ಗಾಜಿಪುರ (ಉತ್ತರಪ್ರದೇಶ) : ಗಂಗಾ ನದಿಯಲ್ಲಿ ಮೃತದೇಹಗಳು ತೇಲಿ ಬರುತ್ತಲೇ ಇವೆ. ಗಾಜಿಪುರದ ಗಹ್ಮಾರ್ ಗ್ರಾಮದ ಬಳಿಯ ಗಂಗಾ ನದಿಯಲ್ಲಿ ಇಂದು ಬೆಳಗ್ಗೆ 50 ಶವಗಳನ್ನು ಹೊರ ತೆಗೆಯಲಾಗಿದೆ.
ಕೆಲವು ದೇಹಗಳು ಅರೆ ಬೆಂದ ಸ್ಥಿತಿಯಲ್ಲಿದ್ದರೆ, ಇನ್ನೂ ಕೆಲವು ಕೊಳೆತು ನಾರುತ್ತಿವೆ. ಶವಗಳು ಕೋವಿಡ್ ಸೋಂಕಿತರದ್ದೋ, ಇಲ್ಲವೋ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ:ಮೃತಪಟ್ಟವರೆಲ್ಲರೂ ಗೌರವಯುತ ಅಂತ್ಯಸಂಸ್ಕಾರಕ್ಕೆ ಅರ್ಹರು: ಯುಪಿ ಸಿಎಂ
ನದಿಗಳಲ್ಲಿ ಶವಗಳನ್ನ ಎಸೆಯುವುದನ್ನು ತಡೆಯುವ ನಿಟ್ಟಿನಲ್ಲಿ ನಿನ್ನೆಯಷ್ಟೇ (ಮೇ 14) ಸಿಎಂ ಯೋಗಿ ಆದಿತ್ಯನಾಥ್, ನದಿಗಳ ದಡದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ದಳ (ಎಸ್‌ಡಿಆರ್‌ಎಫ್) ಹಾಗೂ ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆಗೆ ಗಸ್ತು ತಿರುಗಲು ಆದೇಶಿಸಿದ್ದರು.
ಅಲ್ಲದೆ ಸಾವಿಗೀಡಾಗುವವರೆಲ್ಲರೂ ಗೌರವಯುತ ಅಂತ್ಯಸಂಸ್ಕಾರಕ್ಕೆ ಅರ್ಹರು ಎಂದು ಘೋಷಿಸಿದ್ದರು. ಈ ಮಧ್ಯೆಯೂ ಸಾಲು ಸಾಲು ಹೆಣಗಳು ತೇಲಿ ಬರುತ್ತಿರೋದು ಜನರಲ್ಲಿ ಹೆಚ್ಚಿನ ಆತಂಕ ಮೂಡಿಸಿದೆ.