ETV Bharat / bharat

ಕೇರಳಕ್ಕೆ ಮತ್ತೊಂದು ಆತಂಕ: ಹೊಸ ಮಲೇರಿಯಾ ರೋಗಾಣು ಪತ್ತೆ - ಪ್ಲಾಸ್ಮೋಡಿಯಂ ಓವಲ್' ಎಂಬ ಮಲೇರಿಯಾ ರೋಗಾಣು ಪತ್ತೆ

ಕೇರಳದಲ್ಲಿ ಸುಡಾನ್‌ನಿಂದ ಪ್ರಯಾಣಿಸಿದ ಸೈನಿಕರೊಬ್ಬರಿಗೆ ನೂತನ ರೀತಿಯ ಲಕ್ಷಣಗಳುಳ್ಳ 'ಪ್ಲಾಸ್ಮೋಡಿಯಂ ಓವಲ್' ಎಂಬ ಮಲೇರಿಯಾ ರೋಗಾಣು ಪತ್ತೆಯಾಗಿದ್ದು, ಭಾರಿ ಆತಂಕ ಮೂಡಿಸಿದೆ.

ಪ್ಲಾಸ್ಮೋಡಿಯಂ ಓವಲ್
ಪ್ಲಾಸ್ಮೋಡಿಯಂ ಓವಲ್
author img

By

Published : Dec 11, 2020, 7:49 AM IST

ತಿರುವನಂತಪುರಂ (ಕೇರಳ): ಕೋವಿಡ್​-19 ಹಿನ್ನೆಲೆ ಈಗಾಗಲೇ ಜನಜೀವನ ತತ್ತರಿಸಿ ಹೋಗಿದ್ದು, ಈ ನಡುವೆಯೇ ಕೇರಳ ರಾಜ್ಯದಲ್ಲಿ 'ಪ್ಲಾಸ್ಮೋಡಿಯಂ ಓವಲ್' ಎಂಬ ಹೊಸ ರೀತಿಯ ಮಲೇರಿಯಾ ರೋಗಾಣು ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್​ ಮೂಲಕ ಮಾಹಿತಿ ನೀಡಿರುವ ಶೈಲಜಾ ಅವರು, ನೂತನ ರೀತಿಯ ಲಕ್ಷಣಗಳುಳ್ಳ 'ಪ್ಲಾಸ್ಮೋಡಿಯಂ ಓವಲ್' ಎಂಬ ಮಲೇರಿಯಾ ರೋಗ ರಾಜ್ಯದಲ್ಲಿ ಪತ್ತೆಯಾಗಿದ್ದು, ಸುಡಾನ್‌ನಿಂದ ಪ್ರಯಾಣಿಸಿದ ಸೈನಿಕನಲ್ಲಿ ಈ ರೋಗದ ಲಕ್ಷಣಗಳು ಕಂಡುಬಂದಿವೆ. ರೋಗಿಯು ಕಣ್ಣೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡುವುದು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದರಿಂದ ರೋಗ ಹರಡುವುದನ್ನು ತಪ್ಪಿಸಬಹುದು. ಯಾರೂ ಭಯ ಪಡುವ ಅಗತ್ಯವಿಲ್ಲ, ಸ್ಪಚ್ಛತೆಯನ್ನು ಕಾಪಾಡಿ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.