ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸ್ನೇಹಿತೆಯ ವಿವಾಹ ಕಾರ್ಯಕ್ರಮವೊಂದಕ್ಕೆ ನೇಪಾಳದ ಕಠ್ಮಂಡುವಿಗೆ ಭೇಟಿ ನೀಡಿದ್ದ ಫೋಟೋವನ್ನು ನೇಪಾಳಿ ಗಾಯಕಿ ಸರಸ್ವತಿ ಖತ್ರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಕಾಂಗ್ರೆಸ್ ನಾಯಕನನ್ನು ಸರಳ, ವಿನೀತ ಸ್ವಭಾವದ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.
-
Music has the power to bring all people together. I had an honor to sing few songs for Honorable member of Indian Parliament member Mr. Rahul Gandhi ji yesterday evening. I found him such humble & simple person.
— Saraswoti khatri (@saraswotikhtri) May 4, 2022 " class="align-text-top noRightClick twitterSection" data="
Thanks to Sumnima ji, Nima Ji for this opportunity. pic.twitter.com/QbAZ9TEmLh
">Music has the power to bring all people together. I had an honor to sing few songs for Honorable member of Indian Parliament member Mr. Rahul Gandhi ji yesterday evening. I found him such humble & simple person.
— Saraswoti khatri (@saraswotikhtri) May 4, 2022
Thanks to Sumnima ji, Nima Ji for this opportunity. pic.twitter.com/QbAZ9TEmLhMusic has the power to bring all people together. I had an honor to sing few songs for Honorable member of Indian Parliament member Mr. Rahul Gandhi ji yesterday evening. I found him such humble & simple person.
— Saraswoti khatri (@saraswotikhtri) May 4, 2022
Thanks to Sumnima ji, Nima Ji for this opportunity. pic.twitter.com/QbAZ9TEmLh
"ಸಂಗೀತಕ್ಕೆ ಜನರನ್ನು ಒಟ್ಟಿಗೆ ಸೇರಿಸುವ ಶಕ್ತಿ ಇದೆ. ನಿನ್ನೆ ಸಂಜೆ ಭಾರತೀಯ ಸಂಸತ್ತಿನ ಗೌರವಾನ್ವಿತ ಸದಸ್ಯ ಶ್ರೀ ರಾಹುಲ್ ಗಾಂಧಿ ಜೀ ಅವರಿಗೆ ಕೆಲವು ಹಾಡುಗಳನ್ನು ಹಾಡುವ ಅವಕಾಶ ನನಗೆ ಸಿಕ್ಕಿತು. ಅತ್ಯಂತ ವಿನಮ್ರ ಮತ್ತು ಸರಳ ವ್ಯಕ್ತಿಯನ್ನು ನೋಡಿ ಬಹಳ ಸಂತಸವಾಯಿತು. ಇದಕ್ಕೆ ಅವಕಾಶ ಕಲ್ಪಿಸಿಕೊಟ್ಟ ಸುಮ್ನಿಮಾ ಜಿ, ನಿಮಾ ಜಿ ಅವರಿಗೆ ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.
ರಾಹುಲ್ ನೇಪಾಳ ಭೇಟಿ ವಿವಾದ: ನೇಪಾಳದ ನೈಟ್‌ಕ್ಲಬ್‌ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ್ದ 2 ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದವು. ಈ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಟ್ವೀಟಾಟಿಕೆ ನಡೆದಿತ್ತು. 'ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೊಳ್ಳುವ ನಾಯಕ ನೈಟ್‌ಕ್ಲಬ್‌ಗಳಲ್ಲಿ ತಿರುಗುತ್ತಿದ್ದಾರೆ' ಎಂಬ ಟೀಕೆಯನ್ನು ಬಿಜೆಪಿ ಮಾಡಿದ್ರೆ, ಕಾಂಗ್ರೆಸ್ 'ಅದೊಂದು ವೈಯಕ್ತಿಕ ಭೇಟಿಯಾಗಿದೆ' ಎಂದು ಪ್ರತಿಕ್ರಿಯಿಸಿತು. ಈ ಬೆನ್ನಲ್ಲೇ ರಾಹುಲ್ ಗಾಂಧಿ, ತಮ್ಮ ಸ್ನೇಹಿತೆ ಸುಮ್ನಿಮಾ ಉದಾಸ್ ಅವರ ಮದುವೆಗೆ ತೆರಳಿದ್ದೆ ಎಂದು ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ: ನೈಟ್‌ಕ್ಲಬ್‌ನಲ್ಲಿ ರಾಹುಲ್ ಗಾಂಧಿ ವಿಡಿಯೋ: ಮದುವೆಯಲ್ಲಿ ಭಾಗವಹಿಸುವುದು ಅಪರಾಧವೇ ಎಂದ ಕಾಂಗ್ರೆಸ್