ETV Bharat / bharat

ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್‌ಗೆ ಕೊಲೆ ಬೆದರಿಕೆ ಕರೆ - ಐಪಿಸಿ ಸೆಕ್ಷನ್ 294 506 2

ಸೋಮವಾರವಷ್ಟೇ ಎನ್​ಸಿಪಿ ನೇತಾರ ಶರದ್ ಪವಾರ್ ಜನ್ಮದಿನ ಆಚರಿಸಲಾಯಿತು. ಆ ಬಳಿಕ ಇಂದು ಅವರಿಗೆ ಬಂದಿರುವ ಬೆದರಿಕೆ ಫೋನ್ ಕರೆ ಮಹಾರಾಷ್ಟ್ರದಾದ್ಯಂತ ಸಂಚಲನ ಸೃಷ್ಟಿಸಿದೆ.

NCP President Sharad Pawar
ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್‌
author img

By

Published : Dec 13, 2022, 3:34 PM IST

ಮುಂಬೈ: ಎನ್‌ಸಿಪಿ ಅಧ್ಯಕ್ಷರೂ ಮಹಾರಾಷ್ಟ್ರದ ಪ್ರಭಾವಿ ರಾಜಕಾರಿಣಿ, ಜನನಾಯಕ ಶರದ್ ಪವಾರ್‌ ಅವರಿಗೆ ಮಂಗಳವಾರ ಕೊಲೆ ಬೆದರಿಕೆ ಕರೆಯೊಂದು ಬಂದಿದೆ. ಶರದ್ ಪವಾರ್​ರವರ ಸಿಲ್ವರ್ ಓಕ್ ನಿವಾಸಕ್ಕೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಈ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಆತನ ವಿರುದ್ಧ ಗಾದೇವಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಶರದ್ ಪವಾರ್ ಅವರ ಜನ್ಮದಿನವನ್ನು ಸೋಮವಾರವಷ್ಟೇ ಅವರ ಅಭಿಮಾನಿಗಳು, ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಆಚರಿಸಿದ್ದರು. ಆ ಸಂಭ್ರಮ ಮನೆ ಮಾಡಿ ಒಂದು ದಿನ ಕಳೆದಿಲ್ಲ, ಇಂದು ಅವರಿಗೆ ಫೋನ್​ ಬೆದರಿಕೆ ಕರೆ ಬಂದಿದೆ. ಇದು ಮಹಾರಾಷ್ಟ್ರ ಅಷ್ಟೇ ಏಕೆ ದೇಶಾದ್ಯಂತ ಸಂಚಲನ ಸೃಷ್ಟಿಸುವಂತೆ ಮಾಡಿದೆ.

ಈ ಪ್ರಕರಣದಲ್ಲಿ ಬಿಹಾರದ ನಿವಾಸಿಯಾಗಿರುವ ನಾರಾಯಣ್ ಸೋನಿ ಎಂಬಾತನ ಹೆಸರು ಕೇಳಿ ಬಂದಿದೆ. ಸಿಲ್ವರ್ ಓಕ್ ನಿವಾಸಕ್ಕೆ ಕರೆ ಮಾಡಿದ ಆತ, ರಾಷ್ಟ್ರೀಯವಾದಿಯಾಗಿರುವ ಪವಾರ್​ರವರನ್ನು ಮುಂಬೈ ಗಾತ್ರದ ಕಂಟ್ರಿಮೇಡ್ ಪಿಸ್ತೂಲ್​ನಿಂದ ಹತ್ಯೆ ಮಾಡುವುದಾಗಿ ತಿಳಿಸಿ, ಹಿಂದಿಯಲ್ಲಿ ಬೆದರಿಕೆ ಹಾಕಿದ್ದಾನೆ.

ಸದ್ಯ ಪೊಲೀಸರು ಐಪಿಸಿ ಸೆಕ್ಷನ್ 294,506(2) ಅಡಿ ಪ್ರಕರಣ ದಾಖಲಿಸಿಕೊಂಡಿರುವ ಮಹಾರಾಷ್ಟ್ರ ಪೊಲೀಸರು ಈತನ ಬಂಧನಕ್ಕೆ ​ ತಂಡವನ್ನು ರಚಿಸಿ ತನಿಖೆಗೆ ರವಾನೆ ಮಾಡಲಾಗಿದೆ.

ತನಿಖೆ ವೇಳೆ ಬಂದ ಮಾಹಿತಿಗಳ ಪ್ರಕಾರ, ಈ ಹಿಂದೆ ಇದೇ ವ್ಯಕ್ತಿ ಪವಾರ್‌ಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದ. ಆ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ವಿವರಣೆ ನೀಡಿದ ಬಳಿಕ ಬಿಡುಗಡೆಗೊಳಿಸಿದರು. ಇದೀಗ ಮತ್ತೆ ಅದೇ ವ್ಯಕ್ತಿ ಬೆದರಿಕೆ ಹಾಕಿದ್ದು, ಹೀಗಾಗಿ ಈ ಬಾರಿ ಎಫ್ ಐಆರ್ ದಾಖಲಿಸಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣ: ರಾಜ್ ಕುಂದ್ರಾಗೆ ನಿರೀಕ್ಷಣಾ ಜಾಮೀನು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.