿಸರ ಸಚಿವಾಲಯ ಒಪ್ಪಿಗೆ ನೀಡಿತ್ತು.
ಕೇಂದ್ರ ವಿಸ್ಟಾ ಅಭಿವೃದ್ಧಿ ಮಾಸ್ಟರ್ ಯೋಜನೆಯಡಿಯಲ್ಲಿ ಪಟ್ಟಿ ಮಾಡಲಾದ ಯಾವುದೇ ಪಾರಂಪರಿಕ ಕಟ್ಟಡಗಳನ್ನು ನೆಲಸಮ ಮಾಡಲಾಗುವುದಿಲ್ಲ. ನ್ಯಾಷನಲ್ ಆರ್ಕೈವ್ಸ್ ಮತ್ತು ನ್ಯಾಷನಲ್ ಮ್ಯೂಸಿಯಂನಲ್ಲಿನ ಎಲ್ಲಾ ವಸ್ತುಗಳು ಹಾಗೆಯೇ ಇರುತ್ತವೆ. ಇದರ ಬಗ್ಗೆ ವಿದ್ವಾಂಸಕರು ಮತ್ತು ಸಂಶೋಧನೆ ನಡೆಸಲಿದ್ದಾರೆ ಎಂದು ಸರ್ಕಾರ ಸಂಸತ್ತಿನಲ್ಲಿ ಹೇಳಿದೆ.
ಇದನ್ನೂ ಓದಿ: ಕೇಂದ್ರ ವಿಸ್ಟಾ ಯೋಜನೆ: ಪಾರಂಪರಿಕ, ಸಾಂಸ್ಕೃತಿಕ, ಐತಿಹಾಸಿಕ ಕಟ್ಟಡಗಳ ಮಾರ್ಪಾಡಿಲ್ಲ - ಕೇಂದ್ರದ ಭರವಸೆ
ನಿರಪೇಕ್ಷಣಾ ಪತ್ರ ಪಡೆಯುವ ಪ್ರಕ್ರಿಯೆಯ ಭಾಗವಾಗಿ, ವಿವಿಧ ಹಂತಗಳಲ್ಲಿರುವ ಕೇಂದ್ರ ವಿಸ್ಟಾ ಮಾಸ್ಟರ್ ಯೋಜನೆಯ ಎಲ್ಲಾ ಪರಿಸರ ಪರಿಣಾಮದ ಮೌಲ್ಯಮಾಪನ (ಇಐಎ) ಅಧ್ಯಯನಗಳನ್ನು ನಡೆಸಲಾಗಿದೆ. ಈ ಅಧ್ಯಯನವು ಕಾರ್ಯನಿರ್ವಾಹಕ ಎನ್‌ಕ್ಲೇವ್‌ನಲ್ಲಿ (ಪ್ರಧಾನ ಮಂತ್ರಿಗಳ ಕಚೇರಿ, ಕ್ಯಾಬಿನೆಟ್ ಸೆಕ್ರೆಟರಿಯಟ್ ಹಾಗೂ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯದರ್ಶಿಗಳನ್ನು ಒಳಗೊಂಡಂತೆ) ಪ್ರಸ್ತಾಪಿಸಲಾದ ಕಟ್ಟಡಗಳ ಮೇಲಿನ ಪರಿಸರ ಪರಿಣಾಮಗಳನ್ನು ಅಧ್ಯಯನ ಮಾಡಿದೆ.
ಈ ಅಧ್ಯಯನದ ಆಧಾರದ ಮೇಲೆ ಇಐಎ ವರದಿಯನ್ನು ತಜ್ಞರ ಮೌಲ್ಯಮಾಪನ ಸಮಿತಿ (ಇಎಸಿ)ಗೆ ಸಲ್ಲಿಸಲಾಗಿತ್ತು. ಇಐಎ ವರದಿ ಪರಿಶೀಲಿಸಿದ ನಂತರ ಇಸಿಗೆ ಶಿಫಾರಸು ಮಾಡಲಾಗುತ್ತು. ಈ ಎಲ್ಲಾ ಪ್ರಕ್ರಿಯೆ ನಂತರ 2021 ಮೇ 31ರಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಇಸಿ ನೀಡಿದೆ ಎಂದು ಸರ್ಕಾರ ತಿಳಿಸಿದೆ.