ETV Bharat / bharat

ಸ್ವರ್ಣ'ಬಾಹು' ನೀರಜ್‌ ಚೋಪ್ರಾ ಆರಂಭಿಕ ಕೋಚ್‌ ಈ ಕನ್ನಡಿಗ.. ಅವರು ಕ್ರೀಡೆ ಬಗ್ಗೆ ಹೀಗಂತಾರೆ.. - ಟೋಕಿಯೊ ಒಲಿಂಪಿಕ್​ 2020

ಕೋಚ್​ ಆದ ಬಳಿಕ ಮೊದಲ ಬಾರಿ ನನ್ನನ್ನು ಗುರ್ತಿಸಿ ಸನ್ಮಾನಿಸುತ್ತಿರುವ ಸಿಎಂ ಬಸವರಾಜ್​ ಬೊಮ್ಮಾಯಿ, ಕ್ರೀಡಾ ಸಚಿವ ನಾರಾಯಣಗೌಡರು ಹಾಗೂ ಎಲ್ಲಾ ಮಾಧ್ಯಮದವರಿಗೆ ಧನ್ಯವಾದ ಎಂದ್ರು. ಕರ್ನಾಟಕ ಸರ್ಕಾರ ನನಗೆ ಈಗ ಘೋಷಿಸಿರುವ 10 ಲಕ್ಷ ರೂ. ಪ್ರೋತ್ಸಾಹಧನ ನನ್ನ ಶ್ರದ್ಧೆ ಹಾಗೂ ಪರಿಶ್ರಮಕ್ಕೆ ತಕ್ಕ ಪ್ರತಿಫಲ..

Neeraj chopra coach Kashinath reaction about Karnataka Govt cash prize
ನೀರಜ್​ ಕೋಚ್​ ಕಾಶಿನಾಥ್ ಮಾತು
author img

By

Published : Aug 8, 2021, 7:19 PM IST

ಜಗದ್ವಿಖ್ಯಾತ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್​ ಚೋಪ್ರಾ ಒಲಿಪಿಂಕ್​ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದಾರೆ. ಅವರ ಸಾಧನೆಯ ಹಿಂದಿನ ಶಕ್ತಿ ಎನಿಸಿರುವ ಕನ್ನಡಿಗ ಕಾಶಿನಾಥ್​ ನಾಯ್ಕ ಅವರಿಗೆ ಕರ್ನಾಟಕ ಸರ್ಕಾರ ₹10 ಲಕ್ಷ ಪ್ರೋತ್ಸಾಹಧನ ಘೋಷಿಸಿದೆ. ಈ ಬಗ್ಗೆ ಕಾಶಿನಾಥ್​ ಸಂತಸ ವ್ಯಕ್ತಪಡಿಸಿದ್ದಾರೆ.

ವೀರ'ಬಾಹು' ನೀರಜ್ ಚೋಪ್ರಾಗೆ ಆರಂಭಿಕ ಗುರು ದ್ರೋಣಾಚಾರ್ಯ ಕಾಶಿನಾಥ್‌ರ ಮಾತು..

ನೀರಜ್​ ಒಲಿಂಪಿಕ್​ನಲ್ಲಿ ಬಂಗಾರದ ಪದಕ ಗೆದ್ದ ಬಳಿಕ ಅವರ ತರಬೇತುದಾರರಾಗಿದ್ದ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಾಶಿನಾಥ್ ಅವರು ಭಾರೀ ಸುದ್ದಿಯಲ್ಲಿದ್ದಾರೆ. ಇನ್ನು, ತಮ್ಮನ್ನು ಗುರುಸಿಸಿ ರಾಜ್ಯ ಸರ್ಕಾರ ಪ್ರೋತ್ಸಾಹಧನ ಘೋಷಣೆ ಮಾಡಿದ್ದಕ್ಕಾಗಿ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕ್ರೀಡಾ ಸಚಿವರಿಗೂ ಕಾಶಿನಾಥ್‌ ಅವರು ಧನ್ಯವಾದ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕಾಶಿನಾಥ್ ಅವರು​, ನೀರಜ್​ ಚೋಪ್ರಾ ಗೋಲ್ಡ್​ ಮೆಡಲ್​ ಪಡೆದ ಬಳಿಕ ನನಗೆ ಸಾಕಷ್ಟು ಮೆಸೇಜ್​ಗಳು, ಕರೆಗಳು ಬರುತ್ತಿವೆ. ನೀರಜ್​ಗೆ ನಾನು 2013ರಿಂದ 2017ರವರೆಗೆ ಜಾವೆಲಿನ್​ ಥ್ರೋ ಕೋಚ್ ಆಗಿದ್ದೆ. ನೀರಜ್​ ಅಷ್ಟೇ ಅಲ್ಲ, ಅನುರಾಣಿ, ಶಿವಪಾಲ್​ ಸಿಂಗ್​, ದೇವೇಂದ್ರ ಸಿಂಗ್​ ಸೇರಿದಂತೆ ನಾನು ತರಬೇತಿ ನೀಡಿದ್ದ ಸಾಕಷ್ಟು ಮಂದಿ ಜೂನಿಯರ್​ ಮೆಡಲಿಸ್ಟ್​ ಆಗಿದ್ದಾರೆ ಎಂದ್ರು.

ಆದರೆ, ಇವರೆಲ್ಲರ ಸಾಧನೆಯ ಹಿಂದೆ ಒಬ್ಬ ಗುರುವಿನ ಶ್ರದ್ಧೆ, ಪರಿಶ್ರಮ ಎಷ್ಟಿರುತ್ತದೆ ಎಂಬುದು ಯಾರಿಗೂ ಕಾಣಿಸುತ್ತಿಲ್ಲ ಎಂದು ನಾನು ಭಾವಿಸಿದ್ದೆ. 2010ರಲ್ಲಿ ನಾನು ಕಾಮನ್​ವೆಲ್ತ್‌ನಲ್ಲಿ ಪದಕ ಗೆದ್ದಾಗ, ಕರ್ನಾಟಕ ಸರ್ಕಾರ ಹಾಗೇ ಕೇಂದ್ರ ಸರ್ಕಾರ ಕರೆದು ಸನ್ಮಾನ ಮಾಡಿದ್ದವು. ಆದ್ರೆ, ನಾನು ಕೋಚ್​ ಆದ ಮೇಲೆ ನನಗೆ ಯಾವುದೇ ಸನ್ಮಾನ ದೊರೆತಿಲ್ಲ. ಹೀಗಾಗಿ, ಸಾಧಕರಿಗಷ್ಟೇ ಸನ್ಮಾನವೇ?ಗುರುವಿನ ಪರಿಶ್ರಮ ಯಾರೂ ಗುರ್ತಿಸುವುದಿಲ್ಲವೇ ಎನಿಸಿತ್ತು.

ಆದರೆ, ಕೋಚ್​ ಆದ ಬಳಿಕ ಮೊದಲ ಬಾರಿ ನನ್ನನ್ನು ಗುರ್ತಿಸಿ ಸನ್ಮಾನಿಸುತ್ತಿರುವ ಸಿಎಂ ಬಸವರಾಜ್​ ಬೊಮ್ಮಾಯಿ, ಕ್ರೀಡಾ ಸಚಿವ ನಾರಾಯಣಗೌಡರು ಹಾಗೂ ಎಲ್ಲಾ ಮಾಧ್ಯಮದವರಿಗೆ ಧನ್ಯವಾದ ಎಂದ್ರು. ಕರ್ನಾಟಕ ಸರ್ಕಾರ ನನಗೆ ಈಗ ಘೋಷಿಸಿರುವ 10 ಲಕ್ಷ ರೂ. ಪ್ರೋತ್ಸಾಹಧನ ನನ್ನ ಶ್ರದ್ಧೆ ಹಾಗೂ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಎಂದು ಕಾಶಿನಾಥ್​ ಹೇಳಿದ್ರು.

ಇದನ್ನೂ ಓದಿ : ಭಾರತ 'ಸ್ವರ್ಣ'ಮಯವಾಗಿಸಿದ ಸುಬೇದಾರ್ ನೀರಜ್​ಗೆ ಕನ್ನಡಿಗನೇ ಗುರು 'ದ್ರೋಣಾಚಾರ್ಯ'..

ನಾನು ಎಲ್ಲರಲ್ಲಿಯೂ ಕೇಳಿಕೊಳ್ಳುವುದಿಷ್ಟೇ, ಮುಂದೆ ಯಾರೇ ಸಾಧನೆ ಮಾಡಲಿ ಅವರ ಗೆಲುವಿನ ಹಿಂದಿನ ಶಕ್ತಿಯಾಗಿರುವ ಗುರುಗಳಿಗೂ ಸನ್ಮಾನ ದೊರೆಯುವಂತಾಗಬೇಕು. ಹೀಗೆ ಮಾಡಿದ್ರೆ ಗುರುವಿಗೂ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದಂತಾಗುತ್ತದೆ, ಅವರನ್ನು ಹುರಿದುಂಬಿಸಿದಂತಾಗುತ್ತೆ. ಆಗ ಅವರು ನಮ್ಮ ದೇಶಕ್ಕೆ ಇನ್ನಷ್ಟು ಒಲಿಂಪಿಕ್​ ಮೆಡಲ್​ ತರಲು ಸಾಧ್ಯವಾಗುತ್ತೆ ಎಂದ್ರು.

ಇದನ್ನೂ ಓದಿ:ಕಾರಿನಿಂದ ಕ್ಯಾಷ್‌ಪ್ರೈಸ್‌ವರೆಗೂ.. ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.