ಇಂಫಾಲ (ಮಣಿಪುರ): ಹಿಂಸಾಚಾರಪೀಡಿತ ಮಣಿಪುರದಲ್ಲಿ ಆಳಿಡತಾರೂಢ ಬಿಜೆಪಿಗೆ ಹಿನ್ನಡೆಯಾಗಿದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಕುಕಿ ಪೀಪಲ್ಸ್ ಅಲಾಯನ್ಸ್ (ಕೆಪಿಎ) ಪಕ್ಷ ಸಿಎಂ ಎನ್. ಬಿರೇನ್ ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿದೆ.
ಮಣಿಪಾಲದಲ್ಲಿ ಕೆಪಿಎ ಇಬ್ಬರು ಶಾಸಕರನ್ನು ಹೊಂದಿದೆ. ಸರ್ಕಾರದಿಂದ ಬೆಂಬಲ ವಾಪಸ್ ಪಡೆಯುವ ಬಗ್ಗೆ ರಾಜ್ಯಪಾಲೆ ಅನುಸೂಯಾ ಉಯ್ಕೆ ಅವರಿಗೆ ಪಕ್ಷದ ಅಧ್ಯಕ್ಷ ಟಾಂಗ್‌ಮಾಂಗ್ ಹಾಕಿಪ್ ಪತ್ರ ಬರೆದಿದ್ದಾರೆ. ''ಸದ್ಯದ ಸಂಘರ್ಷವನ್ನು ಜಾಗರೂಕತೆಯಿಂದ ಪರಿಗಣಿಸಿದ್ದು, ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ನೇತೃತ್ವದ ಮಣಿಪುರ ಸರ್ಕಾರಕ್ಕೆ ಬೆಂಬಲ ಮುಂದುವರೆಸುವುದರಲ್ಲಿ ಯಾವುದೇ ಅರ್ಥವಿಲ್ಲ. ಅದರಂತೆ ಕೆಪಿಎ ಬೆಂಬಲ ಹಿಂಪಡೆದಿದೆ'' ಎಂದು ಪತ್ರದಲ್ಲಿ ತಿಳಿಸಿದ್ದಾರೆ.
-
STORY | NDA partner KPA withdraws support from Biren Singh govt in Manipur
— Press Trust of India (@PTI_News) August 6, 2023 " class="align-text-top noRightClick twitterSection" data="
READ: https://t.co/p8I7jgaLFk pic.twitter.com/n2G9HT58c0
">STORY | NDA partner KPA withdraws support from Biren Singh govt in Manipur
— Press Trust of India (@PTI_News) August 6, 2023
READ: https://t.co/p8I7jgaLFk pic.twitter.com/n2G9HT58c0STORY | NDA partner KPA withdraws support from Biren Singh govt in Manipur
— Press Trust of India (@PTI_News) August 6, 2023
READ: https://t.co/p8I7jgaLFk pic.twitter.com/n2G9HT58c0
ಮಣಿಪುರ ವಿಧಾನಸಭೆ- ಬಲಾಬಲ: 60 ಸದಸ್ಯರ ಸಂಖ್ಯಾಬಲದ ಮಣಿಪುರ ವಿಧಾನಸಭೆಯಲ್ಲಿ ಕೆಪಿಎ ಪಕ್ಷದ ಸೈಕುಲ್ ಕ್ಷೇತ್ರದ ಕಿಮ್ನಿಯೊ ಹಾಕಿಪ್ ಹ್ಯಾಂಗ್‌ಶಿಂಗ್ ಮತ್ತು ಸಿಂಘತ್ ಕ್ಷೇತ್ರದ ಚಿನ್ಲುಂಥಾಂಗ್ ಎಂಬ ಇಬ್ಬರು ಶಾಸಕರಿದ್ದಾರೆ. ಆಳಿಡಳಿತಾರೂಢ ಬಿಜೆಪಿ 32 ಶಾಸಕರನ್ನು ಹೊಂದಿದೆ. ಎನ್ಪಿಎಫ್ನ ಐವರು ಶಾಸಕರು ಮತ್ತು ಮೂವರು ಪಕ್ಷೇತರ ಶಾಸಕರ ಬೆಂಬಲವನ್ನು ಬಿಜೆಪಿ ಹೊಂದಿದೆ. ವಿರೋಧ ಪಕ್ಷದಲ್ಲಿ ಎನ್‌ಪಿಪಿಯ ಏಳು, ಕಾಂಗ್ರೆಸ್‌ನ ಐವರು ಮತ್ತು ಜೆಡಿಯುನ ಆರು ಮಂದಿ ಶಾಸಕರು ಇದ್ದಾರೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಆಗಸ್ಟ್ 21ರಂದು ಅಧಿವೇಶನ ಕರೆಯುವಂತೆ ರಾಜ್ಯಪಾಲರಿಗೆ ಶಿಫಾರಸು
ಮೂರು ತಿಂಗಳಿಂದ ಹಿಂಸಾಚಾರ: ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಕಳೆದ ಮೂರು ತಿಂಗಳಿಂದ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದೆ. ಪರಿಶಿಷ್ಟ ಪಂಗಡದ ಮೀಸಲಾತಿ ವಿಚಾರವಾಗಿ ಬುಡಕಟ್ಟು ಜನಾಂಗದ ಕುಕಿಗಳು ಹಾಗೂ ಮೇಟಿಸ್ ಸಮುದಾಯದ ನಡುವೆ ಸಂಘರ್ಷ ಭುಗಿಲೆದ್ದಿದೆ. ಮೇ 3 ರಿಂದ ಈ ಎರಡು ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ಉಂಟಾಗಿದೆ.
ರಾಜ್ಯಾದ್ಯಂತ ಪ್ರಕ್ಷುಬ್ಧತೆಯ ವಾತಾವರಣವಿದೆ. ಇದುವರೆಗೆ ಅಂದಾಜು 160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಇಬ್ಬರು ಮಹಿಳೆಯರ ನಗ್ನ ಮೆರವಣಿಗೆ ನಡೆಸಿದ ವಿಡಿಯೋ ಬಹಿರಂಗವಾದ ನಂತರ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸಂಸತ್ತಿನಲ್ಲಿ ಮಣಿಪುರ ವಿಷಯ ಚರ್ಚಿಸಲು ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಜೊತೆಗೆ ಖುದ್ದು ಪ್ರಧಾನಿ ಮೋದಿ ಅವರೇ ಹೇಳಿಕೆ ನೀಡಬೇಕೆಂದು ವಿಪಕ್ಷ ನಾಯಕರು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ, ಆಗಸ್ಟ್ 21ರಂದು ವಿಧಾನಸಭೆ ಅಧಿವೇಶನ ಕರೆಯಲು ಅಲ್ಲಿನ ರಾಜ್ಯ ಸಚಿವ ಸಂಪುಟವು ರಾಜ್ಯಪಾಲರಿಗೆ ಶಿಫಾರಸು ಮಾಡಿದೆ.
ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ವ್ಯಕ್ತಿಯ ಮೇಲೆ ಗುಂಡಿನ ದಾಳಿ, 15 ಮನೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು