ETV Bharat / bharat

ಈ ಹೊಸ ಬಗೆಯ ಶ್ವಾಸಕೋಶದ ಕ್ಯಾನ್ಸರ್ ತಪಾಸಣೆ ನಿರ್ದಿಷ್ಟ ಸಾವಿನ ಪ್ರಮಾಣ ಕಡಿಮೆ ಮಾಡುತ್ತದೆ! - Low-dose CT screening methods

ಈ ತಪಾಸಣೆಗೆ ಒಳಗಾದವರು ದೀರ್ಘಾವಧಿಯಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ಉಂಟಾಗುವ ಸಾವಿನ ಸಂಖ್ಯೆಯಲ್ಲಿ ಪ್ರತೀ 250 ವಯಸ್ಕರಲ್ಲಿ ಒಬ್ಬರನ್ನು ಸಾವಿನ ದವಡೆಯಿಂದ ಉಳಿಸುತ್ತದೆ..

cancer screening reduces rates of lung cancer-specific death
ಶ್ವಾಸಕೋಶದ ಕ್ಯಾನ್ಸರ್ ತಪಾಸಣೆ
author img

By

Published : Nov 11, 2020, 12:50 PM IST

ವಾಷಿಂಗ್​ಟನ್​: ಶ್ವಾಸಕೋಶದ ಕ್ಯಾನ್ಸರ್ ತಪಾಸಣೆ ಹೊಸ ವಿಶ್ಲೇಷಣೆಯೊಂದು ಶ್ವಾಸಕೋಶದ ಕ್ಯಾನ್ಸರ್​​ನಿಂದ ಸಂಭವಿಸಬಹುದಾದ ನಿರ್ದಿಷ್ಟ ಸಾವಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

ಲೋ ಡೋಸ್​ ಸಿಟಿ ಸ್ಕ್ರೀನಿಂಗ್ ವಿಧಾನಗಳು ಶ್ವಾಸಕೋಶದ ಕ್ಯಾನ್ಸರ್ ತಪಾಸಣೆಯ ಎಂಟು ನಿಯಂತ್ರಿತ ಕ್ಲಿನಿಕಲ್ ಪ್ರಯೋಗಗಳ ಮೆಟಾ-ವಿಶ್ಲೇಷಣೆಯ ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್ ಗೆ ಒಳಗಾದ ಪ್ರತಿ 250 ವಯಸ್ಕರಲ್ಲಿ ಒಂದು ಸಾವನ್ನು ತಡೆಯಬಹುದು.

ಜಾರ್ಜಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು 90,275 ರೋಗಿಗಳ ಆರೋಗ್ಯವನ್ನು ವಿಶ್ಲೇಷಿಸಿದ್ದಾರೆ. ಇನ್ನು ಈ ರೀತಿಯ ತಪಾಸಣೆಗೆ ಒಳಗಾದವರನ್ನು ಸಾಮಾನ್ಯ ವೈದ್ಯಕೀಯ ಆರೈಕೆ ಅಥವಾ ಎಕ್ಸ್​​ರೇಗೆ ಒಳಗಾದವರ ಜೊತೆ ಹೋಲಿಕೆ ಮಾಡಿ ವಿಶ್ಲೇಷಿಸಲಾಗಿದೆ.

ಈ ವಿಶ್ಲೇಷಣೆಯು ವೈದ್ಯಕೀಯವಾಗಿ ಮತ್ತು ಸಾಂಖಿಕವಾಗಿ ಮಹತ್ವದ್ದಾಗಿದೆ. ಏಕೆಂದರೆ, ಈ ತಪಾಸಣೆಗೆ ಒಳಗಾದವರು ದೀರ್ಘಾವಧಿಯಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ಉಂಟಾಗುವ ಸಾವಿನ ಸಂಖ್ಯೆಯಲ್ಲಿ ಪ್ರತೀ 250 ವಯಸ್ಕರಲ್ಲಿ ಒಬ್ಬರನ್ನು ಸಾವಿನ ದವಡೆಯಿಂದ ಉಳಿಸುತ್ತದೆ.

ಈ ಲೋ ಡೋಸ್​ ಸಿಟಿ ಸ್ಕ್ರೀನಿಂಗ್ ವಿಶ್ಲೇಷಣೆಯ ಫಲಿತಾಂಶಗಳನ್ನು ಅನ್ನಲ್ಸ್ ಆಫ್ ಫ್ಯಾಮಿಲಿ ಮೆಡಿಸಿನ್‌ನಲ್ಲಿ ಪ್ರಕಟಿಸಲಾಗಿದೆ. ಈ ಹೊಸ ವಿಧಾನದ ಬಗ್ಗೆ ಲೇಖಕರು ಅದರಲ್ಲಿ ವಿಶ್ಲೇಷಿಸಿದ್ದಾರೆ.

ಇನ್ನು, ಯುಎಸ್​​ನ ಪ್ರಿವೆಂಟಿವ್ ಸರ್ವೀಸಸ್ ಟಾಸ್ಕ್ ಫೋರ್ಸ್ ಈ ಹೊಸ ಅಧ್ಯಯನದ ನಿಯಮಿತವಾಗಿ ಧೂಮಪಾನದ ಇತಿಹಾಸವನ್ನು ಹೊಂದಿರುವ 55 ರಿಂದ 80 ವರ್ಷ ವಯಸ್ಸಿನ ವಯಸ್ಕರಿಗೆ ಸಿಟಿ ಸ್ಕ್ರೀನಿಂಗ್​ ಆಧಾರಿತ ಶ್ವಾಸಕೋಶದ ಕ್ಯಾನ್ಸರ್ ತಪಾಸಣೆ ಮಾಡುವಂತೆ ಶಿಫಾರಸು ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.