ETV Bharat / bharat

ಯುವ ವೈದ್ಯರನ್ನ ಫುಟ್ಬಾಲ್​​ ರೀತಿ ನಡೆಸಿಕೊಳ್ಳಬೇಡಿ : ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ಚಾಟಿ - ನೀಟ್ ಪರೀಕ್ಷೆ ಮುಂದೂಡಿಕೆ

ಅನೇಕ ತಿಂಗಳಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಿರುತ್ತಾರೆ. ಪರಿಕ್ಷೆಯನ್ನ ಕೊನೆ ಕ್ಷಣದಲ್ಲಿ ಬದಲಾವಣೆ ಮಾಡುವ ಕಾರಣವೇನು? ಮುಂದಿನ ವರ್ಷ ಆ ರೀತಿಯ ಬದಲಾವಣೆ ಮಾಡಬಹುದಲ್ಲವೇ? ಎಂದು ಪ್ರಶ್ನೆ ಮಾಡಿದೆ ಸುಪ್ರೀಂಕೋರ್ಟ್..

NEET Exam
NEET Exam
author img

By

Published : Sep 27, 2021, 8:37 PM IST

ನವದೆಹಲಿ : ಕೊನೆ ಕ್ಷಣದಲ್ಲಿ ನೀಟ್ ಪರೀಕ್ಷೆ ಮುಂದೂಡಿಕೆ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್​ ತರಾಟೆ ತೆಗೆದುಕೊಂಡಿದೆ. ಯುವ ವೈದ್ಯರನ್ನ ಫುಟ್ಬಾಲ್​​ನಂತೆ ನಡೆಸಿಕೊಳ್ಳಬೇಡಿ ಎಂದು ಚಾಟಿ ಬೀಸಿದೆ.

NEET Exam
ಕೇಂದ್ರದ ವಿರುದ್ಧ ಸುಪ್ರೀಂಕೋರ್ಟ್​​ ಚಾಟಿ

ವೈದ್ಯಕೀಯ ಕೋರ್ಸ್​​ಗಳಿಗಾಗಿ ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(NEET) ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಿದ್ದಕ್ಕಾಗಿ ಸುಪ್ರೀಂಕೋರ್ಟ್​ ಗರಂ ಆಗಿದೆ. ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕಿದೆ.

ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್​​ ಮತ್ತು ಬಿ ವಿ ನಾಗರತ್ನ ಅವರ ಪೀಠವು ವೈದ್ಯಕೀಯ ಮಂಡಳಿ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದೆ. 40ಕ್ಕೂ ಅಧಿಕ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಸಲ್ಲಿಕೆ ಮಾಡಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ವೇಳೆ ಸುಪ್ರೀಂಕೋರ್ಟ್​ ಈ ರೀತಿ ಹೇಳಿದೆ.

ಅನೇಕ ತಿಂಗಳಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಿರುತ್ತಾರೆ. ಪರಿಕ್ಷೆಯನ್ನ ಕೊನೆ ಕ್ಷಣದಲ್ಲಿ ಬದಲಾವಣೆ ಮಾಡುವ ಕಾರಣವೇನು? ಮುಂದಿನ ವರ್ಷ ಆ ರೀತಿಯ ಬದಲಾವಣೆ ಮಾಡಬಹುದಲ್ಲವೇ? ಎಂದು ಪ್ರಶ್ನೆ ಮಾಡಿದೆ.

ಇದನ್ನೂ ಓದಿರಿ: ಪುದುಚೇರಿಯಿಂದ ರಾಜ್ಯಸಭೆಗೆ ಮೊದಲ ಬಿಜೆಪಿ ಸದಸ್ಯ ಆಯ್ಕೆ.. ಇದು ಐತಿಹಾಸಿಕ..

ಅಧಿಕಾರವಿದೆ ಎಂಬ ಮಾತ್ರಕ್ಕೆ ಈ ರೀತಿಯಾಗಿ ನಡೆದುಕೊಳ್ಳುವುದು ಸರಿಯಲ್ಲ. ಯುವ ವೈದ್ಯರನ್ನ ನಿಮ್ಮ ಅಧಿಕಾರದಲ್ಲಿ ಫುಟ್ಬಾಲ್​ ರೀತಿ ಬಳಕೆ ಮಾಡಿಕೊಳ್ಳಬೇಡಿ. ಇದು ಅವರ ವೈದ್ಯಕೀಯ ವೃತ್ತಿಗೆ ಗೊಂದಲವನ್ನುಂಟು ಮಾಡುತ್ತದೆ ಎಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.