ETV Bharat / bharat

ಕತಾರ್​​ನಿಂದ 40 ಮೆಟ್ರಿಕ್ ಟನ್​​ ಆಕ್ಸಿಜನ್​, ಸಿಲಿಂಡರ್ ಹೊತ್ತು ತಂದ 'ತ್ರಿಕಾಂಡ್'

author img

By

Published : May 23, 2021, 8:45 PM IST

Updated : May 23, 2021, 9:47 PM IST

'ಆಕ್ಸಿಜನ್​ಗಾಗಿ ಆಪರೇಷನ್​ ಸಮುದ್ರ ಸೇತು 2'ದಲ್ಲಿ ಭಾಗಿಯಾಗಿರುವ ಐಎನ್​ಎಸ್​ ತ್ರಿಕಾಂಡ್ ಇದೀಗ ಮುಂಬೈಗೆ ಬಂದು ತಲುಪಿದೆ.

INSTrikand
INSTrikand

ಮುಂಬೈ(ಮಹಾರಾಷ್ಟ್ರ): ಮಹಾಮಾರಿ ಕೊರೊನಾ ವೈರಸ್​ ವಿರುದ್ಧದ ಹೋರಾಟಕ್ಕೆ ಭಾರತೀಯ ನೌಕಾಪಡೆ ಕೈಜೋಡಿಸಿದ್ದು, ವಿವಿಧ ದೇಶಗಳಿಂದ ಆಕ್ಸಿಜನ್​ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊತ್ತು ವಿವಿಧ ಹಡಗುಗಳು ಭಾರತಕ್ಕೆ ತರುತ್ತಿವೆ.

ಸದ್ಯ ಭಾರತೀಯ ನೌಕಾಪಡೆಯ ಐಎನ್​ಎಸ್​ ತ್ರಿಕಾಂಡ್​​ 40 ಮೆಟ್ರಿಕ್​ ಟನ್​​​ ಆಕ್ಸಿಜನ್ ಹೊತ್ತು ಮುಂಬೈಗೆ ಬಂದು ತಲುಪಿದೆ. ಕತಾರ್​​ನಿಂದ ಈ ಆಕ್ಸಿಜನ್​ ಸಿಲಿಂಡರ್​ಅನ್ನು ತಂದಿದೆ.

ಭಾರತೀಯ ನೌಕಾಪಡೆಯ 9 ಹಡಗುಗಳಾದ ಕೋಲ್ಕತ್ತಾ, ಕೊಚ್ಚಿ, ತಲ್ವಾರ್​, ತಬಾರ್​, ತ್ರಿಕಾಂಡ್​, ಜಲಾಶ್ವ, ಐರಾವತ್ ಹಾಗೂ ಇತರೆ ಎರಡು ಹಡಗು ಆಪರೇಷನ್​​ ಸಮುದ್ರ ಸೇತು-II ರಲ್ಲಿ ಭಾಗಿಯಾಗಿವೆ. ಸಿಂಗಪುರ್​, ಥೈಲ್ಯಾಂಡ್​, ಗಲ್ಫ್​ ಹಾಗೂ ಕತಾರ್​​ ಸೇರಿದಂತೆ ಅನೇಕ ರಾಷ್ಟ್ರಗಳಿಂದ ಆಮ್ಲಜನಕ ಹಾಗೂ ಅಗತ್ಯ ವಸ್ತುಗಳನ್ನು ಹೊತ್ತು ತರುತ್ತಿವೆ. ಮುಂಬೈಗೆ ಐಎನ್​ಎಸ್​​ ತ್ರಿಕಾಂಡ್​ ಆಗಮಿಸಿರುವ ಮಾಹಿತಿಯನ್ನ ನೌಕಾಪಡೆಯ ವಕ್ತಾರ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: Video: ಟ್ರಕ್​ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ... ರಭಸಕ್ಕೆ ಹಾರಿ ಬಿದ್ದ ಡ್ರೈವರ್​​

ಆಪರೇಷನ್ ಸಮುದ್ರ ಸೇತು ಕಳೆದ ವರ್ಷ ಆರಂಭಗೊಂಡಿದ್ದು, ಈ ಅಭಿಯಾನದ ಮೂಲಕ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬೇರೆ ಬೇರೆ ದೇಶಗಳಲ್ಲಿ ಸಿಲುಕೊಂಡಿದ್ದವರನ್ನ ಭಾರತಕ್ಕೆ ಕರೆ ತರಲಾಗಿತ್ತು.

Last Updated : May 23, 2021, 9:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.