ನವದೆಹಲಿ: ಜೂನ್ 27ರಂದು ಜಮ್ಮು ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿಯ ನಂತರ, ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಡ್ರೋನ್ ಸುಳಿದಾಡುತ್ತಿರುವುದನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ಭದ್ರತಾ ಸಂಸ್ಥೆಗಳ ಮೂಲಗಳು ಬಹಿರಂಗಪಡಿಸಿವೆ.
ಭದ್ರತಾ ಸಂಸ್ಥೆಗಳ ಪ್ರಕಾರ, ಕಳೆದ ತಿಂಗಳು ನಕ್ಸಲ್ ಪೀಡಿತ ಪ್ರದೇಶವಾದ ಡೋರ್ನಾಪಾಲ್ ಪ್ರದೇಶದಲ್ಲಿ ಡ್ರೋನ್ ಪತ್ತೆಯಾಗಿದೆ. ನಂತರ ಆ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸುವಂತೆ ಭದ್ರತಾ ಸಂಸ್ಥೆಗಳು ಸಿಆರ್‌ಪಿಎಫ್ ಸಿಬ್ಬಂದಿಯನ್ನು ಎಚ್ಚರಿಸಿದ್ದವು.
ಛತ್ತೀಸ್ಗಢದ ರಾಜಧಾನಿ ರಾಯಪುರದಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಸುಕ್ಮಾ ದೇಶದ ಅತ್ಯಂತ ಕೆಟ್ಟ ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಒಂದಾಗಿದೆ. ಇಲ್ಲಿರುವ ನಕ್ಸಲರು ಸಂಗ್ರಹಿಸಲು ನಕ್ಸಲರು ಡ್ರೋನ್‌ಗಳನ್ನು ಬಳಸಲಾರಂಭಿಸಿದ್ದಾರೆ ಎಂಬ ಮಾಹಿತಿಗೆ ಹೊರಗೆ ಬಿದ್ದಿದೆ.
ಇದನ್ನೂ ಓದಿ: ಆನ್ಲೈನ್ ಅಶ್ಲೀಲ ಫನ್ ರೂ. 200ಕ್ಕೆ!: ಪೋರ್ನ್ ಸೈಟ್ಗಳಂತೆ ಬೆಳೆದ ಸೋಷಿಯಲ್ ಮೀಡಿಯಾಗಳ ನಿಯಂತ್ರಣ ಎಂದು?
ಮೂಲಗಳ ಪ್ರಕಾರ, ಗಡಿ ಭದ್ರತಾ ಪಡೆ (ಬಿಎಸ್‌ಎಫ್) 2020ರಿಂದ ಗುಜರಾತ್‌ನಿಂದ ಜಮ್ಮುವರೆಗಿನ ಪಶ್ಚಿಮ ಗಡಿಯಲ್ಲಿ ಕನಿಷ್ಠ 99 ಡ್ರೋನ್ ಹಾರಾಟವನ್ನು ದಾಖಲಿಸಿದೆ. ಈಗ ಡ್ರೋನ್ಗಳ ನಿಯಂತ್ರಣಕ್ಕೆ ಹೊಸ ಕಾನೂನುಗಳನ್ನು ಜಾರಿಗೊಳಿಸಲು ಕೇಂದ್ರ ಚಿಂತನೆ ನಡೆಸುತ್ತಿದೆ.