ETV Bharat / bharat

ಐತಿಹಾಸಿಕ ಜಿ-20 ಶೃಂಗಸಭೆ: ವಿವಿಧ ರಾಷ್ಟ್ರಗಳ ಮುಖ್ಯಸ್ಥರನ್ನು ಸ್ವಾಗತಿಸಲು ಸಜ್ಜಾದ ನವದೆಹಲಿ - ಐಟಿಸಿ ಮೌರ್ಯ ಶೆರಾಟನ್ ಹೋಟೆಲ್‌

ನವದೆಹಲಿಯಲ್ಲಿ ಸೆಪ್ಟೆಂಬರ್​ 9 ರಿಂದ ಆರಂಭವಾಗುವ ಜಿ-20 ಶೃಂಗಸಭೆಗೆ ಆಗಮಿಸುವ ವಿವಿಧ ರಾಷ್ಟ್ರಗಳ ನಾಯಕರ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ.

ಐತಿಹಾಸಿಕ ಜಿ-20 ಶೃಂಗಸಭೆ
ಐತಿಹಾಸಿಕ ಜಿ-20 ಶೃಂಗಸಭೆ
author img

By ETV Bharat Karnataka Team

Published : Sep 7, 2023, 7:40 PM IST

ನವದೆಹಲಿ : ಭಾರತದ ಅಧ್ಯಕ್ಷತೆಯಲ್ಲಿ ನಡೆಯುವ ಐತಿಹಾಸಿಕ ಜಿ20 ಶೃಂಗಸಭೆಗೆ ಹಾಜರಾಗಲು ಭಾರತಕ್ಕೆ ಆಗಮಿಸುತ್ತಿರುವ ವಿವಿಧ ರಾಷ್ಟ್ರಗಳ ನಾಯಕರಿಗೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರು ಐಟಿಸಿ ಮೌರ್ಯ ಶೆರಾಟನ್ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದು, ಹೋಟೆಲ್​ಗೆ ಬಿಗಿ ಭದ್ರತೆ ನೀಡಲಾಗಿದೆ.

ಮೂಲಗಳ ಪ್ರಕಾರ, ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಜೊತೆಯಲ್ಲಿರುವ ಪ್ರತಿನಿಧಿಗಳಿಗಾಗಿ 400 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಹೋಟೆಲ್ ಈ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷರಾದ ಜಾರ್ಜ್ ಬುಷ್, ಬಿಲ್ ಕ್ಲಿಂಟನ್ ಮತ್ತು ಬರಾಕ್ ಒಬಾಮಾ ಸೇರಿದಂತೆ ವಿವಿಧ ರಾಷ್ಟ್ರಗಳ ಮುಖ್ಯಸ್ಥರಿಗೆ ಆತಿಥ್ಯ ವಹಿಸಿದೆ.

ಭದ್ರತಾ ಕಾರಣಗಳಿಗಾಗಿ ಐಷಾರಾಮಿ ಹೋಟೆಲ್‌ನ ಪ್ರತಿ ಮಹಡಿಯಲ್ಲೂ ರಹಸ್ಯ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಅಧ್ಯಕ್ಷರನ್ನು ಶಯನಗೃಹಕ್ಕೆ ಕರೆದೊಯ್ಯಲು ವಿಶೇಷ ಎಲಿವೇಟರ್ ವ್ಯವಸ್ಥೆ ಮಾಡಲಾಗಿದೆ. ಅದರ ಜೊತೆಗೆ, ವಿಶ್ವದ ಅತ್ಯಂತ ದುಬಾರಿ ಕಾರುಗಳು, ಆಧುನಿಕ ಶಸ್ತ್ರಾಸ್ತ್ರಗಳು, ಬಾಂಬ್ ಡಿಟೆಕ್ಟರ್‌ಗಳು, ನಿಯಂತ್ರಣ ಕೊಠಡಿ ವ್ಯವಸ್ಥೆಯನ್ನು ರೂಪಿಸಲಾಗಿದೆ.

ದ್ವಿಪಕ್ಷೀಯ ಮಾತುಕತೆ: ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ಜೋ ಬೈಡನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆಗಸ್ಟ್ 8 ರಂದು ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಪರಮಾಣು ರಿಯಾಕ್ಟರ್‌ಗಳ ಒಪ್ಪಂದ, ಅಮೆರಿಕದಲ್ಲಿ ಓದಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಸೂಕ್ತವಾದ ವಿಶೇಷ ಶೈಕ್ಷಣಿಕ ಕಾರ್ಯಕ್ರಮ, ಡ್ರೋನ್ ಒಪ್ಪಂದ, ಜೆಟ್ ಎಂಜಿನ್‌ ಒಳಗೊಂಡ ರಕ್ಷಣಾ ಒಪ್ಪಂದ, ಉಕ್ರೇನ್‌ಗೆ ಜಂಟಿ ಮಾನವೀಯ ನೆರವು, ಹೊಸ ಕಾನ್ಸುಲೇಟ್‌ಗಳ ಸ್ಥಾಪನೆ ವಿಚಾರಗಳು ಉಭಯ ನಾಯಕರ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ ಪ್ರಸ್ತಾಪವಾಗಲಿವೆ ಎಂದು ತಿಳಿದು ಬಂದಿದೆ.

ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಕಂಪ್ಯೂಟರ್‌ಗಳ ಆಮದಿನ ಮೇಲೆ ಭಾರತ ವಿಧಿಸಿರುವ ನಿರ್ಬಂಧಗಳ ಕುರಿತ ಚರ್ಚೆಯೂ ಕಾರ್ಯಸೂಚಿಯಲ್ಲಿದೆ. ಶ್ವೇತಭವನದ ಹೇಳಿಕೆಯ ಪ್ರಕಾರ, ಅಧ್ಯಕ್ಷ ಜೋ ಬಿಡೆನ್ ಅವರು ಪ್ರಧಾನ ಮಂತ್ರಿ ಮೋದಿಯವರ ಜಿ20 ನಾಯಕತ್ವವನ್ನು ಶ್ಲಾಘಿಸಲಿದ್ದಾರೆ. 2026 ರಲ್ಲಿ ಅಮೆರಿಕ ಜಿ20 ಅಧ್ಯಕ್ಷತೆ ವಹಿಸುವ ಕುರಿತು ಚರ್ಚೆ, ಹವಾಮಾನ ಬದಲಾವಣೆ, ಹಸಿರು ಶಕ್ತಿ ಮತ್ತು ಉಕ್ರೇನ್ ಬಿಕ್ಕಟ್ಟು ಕೂಡ ಜಿ20 ಶೃಂಗಸಭೆಯ ಕಾರ್ಯಸೂಚಿಯಲ್ಲಿವೆ ಎಂದು ಶ್ವೇತಭವನ ಹೇಳಿದೆ.

ಇತರ ಮುಖ್ಯಸ್ಥರಿಗೆ ವ್ಯವಸ್ಥೆ: ಬ್ರಿಟನ್​ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಇತರ ಕೆಲವು ನಾಯಕರು ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಭಾರತಕ್ಕೆ ತಮ್ಮ ಮೊದಲ ಅಧಿಕೃತ ಭೇಟಿ ನೀಡುತ್ತಿರುವ ಸುನಕ್ ಅವರಿಗೆ ಇಲ್ಲಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಚೀನಾದ ಪ್ರಧಾನಿ ಪ್ರೀಮಿಯರ್ ಲಿ ಕಿಯಾಂಗ್ ನೇತೃತ್ವದ ನಿಯೋಗ ತಾಜ್ ಹೋಟೆಲ್‌ನಲ್ಲಿ ತಂಗಲಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಇಂಡೋನೇಷ್ಯಾದಿಂದ ಭಾರತಕ್ಕೆ ಆಗಮಿಸಲಿದ್ದು, ಅವರಿಗೆ ಲಲಿತ್ ಹೋಟೆಲ್‌ನಲ್ಲಿ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಇಂಪೀರಿಯಲ್ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಜಿ20 ಶೃಂಗಸಭೆಯಲ್ಲಿ 29 ರಾಷ್ಟ್ರಗಳ ಮುಖ್ಯಸ್ಥರು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು ಮತ್ತು ಆಹ್ವಾನಿತ ದೇಶಗಳು ಮತ್ತು 14 ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಜಿ20 ಶೃಂಗಸಭೆ: 'ವಿಶ್ವವೇ ನಮ್ಮ ಕುಟುಂಬ' - ಜಗತ್ತಿಗೆ ಪ್ರಧಾನಿ ಮೋದಿ ಸಂದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.