ಪಾಣಿಪತ್ (ಹರಿಯಾಣ): ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ ಸೇರಿದ ಕಾರಿಗೆ ಹರಿಯಾಣದ ಸಾರಿಗೆ ಬಸ್ ಡಿಕ್ಕಿ ಹೊಡೆದ ಘಟನೆ ಪಾಣಿಪತ್ನಲ್ಲಿ ನಡೆದಿದೆ. ಆದರೆ, ನೀರಜ್ ಚೋಪ್ರಾ ಇರಲಿಲ್ಲ. ಅವರ ಚಿಕ್ಕಪ್ಪ ಭೀಮ್ ಚೋಪ್ರಾ ಪ್ರಯಾಣಿಸುತ್ತಿದ್ದರು. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನೀರಜ್ ಚೋಪ್ರಾ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಾಗ ಈ ಕಾರನ್ನು ಉಡುಗೊರೆಯಾಗಿ ಪಡೆದರು. ಶುಕ್ರವಾರ ಚಿಕ್ಕಪ್ಪ ಭೀಮ್ ಚೋಪ್ರಾ ಕಾರು ತೆಗೆದುಕೊಂಡು ಹೊರ ಬಂದಾಗ ಮಾರ್ಗ ಮಧ್ಯೆ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದ ಚಿಕ್ಕಪ್ಪನಿಗೆ ಯಾವುದೇ ಗಾಯಗಳು ಆಗಿಲ್ಲ.
ಆದರೆ, ಈ ಅಪಘಾತದ ನಂತರ ಬಸ್ ಚಾಲಕ ಮತ್ತು ಭೀಮ್ ಚೋಪ್ರಾ ನಡುವೆ ವಾಗ್ವಾದ ನಡೆದಿದೆ. ಇದರ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇನ್ನು, ಭೀಮ್ ಚೋಪ್ರಾ ಅವರು ನೀರಜ್ ಚೋಪ್ರಾ ಚಿಕ್ಕಪ್ಪ ಎಂದು ತಿಳಿದ ಬಳಿಕ ಚಾಲಕ ತಪ್ಪಾಗಿದೆ ಎಂದು ಕೈ ಮುಗಿದ್ದು, ಇದರಿಂದ ಈ ಪ್ರಕರಣ ಅಲ್ಲಿಯೇ ಸುಖಾಂತ್ಯವಾಗಿದೆ. ಜೊತೆಗೆ ಪೊಲೀಸರು ಸಹ ಯಾವುದೇ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಬದಲಾವಣೆ ತರಬೇಕು: ಬೇಕಾದರೆ ಯುಪಿಯಿಂದ ಬುಲ್ಡೋಜರ್ ಕಳುಹಿಸುತ್ತೇನೆ ಎಂದ ಕಂಗನಾ