ETV Bharat / bharat

ಎರಡು ಲಕ್ಷ ಚಂದಾದಾರರನ್ನು ಕಳೆದುಕೊಂಡ ನೆಟ್​ಫ್ಲಿಕ್ಸ್​! ಕಾರಣವೇನು? - ನೆಟ್‌ಫ್ಲಿಕ್ಸ್ ಸುದ್ದಿ

ನೆಟ್​ಫ್ಲಿಕ್ಸ್​ನ ಪ್ರಮುಖ ಸ್ಟ್ರೀಮಿಂಗ್ ಸೇವೆಯು ಇಷ್ಟೊಂದು ಪ್ರಮಾಣದಲ್ಲಿ ಚಂದಾದಾರರನ್ನು ಕಳೆದುಕೊಂಡಿರುವುದು ಕಳೆದ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಎಂಬುದು ಆಶ್ಚರ್ಯಕರ ಸಂಗತಿ.

ನೆಟ್​ಫ್ಲಿಕ್ಸ್
ನೆಟ್​ಫ್ಲಿಕ್ಸ್
author img

By

Published : Apr 20, 2022, 3:41 PM IST

ಸ್ಯಾನ್ ಫ್ರಾನ್ಸಿಸ್ಕೋ: ಈಗ ಏನಿದ್ದರೂ ಒಟಿಟಿ ಫ್ಲಾಟ್​ಫಾರ್ಮ್​ಗಳದ್ದೇ ಹವಾ. ಮಕ್ಕಳಿಂದ ಹಿಡಿದು ವೃದ್ದರವರೆಗೂ ಅವರವರಿಗಿಷ್ಟವಾಗುವ ಸಿನಿಮಾ, ಡ್ರಾಮಾ, ಅನಿಮೇಷನ್‌, ಸಾಕ್ಷ್ಯಚಿತ್ರಗಳಂತಹ ತರಹೇವಾರಿ ಸೇವೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿವೆ. ಆದರೆ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ನೆಟ್‌ಫ್ಲಿಕ್ಸ್ ಕಂಪನಿಯು ತನ್ನ ಚಂದಾದಾರರ ಶ್ರೇಣಿಯನ್ನು ಕುಗ್ಗಿಸಿದ ನಂತರ ನೆಟ್‌ಫ್ಲಿಕ್ಸ್ ಷೇರುಗಳು ಮಂಗಳವಾರ ತಮ್ಮ ಮೌಲ್ಯದ ಕಾಲುಭಾಗವನ್ನು ಕಳೆದುಕೊಂಡಿದೆ. ಇದರ ಜೊತೆಗೆ, ಕಂಪೆನಿಯು 2 ಲಕ್ಷ ಚಂದಾದಾರರನ್ನೂ ಕಳೆದುಕೊಂಡಿದೆ.

ನೆಟ್​ಫ್ಲಿಕ್ಸ್​ನ ಪ್ರಮುಖ ಸ್ಟ್ರೀಮಿಂಗ್ ಸೇವೆಯು ಇಷ್ಟೊಂದು ಪ್ರಮಾಣದಲ್ಲಿ ಚಂದಾದಾರರನ್ನು ಕಳೆದುಕೊಂಡಿರುವುದು ಕಳೆದ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಎಂಬುದು ಆಶ್ಚರ್ಯಕರ ಸಂಗತಿ. ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣದಿಂದಾಗಿ ಅಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿರುವುದು ಕೂಡಾ ನಷ್ಟಕ್ಕೆ ಕಾರಣ ಎಂದು ಕಂಪೆನಿ ಹೇಳಿಕೊಂಡಿದೆ.

ನೆಟ್‌ಫ್ಲಿಕ್ಸ್ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 221.6 ಮಿಲಿಯನ್ ಚಂದಾದಾರರನ್ನು ಹೊಂದಿತ್ತು. ಇದು ಕಳೆದ ವರ್ಷದ ಅಂತಿಮ ತ್ರೈಮಾಸಿಕಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಅಮೆರಿಕದ ಸಿಲಿಕಾನ್ ವ್ಯಾಲಿಯ ಈ ಟೆಕ್ ಸಂಸ್ಥೆಯು ಇತ್ತೀಚೆಗೆ ಕೊನೆಗೊಂಡ ತ್ರೈಮಾಸಿಕದಲ್ಲಿ $1.6 ಶತಕೋಟಿ ನಿವ್ವಳ ಆದಾಯವನ್ನು ವರದಿ ಮಾಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ $1.7 ಶತಕೋಟಿಗೆ ಹೋಲಿಸಿದರೆ, ಗಳಿಕೆಯ ಅಂಕಿಅಂಶಗಳ ಬಿಡುಗಡೆಯ ನಂತರದ ಮಾರುಕಟ್ಟೆ ವಹಿವಾಟಿನಲ್ಲಿ ನೆಟ್‌ಫ್ಲಿಕ್ಸ್ ಷೇರುಗಳು ಸುಮಾರು 25 ಶೇಕಡಾ ಕಡಿಮೆಯಾಗಿ $262 ಕ್ಕೆ ತಲುಪಿದ್ದವು ಎಂಬುದು ಗಮನಾರ್ಹ.

2020ರಲ್ಲಿ ಕೋವಿಡ್​ ಕಾರಣಕ್ಕೆ ನಮ್ಮ ಬೆಳವಣಿಗೆ ಗಣನೀಯವಾಗಿ ಹೆಚ್ಚಳವಾಯಿತು. ಆದರೆ, 2021ರಲ್ಲಿ ನಮ್ಮ ನಿಧಾನಗತಿಯ ಬೆಳವಣಿಗೆಯು ಚಂದಾದಾರರನ್ನು ಕಳೆದುಕೊಳ್ಳುವಂತಾಯಿತು. ಅಲ್ಲದೇ, ಕೈಗೆಟುಕುವ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆ ಮತ್ತು ಸ್ಮಾರ್ಟ್ ಟೆಲಿವಿಷನ್‌ಗಳಿಗೆ ಪ್ರವೇಶವನ್ನು ಪಡೆಯಲು ತೆಗೆದುಕೊಳ್ಳುವ ಸಮಯ ತನ್ನ ಬೆಳವಣಿಗೆಗೆ ಅಡ್ಡಿಪಡಿಸುವ ಅಂಶಗಳಾಗಿರುತ್ತವೆ ಎಂದು ನೆಟ್‌ಫ್ಲಿಕ್ಸ್ ಹೇಳಿಕೊಂಡಿದೆ. ಅಲ್ಲದೇ, ಚಂದಾದಾರರು ತಮ್ಮ ಸ್ನೇಹಿತರೊಂದಿಗೆ ಖಾತೆಯನ್ನು ಹಂಚಿಕೊಳ್ಳುತ್ತಿರುವುದು ಆದಾಯ ನಷ್ಟಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಬೈಕ್‌ ಇಂಜಿನ್‌ನಿಂದ ಕ್ಲಾಸಿಕ್ ಜೀಪ್ ಸಿದ್ಧಪಡಿಸಿದ ಮೆಕ್ಯಾನಿಕ್​ : ಪ್ರತಿ ಲೀಟರ್ ಪೆಟ್ರೋಲ್​ಗೆ ಮೈಲೇಜ್​ ಎಷ್ಟು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.