ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಪಿ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಇಡಿ ಕಸ್ಟಡಿಯಲಿದ್ದು, ಅವರ ವಿರುದ್ಧ ಬಿಜೆಪಿ ಮುಖಂಡ ಮೋಹಿತ್ ಕಾಂಬೋಜ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಡ್ರಗ್ ದಂಧೆಕೋರ ಹಾಗೂ ನವಾಬ್ ಮಲಿಕ್ ಅಳಿಯನ ನಡುವಿನ ಸಂಬಂಧ ಬಯಲಿಗೆ ಬರಬೇಕು. ದೇಶದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ನವಾಬರ ಮುಖವಾಡ ಕಳಚಿದ್ದಕ್ಕೆ ಇಡೀ ದೇಶವೇ ಸಾಕ್ಷಿಯಾಗಿದೆ. ಸದ್ಯ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಜೈಲಿನಲ್ಲಿ ಒಟ್ಟಿಗೆ ತಿಂಡಿ ಮಾಡುತ್ತಾರೆ ಎಂದು ವ್ಯಂಗ್ಯಾವಾಡಿದ್ದಾರೆ.
ನವಾಬ್ ಮಲ್ಲಿಕ್ ಅವರು ಮಹಾರಾಷ್ಟ್ರ ರಾಜಕಾರಣದಲ್ಲಿ ಸುಮಾರು 20 ವರ್ಷಗಳಿಂದ ಸಕ್ರಿಯವಾಗಿದ್ದು, ವಿಧಾನಸಭೆಯಲ್ಲಿ ಮಹಾರಾಷ್ಟ್ರದ ಜನತೆಯನ್ನು ಪ್ರತಿನಿಧಿಸುವ ರಾಷ್ಟ್ರೀಯ ವಕ್ತಾರರಾಗಿದ್ದಾರೆ. ಇವರ ಮತ್ತು ಅಳಿಯನ ನಡುವೆ ಸಂಬಂಧ ಮಾತ್ರವಲ್ಲದೇ ಹಣ ವಿನಿಮಯ ಕೂಡ ನಡೆದಿದೆ. ತನಿಖೆ ಮುಂದುವರೆದಂತೆ ಪ್ರಕರಣದಲ್ಲಿ ದೊಡ್ಡ ಮಾಹಿತಿ ಹೊರಬೀಳಲಿದೆ ಎಂದಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವಾಬ್ ಮಲಿಕ್ ಅವರನ್ನು ಪಿಎಂಎಲ್‌ಎ ನ್ಯಾಯಾಲಯವು ಮಾರ್ಚ್3ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ವಹಿಸಿದೆ.
ಇದನ್ನೂ ಓದಿ: ಮನಿ ಲಾಂಡ್ರಿಂಗ್ ಕೇಸ್: ಸಚಿವ ನವಾಬ್ ಮಲಿಕ್ರನ್ನು 3 ದಿನ ಇಡಿ ವಶಕ್ಕೆ ಒಪ್ಪಿಸಿದ ಕೋರ್ಟ್