ETV Bharat / bharat

'ಮಹಾ' ಸಚಿವ ನವಾಬ್​ ಮಲಿಕ್​ ಅಳಿಯ ಡ್ರಗ್​ ಪ್ರಕರಣದಲ್ಲಿ ಅರೆಸ್ಟ್​

author img

By

Published : Jan 14, 2021, 6:31 AM IST

ಮಾದಕವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಅಲ್ಪಸಂಖ್ಯಾತ ವ್ಯವಹಾರ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್​ನನ್ನು ಎನ್‌ಸಿಬಿ ಬಂಧಿಸಿದೆ.

Nawab Malik's Son-In-Law Sameer khan Arrest
ನವಾಬ್​ ಮಲಿಕ್​ ಅಳಿಯ ಡ್ರಗ್​ ಪ್ರಕರಣದಲ್ಲಿ ಅರೆಸ್ಟ್​

ಮಹಾರಾಷ್ಟ್ರ: ಮಾದಕವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಮಹಾರಾಷ್ಟ್ರ ಅಲ್ಪಸಂಖ್ಯಾತ ವ್ಯವಹಾರ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್​ನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬುಧವಾರ ಬಂಧಿಸಿದೆ.

ಬಾಂದ್ರಾ (ಪಶ್ಚಿಮ)ದಲ್ಲಿ ಎನ್‌ಸಿಬಿ ನಡೆಸಿದ ದಾಳಿ ಸಂದರ್ಭದಲ್ಲಿ ಗಾಂಜಾವನ್ನು ವಶಪಡಿಸಿಕೊಂಡ ಬಗ್ಗೆ ಮತ್ತು ಖಾರ್​ನಲ್ಲಿರುವ ಕರಣ್ ಸಜ್ನಾನಿ ಅವರ ನಿವಾಸದಿಂದ ಆಮದು ಮಾಡಿಕೊಂಡ ಗಾಂಜಾವನ್ನು ಪಡೆದ ಬಗ್ಗೆ ತನಿಖೆ ನಡೆಸುತ್ತಿರುವಾಗ ಸಮೀರ್​ ಖಾನ್ ಕೈವಾಡ ಬೆಳಕಿಗೆ ಬಂದಿದೆ.

ಎನ್‌ಡಿಪಿಎಸ್ ಕಾಯ್ದೆಯ ನಿಬಂಧನೆಗಳ ಅಡಿ ರಹೀಲಾ, ಶೈಸ್ತಾ ಮತ್ತು ರಾಮ್ ಕುಮಾರ್ ತಿವಾರಿ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವಿವರವಾದ ವಿಚಾರಣೆಯ ನಂತರ ಸಮೀರ್​ ಖಾನ್​ನನ್ನು ಬಂಧಿಸಲಾಗಿದೆ ಎಂದು ಮುಂಬೈನ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಹೇಳಿದರು.

ಇನ್ನು ಎನ್‌ಸಿಬಿಯಿಂದ ಸಮೀರ್​ ಖಾನ್​ ಬಂಧನವಾದ ಬಳಿಕ ಟ್ವೀಟ್​ ಮಾಡಿದ ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ ಟ್ವೀಟ್​, "ಸಚಿವ ಸ್ಥಾನಕ್ಕೆ ನವಾಬ್ ಮಲಿಕ್ ಯಾವಾಗ ರಾಜೀನಾಮೆ ನೀಡುತ್ತಾರೆ" ಎಂದು ಪ್ರಶ್ನಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.