ಮುಂಬೈ, ಮಹಾರಾಷ್ಟ್ರ: ಕ್ರೂಸ್ಶಿಪ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗ ಹೊಸ ಹೊಸ ದಿಕ್ಕಿಗೆ ಈ ಪ್ರಕರಣ ಹೊರಳುತ್ತಿದ್ದು, ಎನ್ಸಿಪಿ ವಕ್ತಾರ ಮತ್ತು ಮಹಾರಾಷ್ಟ್ರ ರಾಜ್ಯದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಅವರು ಮಾದಕ ವಸ್ತು ನಿಗ್ರಹ ದಳ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನವಾಬ್ ಮಲಿಕ್ 'ಸರ್ಕಾರದ ಕೆಲಸಕ್ಕೆ ಸೇರಿದ ನಂತರ ಸಮೀರ್ ವಾಂಖೆಡೆ ಮಾಲ್ಡೀವ್ಸ್ಗೆ ಹೋಗಿದ್ದಾಗಿ, ಆದರೆ ಈವರೆಗೆ ದುಬೈಗೆ ಹೋಗಿಲ್ಲ ಎಂದು ಹೇಳಿದ್ದರು. ಆದರೆ ಈ ಫೋಟೋ ಸತ್ಯವನ್ನು ಮತ್ತು ಸಮೀರ್ ವಾಂಖೆಡೆ ಜೀವನವನ್ನು ಬಹಿರಂಗಪಡಿಸುತ್ತದೆ. 2020 ಡಿಸೆಂಬರ್ 10ರಂದು ದುಬೈನ ಗ್ರ್ಯಾಂಡ್ ಹಯಾತ್ ಹೋಟೆಲ್ನಲ್ಲಿ ಸಮೀರ್ ವಾಂಖೆಡೆ ಇದ್ದರು' ಎಂದಿದ್ದಾರೆ.
ಟ್ವೀಟ್ನ ಜೊತೆಗೆ ಎರಡು ಫೋಟೋಗಳನ್ನೂ ಕೂಡಾ ನವಾಬ್ ಮಲಿಕ್ ಹಂಚಿಕೊಂಡಿದ್ದು, ಜಾಸ್ಮೀನ್ ವಾಂಖೆಡೆ ಎಂಬುವವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.
ನವಾಬ್ ಮಲ್ಲಿಕ್ ಆರೋಪ: ಸಮೀರ್ ವಾಂಖೆಡೆ ಅವರು ಬಾಲಿವುಡ್ ತಾರೆಯರನ್ನು ಟಾರ್ಗೆಟ್ ಮಾಡುತ್ತಿದ್ದು, ಅವರಿಂದ ಹಣ ಸುಲಿಗೆ ಮಾಡುವುದಕ್ಕಾಗಿ ಮತ್ತು ಬ್ಲ್ಯಾಕ್ಮೇಲ್ ಮಾಡುವುದಕ್ಕಾಗಿ ದುಬೈಗೆ ತೆರಳಿದ್ದರು ಎಂದು ನವಾಬ್ ಮಲಿಕ್ ಆರೋಪಿಸಿದ್ದಾರೆ.
-
https://t.co/W9QHl7BFKb pl open link and see the truth
— Nawab Malik نواب ملک नवाब मलिक (@nawabmalikncp) October 21, 2021 " class="align-text-top noRightClick twitterSection" data="
">https://t.co/W9QHl7BFKb pl open link and see the truth
— Nawab Malik نواب ملک नवाब मलिक (@nawabmalikncp) October 21, 2021https://t.co/W9QHl7BFKb pl open link and see the truth
— Nawab Malik نواب ملک नवाब मलिक (@nawabmalikncp) October 21, 2021
ಸಮೀರ್ ವಾಂಖೆಡೆ ಪ್ರತಿಕ್ರಿಯೆ: ನವಾಬ್ ಮಲಿಕ್ ಆರೋಪವನ್ನು ಸರಾಸಗಟಾಗಿ ತಿರಸ್ಕರಿಸಿರುವ ಸಮೀರ್ ವಾಂಖೆಡೆ, ಈ ಆರೋಪಗಳೆಲ್ಲಾ ಆಧಾರಹಿತ ಎಂದಿದ್ದು, ಸುಳ್ಳು ಆರೋಪದ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.
ಸಮೀರ್ ವಾಂಖೆಡೆ ಪ್ರತಿಕ್ರಿಯೆಗೆ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿರುವ ನವಾಬ್ ಮಲಿಕ್ ಮತ್ತೊಂದು ಟ್ವೀಟ್ ಅನ್ನು ಹಂಚಿಕೊಂಡಿರುವುದು ಮಾತ್ರವಲ್ಲದೇ, ಫೇಸ್ಬುಕ್ ಲಿಂಕ್ ಅನ್ನು ಲಗತ್ತಿಸಿ, ಸತ್ಯ ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಂದಿದ್ದಾರೆ.