ಹೈದರಾಬಾದ್ : ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳಾದ ನವ್ಯಾ ನವೇಲಿ ನಂದಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಅನುಭವಿಸುವ ಕಷ್ಟ ಬಿಚ್ಚಿಟ್ಟು ಸುದ್ದಿಯಾಗಿದ್ದ ನವೇಲಿ, ಈಗ ತಮ್ಮ ನೂತನ ಯೋಜನೆಯ ಬಗ್ಗೆ ಇನ್‌ಸ್ಟಾಗ್ರಾಂ ಬಳಕೆದಾರ ಮಾಡಿದ ಟ್ರೋಲ್ಗೆ ಪ್ರತಿಕ್ರಿಯಿಸಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
- " class="align-text-top noRightClick twitterSection" data="
">
ಲಿಂಗ ಸಮಾನ ಜಗತ್ತನ್ನು ನಿರ್ಮಿಸುವತ್ತ ಗಮನಹರಿಸುವ ತನ್ನ ಎನ್ಜಿಒ ನವೇಲಿ ಪ್ರಾಜೆಕ್ಟ್ಸ್‌ನ ಯೋಜನೆಯಾದ 'ಪೀರಿಯಡ್ ಪಾಸಿಟಿವ್ ಹೋಮ್' ಬಗ್ಗೆ ನವ್ಯಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ನವ್ಯಾ ಮುಕುಲ್ ಮಾಧವ್ ಫೌಂಡೇಶನ್ ಸಹಯೋಗದೊಂದಿಗೆ ಗಡ್ಚಿರೋಲಿಯಲ್ಲಿ ಮೊದಲ 'ಪೀರಿಯಡ್ ಪಾಸಿಟಿವ್ ಹೋಮ್' ಉದ್ಘಾಟಿಸಿದ್ದರ ಕುರಿತು ಸಂತಸ ವ್ಯಕ್ತಪಡಿಸಿದ್ದರು.
ಆದರೆ, ಈ ಬಗ್ಗೆ ನವ್ಯಾ ಅವರ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ ಬಳಕೆದಾರನೊಬ್ಬ, "ಈ ಯೋಜನೆಯು ನಿಮಗೆ ತುಂಬಾ ಇಷ್ಟವಾಗಿದ್ದರೆ, ಉದ್ಘಾಟನೆಯಲ್ಲಿ ನೀವು ಎಲ್ಲಿದ್ದೀರಿ?" ಎಂದಿದ್ದಾನೆ. ಇದಕ್ಕೆ ಪ್ರತ್ಯುತ್ತರ ನೀಡಿದ ನವೇಲಿ,'ನಾವು ಸಾಂಕ್ರಾಮಿಕ ರೋಗದ ಮಧ್ಯದಲ್ಲಿದ್ದೇವೆ ಎಂಬುದು ನಿಮಗೆ ತಿಳಿದಿದೆ ಎಂದು ನನಗೆ ಖಾತ್ರಿಯಿದೆ' ಎಂದು ಕಾಲೆಳೆದಿದ್ದಾರೆ.
- " class="align-text-top noRightClick twitterSection" data="
">
ಈ ನಡುವೆ ನವೇಲಿ ಅವರ ಇತ್ತೀಚಿನ ಪೋಸ್ಟ್ ಬಗ್ಗೆ ಅವರ ಗೆಳೆಯ ಮೀಜಾನ್ ಪ್ರತಿಕ್ರಿಯಿಸಿದ್ದು, "ಅನ್ ರಿಯಲ್! ಸೂಪರ್ ಪ್ರೌಡ್ ಎಂದಿದ್ದಾರೆ. ಹಾಗೆಯೇ ರೂಪದರ್ಶಿ ಸೋನಾಲಿ ಬೆಂದ್ರೆ ಅವರು "ಅಮೇಜಿಂಗ್" ಎಂದು ಪ್ರತಿಕ್ರಿಯಿಸಿ ಪ್ರಶಂಸಿದ್ದಾರೆ. ಅದರಂತೆ ಟೀನಾ ಅಂಬಾನಿ ಅವರು, 'ನವ್ಯಾ ನೀವು ಮಾಡುವ ಎಲ್ಲಾ ಕೆಲಸಗಳ ಬಗ್ಗೆ ತುಂಬಾ ಹೆಮ್ಮೆಯಿದೆ ಎಂದಿದ್ದಾರೆ.
ಓದಿ: ಮಾಲ್ಡೀವ್ಸ್ ಬೀಚ್ನಲ್ಲಿ ಬಿಕಿನಿ ತೊಟ್ಟು ಅಭಿಮಾನಿಗಳ ಕಣ್ತಂಪು ಮಾಡಿದ ದಿಶಾ ಪಟಾನಿ!