ಮುಂಬೈ: ಹಾಸ್ಯನಟಿ ಭಾರ್ತಿ ಸಿಂಗ್ ಮತ್ತು ಅವರ ಪತಿ ಹರ್ಷ್ ಲಿಂಬಾಚಿಯಾ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಕೆಂದರೆ ಅವರ ವಿರುದ್ಧ ಮಹಾರಾಷ್ಟ್ರದ ಎನ್‌ಸಿಬಿ 200 ಪುಟಗಳ ಚಾರ್ಜ್ಶೀಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಹಿಂದೆ 2020ರಲ್ಲಿ ಮಾದಕ ದ್ರವ್ಯ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.
ಪ್ರಕರಣ ಹಿನ್ನೆಲೆ ಏನು: ನವೆಂಬರ್ 2020ರಲ್ಲಿ ಭಾರ್ತಿ ಅವರ ಮುಂಬೈನ ಮನೆ ಮೇಲೆ ಎನ್‌ಸಿಬಿ ದಾಳಿ ನಡೆಸಿತು. ಈ ವೇಳೆ, ಗಾಂಜಾ ಜಪ್ತಿ ಮಾಡಲಾಯಿತು. ವಿಚಾರಣೆ ವೇಳೆ ಭಾರತಿ ಸಿಂಗ್ ತಾನು ಡ್ರಗ್ಸ್ ಸೇವಿಸಿದ್ದನ್ನು ಒಪ್ಪಿಕೊಂಡಿದ್ದರು. ಸುಮಾರು 6 ಗಂಟೆಗಳ ವಿಚಾರಣೆ ಬಳಿಕ ಭಾರ್ತಿ ಅವರನ್ನು ಬಂಧಿಸಲಾಯಿತು.
ಇದರ ನಂತರ, ಹರ್ಷ ಲಿಂಬಾಚಿಯಾ ಅವರನ್ನು ತಡರಾತ್ರಿ ಬಂಧಿಸಲಾಯಿತು. ಭಾರ್ತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ಅವರನ್ನು ಮೊದಲು ವೈದ್ಯಕೀಯ ಮತ್ತು ಕೊರೊನಾ ಪರೀಕ್ಷೆಗೆ ಒಳಪಡಿಸಲಾಯಿತು. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಭಾರ್ತಿ ಮತ್ತು ಹರ್ಷ ಇಬ್ಬರು ನ್ಯಾಯಾಲಯಕ್ಕೆ ಹಾಜರಾಗಿದ್ದರು.
NCB ನ್ಯಾಯಾಲಯದಿಂದ ಭಾರ್ತಿ ಅವರ ಪತಿ ಹರ್ಷ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಮನವಿ ಮಾಡಿತು. ಆದರೆ, ನ್ಯಾಯಾಲಯವು ಅವರ ಬೇಡಿಕೆಯನ್ನು ತಿರಸ್ಕರಿಸಿತು. ನಂತರ ನ್ಯಾಯಾಲಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆ ಬಳಿಕ ಇಬ್ಬರಿಗೂ ಜಾಮೀನು ಮಂಜೂರಾಗಿತು.
ಭಾರ್ತಿ ಸಿಂಗ್ ಹಾಸ್ಯನಟಿ: ಭಾರ್ತಿ ಸಿಂಗ್ ಸ್ಟ್ಯಾಂಡ್ಅಪ್ ಕಾಮಿಡಿಯನ್ ಮತ್ತು ನಟಿ. ಅವರು ಪಂಜಾಬ್ ಮೂಲದವರು. 2017 ರಲ್ಲಿ ಬರಹಗಾರ ಹರ್ಷ್ ಲಿಂಬ್ಚಿಯಾ ಅವರನ್ನು ವಿವಾಹವಾಗಿದ್ದಾರೆ. ಅವರು 'ಇಂಡಿಯನ್ ಲಾಫ್ಟರ್ ಚಾಲೆಂಜ್' ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಭಾರ್ತಿ ಸಿಂಗ್ ಕಾಮಿಡಿ ಸರ್ಕಸ್, ಕಾಮಿಡಿ ಸರ್ಕಸ್ ಮಹಾಸಂಗ್ರಾಮ್, ಕಾಮಿಡಿ ಸರ್ಕಸ್ ಕಾ ಜಾದು, ಕಹಾನಿ ಕಾಮಿಡಿ ಸರ್ಕಸ್ ಕಿ ಮತ್ತು ಕಾಮಿಡಿ ನೈಟ್ಸ್ ಬಚಾವೋ, ಜುಬಿಲಿ ಕಾಮಿಡಿ ಸರ್ಕಸ್‌ನಲ್ಲಿ ನಟಿಸಿದ್ದಾರೆ. ಪ್ಯಾರ್ ಮೇ ಟ್ವಿಸ್ಟ್ ಚಿತ್ರದಲ್ಲೂ ಅಭಿನಯಿಸಿದ್ದಾರೆ.
ಇದನ್ನು ಓದಿ:ಲೈಗರ್ ಸೋಲಿನ ಬಳಿಕ ಸಂಕಷ್ಟಕ್ಕೆ ಸಿಲುಕಿದ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್!