ETV Bharat / bharat

ವೇಗ ಪಡೆದುಕೊಂಡ ಹೆದ್ದಾರಿ ಕಾಮಗಾರಿ.. ದೇಶದಲ್ಲಿ ನಿತ್ಯ 30 ಕಿ.ಮೀ ಹೊಸ ಮಾರ್ಗ ನಿರ್ಮಾಣ! - National Highway Construction

ಕಳೆದ ಕೆಲವು ವರ್ಷಗಳಲ್ಲಿ ದೇಶಾದ್ಯಂತ ರಸ್ತೆ ನಿರ್ಮಾಣದಲ್ಲಿ ಭಾರಿ ಪ್ರಗತಿಯಾಗಿದೆ. ಕಳೆದ ಮೂರು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅಂಕಿ-ಅಂಶಗಳನ್ನು ಗಮನಿಸಿದರೆ, ದೇಶದಲ್ಲಿ ಸರಾಸರಿ 10 ಸಾವಿರ ಕಿ.ಮೀ ಹೊಸ ರಸ್ತೆ ನಿರ್ಮಾಣವಾಗುತ್ತಿದೆ..

network-of-roads-is-spreading-fast-over-30-km-national-highway-is-being-constructed-per-day
ವೇಗ ಪಡೆದುಕೊಂಡ ಹೆದ್ದಾರಿ ಕಾಮಗಾರಿ
author img

By

Published : Mar 24, 2021, 8:01 AM IST

ಹೈದರಾಬಾದ್ : ರಸ್ತೆಗಳು, ಹೆದ್ದಾರಿಗಳು ಹಳ್ಳಿ, ತಾಲೂಕು, ಜಿಲ್ಲೆಗಳಲ್ಲದೇ ದೇಶದ ರಾಜ್ಯಗಳನ್ನೆಲ್ಲ ಸಂಪರ್ಕಿಸುವ ಕೊಂಡಿ. ಈ ರಸ್ತೆಗಳು ಅಭಿವೃದ್ಧಿಯ ಮೊದಲ ಸೂಚಕಗಳಾಗಿವೆ. ಜನರು ಅವರ ದೈನಂದಿನ ಅಗತ್ಯತೆಗಳು ಮತ್ತು ಸೌಲಭ್ಯಗಳ ನಡುವಿನ ಅಂತರ ಸರಿದೂಗಿಸಲು ಇವೇ ಮಾರ್ಗಗಳು. ಇದರ ಫಲವಾಗಿ ರಾಜಕಾರಣಿಗಳು ತಮ್ಮ ಸಮೀಕ್ಷೆಯಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸುವುದನ್ನು ಪ್ರಸ್ತಾಪಿಸುತ್ತಾರೆ.

network-of-roads-is-spreading-fast-over-30-km-national-highway-is-being-constructed-per-day
ಪ್ರತಿ ನಿತ್ಯ 30 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, ದೇಶಾದ್ಯಂತ ಒಟ್ಟು 62,15,797 ಕಿ.ಮೀ ರಸ್ತೆಯಿದೆ. ಈ ಪೈಕಿ 1,36,000 ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳಾಗಿವೆ. ದೇಶದ ರಾಷ್ಟ್ರೀಯ ಹೆದ್ದಾರಿಯ ಒಟ್ಟು ಉದ್ದವು ರಸ್ತೆಗಳ ಶೇ. 2.19 ಮಾತ್ರವಾಗಿದೆ.

ಮುಂದಿನ ಮಾರ್ಚ್ 24ರಿಂದ ರಾಷ್ಟ್ರೀಯ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ಶೃಂಗಸಭೆ 2021 ಆಯೋಜಿಸಲಾಗುವುದು. ಈ ವರ್ಚುವಲ್ ಶೃಂಗಸಭೆಯಲ್ಲಿ ದೇಶದ ರಸ್ತೆಗಳ ವಿಸ್ತರಣೆ ಮತ್ತು ಗುಣಮಟ್ಟದ ಜೊತೆಗೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಗುವುದು.

ವರ್ಷದಿಂದ ವರ್ಷಕ್ಕೆ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ ಏರಿಕೆ : ಕಳೆದ ಕೆಲ ವರ್ಷದ ರಸ್ತೆ ನಿರ್ಮಾಣದ ಪ್ರಗತಿ ಗಮನಿಸಿದರೆ ವರ್ಷದಿಂದ ವರ್ಷಕ್ಕೆ ಕಾಮಗಾರಿ ಪ್ರಗತಿ ಸಾಧಿಸಿರುವುದು ಕಂಡು ಬರುತ್ತಿದೆ. ಇದರ ಪರಿಣಾಮವಾಗಿ ಟೆಂಡರ್ ಪ್ರಕ್ರಿಯೆಯಿಂದ ರಸ್ತೆಗಳ ನಿರ್ಮಾಣದವರೆಗೆ ಒಂದು ರೀತಿಯ ಉತ್ಕರ್ಷವು ಕಂಡು ಬಂದಿದೆ. ಇದು ದೇಶಾದ್ಯಂತ ರಸ್ತೆ ಜಾಲಗಳ ಹರಡುವಿಕೆಗೆ ಕಾರಣ.

ಪ್ರಸ್ತುತ ಮತ್ತು ಮುಂಬರುವ ಹಣಕಾಸು ವರ್ಷಗಳಲ್ಲಿ ರಸ್ತೆ ನಿರ್ಮಾಣವನ್ನು ನೀಡುವ ಅಂಕಿ-ಅಂಶಗಳಲ್ಲಿ ಹೆಚ್ಚಳ ಕಂಡು ಬಂದಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮುಂಬರುವ ಹಣಕಾಸು ವರ್ಷಕ್ಕೆ ಸರ್ಕಾರ ಹೆಚ್ಚಿನ ಗುರಿಗಳನ್ನು ನಿಗದಿಪಡಿಸಿದೆ. 2021-22ನೇ ಸಾಲಿನಲ್ಲಿ ಸರ್ಕಾರವು 12,000 ಕಿ.ಮೀ ರಸ್ತೆಗಳನ್ನು ನಿರ್ಮಿಸುವ ಗುರಿ ಹೊಂದಿದೆ.

ಪ್ರತಿ ನಿತ್ಯ 30 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ : ಕಳೆದ ಕೆಲವು ವರ್ಷಗಳಲ್ಲಿ ದೇಶಾದ್ಯಂತ ರಸ್ತೆ ನಿರ್ಮಾಣದಲ್ಲಿ ಭಾರಿ ಪ್ರಗತಿಯಾಗಿದೆ. ಕಳೆದ ಮೂರು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅಂಕಿ-ಅಂಶಗಳನ್ನು ಗಮನಿಸಿದರೆ, ದೇಶದಲ್ಲಿ ಸರಾಸರಿ 10 ಸಾವಿರ ಕಿ.ಮೀ ಹೊಸ ರಸ್ತೆ ನಿರ್ಮಾಣವಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಜಾಲ ಭಾರತದಾದ್ಯಂತ ಹಬ್ಬುತ್ತಿದೆ

ಪ್ರಸಕ್ತ ಹಣಕಾಸು ವರ್ಷದ ಫೆಬ್ರವರಿ 5, 2021ರವರೆಗಿನ ಅಂಕಿ-ಅಂಶಗಳ ಪ್ರಕಾರ ಒಟ್ಟು 9,242 ಕಿ.ಮೀ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಈ ರೀತಿಯಾಗಿ ಪ್ರತಿದಿನ ಸುಮಾರು 30 ಕಿ.ಮೀ (29.81 ಕಿ.ಮೀ) ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಜಾಲ ಭಾರತದಾದ್ಯಂತ ಹಬ್ಬುತ್ತಿದೆ : ರಾಷ್ಟ್ರೀಯ ಹೆದ್ದಾರಿಗಳ ಜಾಲವು ದೇಶಾದ್ಯಂತ ಹರಡುತ್ತಿದೆ. ಈ ಹೆದ್ದಾರಿಗಳ ಸಹಾಯದಿಂದ ದೇಶದ ಎಲ್ಲಾ ಭಾಗಗಳನ್ನು ಪರಸ್ಪರ ಸಂಪರ್ಕಿಸಲಾಗುತ್ತಿದೆ. ದೆಹಲಿ ಮತ್ತು ಮುಂಬೈನಂತಹ ನಗರಗಳಿಂದ ದೂರದ ಪ್ರದೇಶಗಳು ಮತ್ತು ಹಳ್ಳಿಗಳನ್ನು ಸಹ ಈ ರಸ್ತೆಗಳು ತಲುಪುತ್ತಿವೆ.

ದೇಶದ ಪ್ರತಿ ರಾಜ್ಯಗಳಲ್ಲೂ ರಾಷ್ಟ್ರೀಯ ಹೆದ್ದಾರಿಗಳು ವಿಸ್ತರಿಸುತ್ತಿವೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಬಜೆಟ್ ನಿಗದಿಪಡಿಸಲಾಗಿದೆ. ಕಳೆದ ಮೂರು ಹಣಕಾಸು ವರ್ಷಗಳ ಅಂಕಿ-ಅಂಶಗಳು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆದ್ದಾರಿಗಳ ನಿರ್ಮಾಣಕ್ಕಾಗಿ ಕಾಲಕಾಲಕ್ಕೆ ಕೋಟಿಗಳ ಲೆಕ್ಕದಲ್ಲಿ ಬಜೆಟ್‌ ನಿಗದಿಪಡಿಸಲಾಗಿದೆ ಎಂದು ತೋರಿಸುತ್ತದೆ.

ವರ್ಷದಿಂದ ವರ್ಷಕ್ಕೆ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ ಏರಿಕೆ

ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕಾಗಿ ನಿಗದಿಪಡಿಸಿದ ಬಜೆಟ್ ಮತ್ತು ಖರ್ಚಿನ ಮಾಹಿತಿಯನ್ನು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದೆ. ಅದರ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಅತಿ ಹೆಚ್ಚು ಬಜೆಟ್ ಹಂಚಿಕೆ ಮತ್ತು ಖರ್ಚು ಮಹಾರಾಷ್ಟ್ರದ ಕಿಟ್ಟಿ ನಗರದ ಪಾಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.