ETV Bharat / bharat

ಆರ್ಯನ್ ಬಿಡುಗಡೆಗೆ 25 ಕೋಟಿ ಲಂಚ ಕೇಳಿದ ಆರೋಪ: ಎನ್‌ಸಿಬಿ ಸ್ಪಷ್ಟನೆ - ಡ್ರಗ್ ಪಾರ್ಟಿ ಪ್ರಕರಣದಲ್ಲಿ ಆರ್ಯನ್ ಖಾನ್

ಡ್ರಗ್ ಪಾರ್ಟಿ ಪ್ರಕರಣದಲ್ಲಿ ಆರ್ಯನ್ ಖಾನ್ ಬಿಡುಗಡೆಗೆ ರೂ. 25 ಕೋಟಿ ಡೀಲ್ ಬಗ್ಗೆ ಚರ್ಚಿಸಲಾಗಿದೆ ಎಂದು ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಎನ್​ಸಿಬಿ, ಸಾಮಾಜಿಕ ಜಾಲತಾಣಗಳ ಬದಲು ಪ್ರಭಾಕರ್ ಸೈಲ್ ನ್ಯಾಯಾಲಯದಲ್ಲಿ ವಾದ ಮಂಡಿಸಬೇಕು ಎಂದಿದೆ.

ಎನ್‌ಸಿಬಿ
ಎನ್‌ಸಿಬಿ
author img

By

Published : Oct 24, 2021, 7:27 PM IST

ಮುಂಬೈ: ಆರ್ಯನ್ ಖಾನ್ ಆರೋಪಿಯಾಗಿರುವ ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ಭಾನುವಾರ ಲಂಚ ಬೇಡಿಕೆಯ ಬಗ್ಗೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಈ ಆರೋಪಕ್ಕೆ ಎನ್‌ಸಿಬಿ ಸ್ಪಷ್ಟನೆ ನೀಡಿದೆ.

ಐಷಾರಾಮಿ ಹಡಗಿನ ಮೇಲೆ ದಾಳಿ ನಡೆದ ಬಳಿಕ ಕೆಲವು ಸಾಕ್ಷಿದಾರರಿಂದ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಅವರು ಖಾಲಿ ಹಾಳೆ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಪ್ರಭಾಕರ್​ ಸೈಲ್ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಎನ್​ಸಿಬಿ, ಸಾಮಾಜಿಕ ಜಾಲತಾಣಗಳ ಬದಲು ಪ್ರಭಾಕರ್ ಸೈಲ್ ನ್ಯಾಯಾಲಯದಲ್ಲಿ ವಾದ ಮಂಡಿಸಬೇಕು ಎಂದಿದೆ.

ಎನ್‌ಸಿಬಿ ಸುತ್ತೋಲೆ
ಎನ್‌ಸಿಬಿ ಸುತ್ತೋಲೆ

ನಮ್ಮ ವಲಯ ನಿರ್ದೇಶಕ ಸಮೀರ್​ ವಾಂಖೆಡೆ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಆದರೆ, ಇನ್ನೂ ವಿಚಾರಣೆಯ ಅವಶ್ಯಕತೆ ಇರುವುದರಿಂದ ಅಫಿಡವಿಟ್ ಅನ್ನು ವಿಚಾರಣೆಗಾಗಿ ಕಳುಹಿಸಲಾಗಿದೆ ಎಂದು ಎನ್​ಸಿಬಿ ಡಿಡಿಜಿ ಮುತ್ತ ಜೈನ್ ಹೇಳಿದ್ದಾರೆ. ಅಲ್ಲದೇ, ಈ ಸಂಬಂಧ ಎನ್‌ಸಿಬಿ ಸುತ್ತೋಲೆ ಹೊರಡಿಸಿದೆ.

ಡ್ರಗ್ ಪಾರ್ಟಿ ಪ್ರಕರಣದಲ್ಲಿ ಆರ್ಯನ್ ಖಾನ್ ಬಿಡುಗಡೆಗೆ ರೂ. 25 ಕೋಟಿ ಡೀಲ್ ಬಗ್ಗೆ ಚರ್ಚಿಸಲಾಗಿದೆ ಎಂದು ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ಹೇಳಿಕೊಂಡಿದ್ದಾರೆ. ಪ್ರಭಾಕರ್ ಸೈಲ್ ಕಿರಣ್ ಗೋಸಾವಿ ಅವರ ಅಂಗರಕ್ಷಕ. ಈ ಸಂದರ್ಭದಲ್ಲಿ ಕೆಲವು ಖಾಲಿ ಪೇಪರ್‌ಗಳಲ್ಲಿ ಸಮೀರ್ ವಾಂಖೆಡೆ ತಮ್ಮ ಸಹಿಯನ್ನು ತೆಗೆದುಕೊಂಡಿದ್ದಾರೆ ಎಂದು ಸೈಲ್ ಹೇಳಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.