ತಿರುವನಂತಪುರ: ಕನ್ಯಾಕುಮಾರಿಯಲ್ಲಿ ಮಹಿಳೆಯೋರ್ವಳು ನಾಲ್ಕು ವರ್ಷದ ಬಾಲಕನನ್ನು ಕೊಂದು ಬೀರುವಿನಲ್ಲಿಟ್ಟಿರುವ ಭಯಾನಕ ಘಟನೆ ಜರುಗಿದೆ.
ಕಡಿಯಾಪಟ್ಟಣಂ ಬಳಿ ಈ ಘಟನೆ ನಡೆದಿದೆ. ಘಟನೆ ಬಳಿಕ ನೆರೆಮನೆಯ ಫಾತಿಮಾಳನ್ನು ಪೊಲೀಸರು ಬಂಧಿಸಿದ್ದಾರೆ.
ಮಗುವಿನ ದೇಹದಲ್ಲಿದ್ದ ಚಿನ್ನವನ್ನು ಕದ್ದ ನಂತರ ಫಾತಿಮಾ ಮಗುವಿನ ಬಾಯಿಗೆ ಬಟ್ಟೆ ಹಾಕಿ ಕಬ್ಬಿಣದ ಕಪಾಟಿನಲ್ಲಿ ಇರಿಸಿದ್ದಳು. ಬಾಲಕ ನಾಪತ್ತೆಯಾದ ಹಿನ್ನೆಲೆಯಲ್ಲಿ ಫಾತಿಮಾಳನ್ನು ವಿಚಾರಣೆಗೊಳಪಡಿಸಿದ ಘಟನೆ ಬೆಳಕಿಗೆ ಬಂದಿದೆ.
ಫಾತಿಮಾಳ ಮನೆಯನ್ನು ಸ್ಥಳೀಯರು ಧ್ವಂಸಗೊಳಿಸಿದ್ದಾರೆ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ