ಪ್ರಯಾಗರಾಜ್: ಉತ್ತರಪ್ರದೇಶ ಜ್ಞಾನವಾಪಿ ಮಸೀದಿ ಆವರಣದಲ್ಲಿ ಸಿಕ್ಕಿರುವ ವಿವಾದಿತ ಶಿವಲಿಂಗಕ್ಕೆ ಪೂಜೆ, ಜಲಾಭಿಷೇಕ ಮಾಡಲು ಹೊರಟಿದ್ದ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಮರಿ ಮೊಮ್ಮಗಳಾದ ರಾಜಶ್ರೀ ಚೌಧರಿ ಅವರನ್ನು ಪೊಲೀಸರ ವಶಕ್ಕೆ ಪಡೆದು ಗೃಹ ಬಂಧನ ವಿಧಿಸಿದ್ದಾರೆ.
ದೆಹಲಿಯಿಂದ ರೈಲು ಮುಖಾಂತರ ವಾರಾಣಸಿಗೆ ಹೊರಟಿದ್ದ ಹಿಂದೂ ಮಹಸಭಾ ರಾಷ್ಟ್ರೀಯ ಅಧ್ಯಕ್ಷೆಯಾಗಿರುವ ರಾಜಶ್ರೀ ಚೌಧರಿ ಅವರನ್ನು ಸಂಗಮ್ ನಗರದಲ್ಲಿಯೇ ತಡೆಯಲಾಗಿದೆ. ಪ್ರಯಾರಾಜ್ ಜಂಕ್ಷನ್ ಬಳಿ ಅವರನ್ನು ರೈಲಿನಿಂದ ಕೆಳಗಿಳಿಸಿ ಪೊಲೀಸ್ ಅತಿಥಿ ಗೃಹಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದ್ದು, ಖಾಕಿ ಪಡೆ ಅವರ ಮೇಲೆ ನಿಗಾ ಇಟ್ಟಿದೆ.
ಇಂದು ಶ್ರಾವಣದ ಸೋಮವಾರವಾದ ಕಾರಣ ಶಿವಲಿಂಗಕ್ಕೆ ಪೂಜೆ ಮಾಡುವುದಾಗಿ ರಾಜಶ್ರೀ ಅವರು ಘೋಷಿಸಿದ್ದರು. ಇದು ವಿವಾದ ಉಂಟಾಗದಂತೆ ತಡೆಯಲು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗ ಮತ್ತು ಆ ಸ್ಥಳವನ್ನು ಯಥಾವತ್ತಾಗಿ ಕಾಪಾಡಲು ಸುಪ್ರೀಂಕೋರ್ಟ್ ಸೂಚಿಸಿದೆ. ಅಲ್ಲದೇ, ಈ ಬಗ್ಗೆ ವಾರಾಣಸಿ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಶಿವಲಿಂಗಕ್ಕೆ ಪೂಜಾ ಕೈಂಕರ್ಯಗಳನ್ನು ಸದ್ಯಕ್ಕೆ ನಡೆಸದಂತೆ ಸೂಚಿಸಲಾಗಿದೆ. ಮಸೀದಿಯಲ್ಲಿ ಪ್ರಾರ್ಥನೆಗೆ ಅಡ್ಡಿಯುಂಟು ಮಾಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಓದಿ: ಎಸ್‌ಪಿ ನಾಯಕರ ಕಾರ್ಗೆ ಡಿಕ್ಕಿ ಹೊಡೆದು 500 ಮೀಟರ್‌ಗಳವರೆಗೆ ಎಳೆದೊಯ್ದ ಟ್ರಕ್! ವಿಡಿಯೋ..