ETV Bharat / bharat

ಮುಂಬೈ ಡ್ರಗ್ಸ್​ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆ: ಶಾರುಖ್ ಪುತ್ರ ಆರ್ಯನ್ ಖಾನ್​ಗೆ ಕ್ಲೀನ್ ಚಿಟ್​​ - ಶಾರುಖ್ ಪುತ್ರ ಆರ್ಯನ್ ಖಾನ್​ಗೆ ಕ್ಲೀನ್ ಚಿಟ್​​

ಮುಂಬೈನ ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣ ಎದುರಿಸುತ್ತಿದ್ದ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಪುತ್ರ ಆರ್ಯನ್​ಗೆ ಬಿಗ್ ರಿಲೀಫ್ ಸಿಕ್ಕಿದೆ.

NCB gives clean chit to Aryan Khan
NCB gives clean chit to Aryan Khan
author img

By

Published : May 27, 2022, 1:43 PM IST

Updated : May 27, 2022, 3:09 PM IST

ಮುಂಬೈ(ಮಹಾರಾಷ್ಟ್ರ): 2021ರ ಅಕ್ಟೋಬರ್​ ತಿಂಗಳಲ್ಲಿ ಡ್ರಗ್ಸ್​ ಕೇಸ್​ನಲ್ಲಿ ಸಿಲುಕಿಕೊಂಡಿದ್ದ ಬಾಲಿವುಡ್ ಬಾದ್​ ಷಾ ಶಾರುಖ್ ಖಾನ್​ ಪುತ್ರ ಆರ್ಯನ್​ ಖಾನ್​​ಗೆ ಎನ್​ಸಿಬಿ ಕ್ಲೀನ್​ ಚಿಟ್ ನೀಡಿದೆ. ಸಾಕ್ಷ್ಯಾಧಾರದ ಕೊರತೆ ಹಾಗೂ ದಾಳಿ ವೇಳೆ ಆರ್ಯನ್ ಖಾನ್ ಬಳಿ ಯಾವುದೇ ಡ್ರಗ್ಸ್​ ಪತ್ತೆಯಾಗದ ಕಾರಣ ಶಾರುಖ್ ಖಾನ್ ಪುತ್ರ ಆರ್ಯನ್​ಗೆ ಬಿಗ್ ರಿಲೀಫ್ ಸಿಕ್ಕಿದೆ.

ಅಕ್ಟೋಬರ್​ ತಿಂಗಳಲ್ಲಿ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಬಂಧನವಾಗಿತ್ತು. ಅನೇಕ ವಿಚಾರಣೆ, ಸುದೀರ್ಘ ನಾಟಕೀಯ ಬೆಳವಣಿಗೆಗಳ ನಂತರ ಅಕ್ಟೋಬರ್ 28 ರಂದು ಅವರಿಗೆ ಕೋರ್ಟ್ ಜಾಮೀನು ನೀಡಿತ್ತು. ಇದಕ್ಕೂ ಮುನ್ನ ಅವರು ಬರೋಬ್ಬರಿ 28 ದಿನ ಬಂಧನದಲ್ಲಿದ್ದರು. ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶುಕ್ರವಾರ ಬರೋಬ್ಬರಿ 6 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, 14 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಿದೆ. ಆದರೆ, ಚಾರ್ಟ್ ಶೀಟ್‌ನಲ್ಲಿ 6 ಜನರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಬರೆಯಲಾಗಿದೆ. ಇದರಲ್ಲಿ ಆರ್ಯನ್ ಖಾನ್ ಸಹ ಸೇರಿಕೊಂಡಿದ್ದಾರೆ.

ಆರ್ಯನ್​ ಖಾನ್​ ಡ್ರಗ್ಸ್​ ಪ್ರಕರಣ: ಅಕ್ಟೋಬರ್ 2 ರಂದು, ಕ್ರೂಸ್ ಶಿಪ್ ಮೇಲೆ ಎನ್​​ಸಿಬಿ ದಾಳಿ ನಡೆಸಿತ್ತು. ಇದರಲ್ಲಿ ಆರ್ಯನ್ ಖಾನ್ ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿತ್ತು. ಆರ್ಯನ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡ್ರಗ್ಸ್ ವಹಿವಾಟು ನಡೆಸುತ್ತಿದ್ದಾರೆಂದು ಎನ್‌ಸಿಬಿ ಆರೋಪಿಸಿತ್ತು. ಆದರೆ, ಆರ್ಯನ್‌ನಿಂದ ಎನ್‌ಸಿಬಿಯಿಂದ ಡ್ರಗ್ಸ್ ವಶಪಡಿಸಿಕೊಂಡಿರಲಿಲ್ಲ. ಇದರ ಬೆನ್ನಲ್ಲೇ ಅಕ್ಟೋಬರ್ 30 ರಂದು ಆರ್ಯನ್ ಖಾನ್ ಜೈಲಿನಿಂದ ಹೊರಬಂದಿದ್ದರು. ಇದೀಗ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಲಾಗಿದೆ.

ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಶುಕ್ರವಾರ ಎನ್‌ಡಿಪಿಎಸ್ ನ್ಯಾಯಾಲಯದಲ್ಲಿ ಆರ್ಯನ್ ಖಾನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಆರ್ಯನ್ ಖಾನ್ ಹೆಸರನ್ನು ಕೈಬಿಟ್ಟಿದೆ. ಈ ಮೂಲಕ ಆರ್ಯನ್​ಗೆ ಕೋರ್ಟ್​ನಿಂದ ಕ್ಲೀನ್ ಚಿಟ್​ ಸಿಕ್ಕಂತಾಗಿದೆ.

ಪ್ರಕರಣದಲ್ಲಿ ಮುನ್ಮುನ್ ಧಮೇಚಾ ಮತ್ತು ಅರ್ಬಾಜ್ ಮರ್ಚೆಂಟ್ ಎನ್ನುವವರ ಹೆಸರು ಇದ್ದು ಆರ್ಯನ್ ಖಾನ್ ಸೇರಿದಂದತೆ ಒಟ್ಟು 6 ಜನರ ಹೆಸರನ್ನು ತೆಗೆದು ಹಾಕಿದೆ. 6 ಜನರ ವಿರುದ್ಧ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಸಾಕ್ಷ್ಯಾಧಾರ ಪತ್ತೆಯಾಗದ ಹಿನ್ನೆಲೆ ಆರ್ಯನ್ ಖಾನ್ ಜೊತೆ ಸಾಹು, ಆನಂದ್, ಸುನಿಲ್ ಸೆಹ್, ಅರೋರಾ ಸೇರಿದ್ದಾರೆ.

ಇದನ್ನು ಓದಿ:ಅಕ್ರಮ ಆಸ್ತಿ ಗಳಿಕೆ: ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್​ ಚೌಟಾಲಗೆ 4 ವರ್ಷ ಜೈಲುಶಿಕ್ಷೆ

Last Updated : May 27, 2022, 3:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.