ಮುಂಬೈ: ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಹಣ ವಸೂಲಿ ಆರೋಪ ಕುರಿತಂತೆ ಸಾಕ್ಷಿಯಾಗಿರುವ ಪ್ರಭಾಕರ್ ಸೈಲ್ ಅವರನ್ನು ಎನ್‌ಸಿಬಿ ಸುಮಾರು 11 ಗಂಟೆಗಳ ಕಾಲ ಮಂಗಳವಾರ ವಿಚಾರಣೆ ನಡೆಸಿದೆ. ಸೋಮವಾರವೂ ಕೂಡಾ ಪ್ರಭಾಕರ್ ಸೈಲ್ ಅವರು ಎನ್‌ಸಿಬಿ ತನಿಖಾ ತಂಡದ ಮುಂದೆ ಹಾಜರಾಗಿದ್ದರು.
ಎನ್‌ಸಿಬಿ ಅಧಿಕಾರಿಯೊಬ್ಬರ ಪ್ರಕಾರ, ಸೈಲ್ ಮತ್ತು ಅವರ ವಕೀಲ ತುಷಾರ್ ಖಂಡಾರೆ ಅವರು ಬಾಂದ್ರಾದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮೆಸ್‌ನಲ್ಲಿ ಬೆಳಗ್ಗೆ 11.55ರ ಸುಮಾರಿಗೆ ತನಿಖಾ ತಂಡದ ಮುಂದೆ ಹಾಜರಾಗಿದ್ದರು. ಅವರನ್ನು ರಾತ್ರಿ 11.20ರವರೆಗೆ ವಿಚಾರಣೆಗೆ ಒಳಪಡಿಸಲಾಗಿತ್ತು.
ದಕ್ಷಿಣ ಮುಂಬೈನಲ್ಲಿರುವ ತನ್ನ ವಲಯ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಗುರುವಾರ ಪ್ರಭಾಕರ್ ಸೈಲ್ಗೆ ಗುರುವಾರ ಸಮನ್ಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಭಾಕರ್ ಸೈಲ್ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್ಸಿಬಿಯ ಉಪ ಮಹಾನಿರ್ದೇಶಕರಾದ ಜ್ಞಾನೇಶ್ವರ್ ಸಿಂಗ್ ನೇತೃತ್ವದ ತನಿಖಾ ತಂಡ ಸೋಮವಾರ ಬಗ್ಗೆ ದೆಹಲಿಯಿಂದ ಮುಂಬೈಗೆ ಆಗಮಿಸಿದ್ದು, ಪ್ರಕರಣವನ್ನು ಕೈಗತ್ತಿಕೊಂಡಿದೆ. ಆರ್ಯನ್ ಖಾನ್ ಡ್ರಗ್ಸ್ ಕೇಸ್ನಲ್ಲಿ ಸಾಕ್ಷಿಯಾಗಿರುವ ಕೆ.ಪಿ. ಗೋಸಾವಿ ಅವರ ಅಂಗರಕ್ಷಕನಾಗಿರುವ ಪ್ರಭಾಕರ್ ಸೈಲ್ ಹಣ ವಸೂಲಿ ಆರೋಪ ಕುರಿತಂತೆ ಸಾಕ್ಷಿಯಾಗಿದ್ದಾರೆ.
ಇದನ್ನೂ ಓದಿ: ಗೋ ಹತ್ಯೆ ನಿಷೇಧ ಕಾಯ್ದೆ ತರುವಲ್ಲಿ ಆಸಕ್ತಿ; ಆದರೆ ಸರ್ಕಾರಿ ಗೋ ಶಾಲೆ ಸ್ಥಾಪಿಸುವಲ್ಲಿ ಮಾತ್ರ ನಿರಾಸಕ್ತಿ?