ಮುಂಬೈ: ಭಾರತೀಯ ನೌಕಾಪಡೆಯ ಸುಧಾರಿತ ಲಘು ಹೆಲಿಕಾಪ್ಟರ್(ಎಎಲ್ಎಚ್) ಮುಂಬೈ ಕರಾವಳಿಯಲ್ಲಿ ಇಂದು ಬೆಳಗ್ಗೆ ಅಪಘಾತಕ್ಕೀಡಾಗಿ ತುರ್ತು ಭೂಸ್ಪರ್ಶ ಕಂಡಿದೆ. ಅದರಲ್ಲಿದ್ದ ಮೂವರು ಸಿಬ್ಬಂದಿಯನ್ನು ಗಸ್ತು ಪಡೆ ರಕ್ಷಣೆ ಮಾಡಿದೆ.
ಎಂದಿನಂತೆ ಇಂದು ಬೆಳಗ್ಗೆ ಹೆಲಿಕಾಪ್ಟರ್ ಗಸ್ತು ತಿರುಗುತ್ತಿದ್ದ ವೇಳೆ ಮುಂಬೈ ಪ್ರದೇಶದ ಕರಾವಳಿ ತೀರದಲ್ಲಿ ಅಪಘಾತಕ್ಕೀಡಾಗಿ ತುರ್ತು ಭೂಸ್ಪರ್ಶ ಕಂಡಿದೆ. ತಕ್ಷಣವೇ ಮಾಹಿತಿ ಪಡೆದ ನೌಕಾ ಗಸ್ತು ಪಡೆ ಮೂವರು ಸಿಬ್ಬಂದಿಯನ್ನು ರಕ್ಷಿಸಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ನೌಕಾಪಡೆಯ ವಕ್ತಾರರು, ಭಾರತೀಯ ನೌಕಾಪಡೆಯ ಲಘು ವಿಮಾನ ಮುಂಬೈನಿಂದ ತೀರದ ಸಮೀಪದಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ಅಪಘಾತಕ್ಕೀಡಾಗಿದೆ. ವಿಮಾನ ತುರ್ತು ಭೂಸ್ಪರ್ಶ ಕಂಡಿದ್ದು, ಅದರಲ್ಲಿದ್ದ ಮೂವರು ಸಿಬ್ಬಂದಿಯನ್ನು ನೌಕಾದಳದ ಗಸ್ತು ಪಡೆ ಸುರಕ್ಷಿತವಾಗಿ ಕಾಪಾಡಿದ್ದಾರೆ. ಹೆಲಿಕಾಪ್ಟರ್ ಯಾವ ದೋಷ ಉಂಟಾಯಿತು ಎಂಬುದರ ಪತ್ತೆಗಾಗಿ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
-
Indian Navy ALH on a routine sortie off Mumbai ditched close to the coast.
— SpokespersonNavy (@indiannavy) March 8, 2023 " class="align-text-top noRightClick twitterSection" data="
Immediate Search and Rescue ensured safe recovery of crew of three by naval patrol craft.
An inquiry to investigate the incident has been ordered.
">Indian Navy ALH on a routine sortie off Mumbai ditched close to the coast.
— SpokespersonNavy (@indiannavy) March 8, 2023
Immediate Search and Rescue ensured safe recovery of crew of three by naval patrol craft.
An inquiry to investigate the incident has been ordered.Indian Navy ALH on a routine sortie off Mumbai ditched close to the coast.
— SpokespersonNavy (@indiannavy) March 8, 2023
Immediate Search and Rescue ensured safe recovery of crew of three by naval patrol craft.
An inquiry to investigate the incident has been ordered.
ಈ ಹಿಂದಿನ ಘಟನಾವಳಿಗಳು: ಕೆಲ ದಿನಗಳ ಹಿಂದೆ ರಾಜಸ್ಥಾನದ ಜಲೋರ್ ಜಿಲ್ಲೆಯ ಅಹೋರ್ ಉಪವಿಭಾಗದ ಪದರ್ಲಿ ಗ್ರಾಮದಲ್ಲಿ ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿತ್ತು. ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಸೇನೆ ನಂತರ ಸ್ಪಷ್ಟಪಡಿಸಿತ್ತು. ಜೋಧ್‌ಪುರದಿಂದ ಅಬು ರಸ್ತೆ ಎಂಬಲ್ಲಿಗೆ ತೆರಳುತ್ತಿದ್ದ ಸೇನಾ ಹೆಲಿಕಾಪ್ಟರ್‌ನಲ್ಲಿ ಮೂವರು ಸಿಬ್ಬಂದಿ ಇದ್ದರು. ತಾಂತ್ರಿಕ ದೋಷ ಕಂಡುಬಂದ ತಕ್ಷಣ ಪೈಲಟ್ ಹೆಲಿಕಾಪ್ಟರ್ ಅನ್ನು ಖಾಸಗಿ ಜಾಗದಲ್ಲಿ ಇಳಿಸಿದ್ದರು.
ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ತಾಂತ್ರಿಕ ದೋಷದಿಂದಾಗಿ ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್ ಹನುಮಾನ್‌ಗಢ ಫಾರ್ಮ್‌ನಲ್ಲಿ ತುರ್ತು ಭೂಸ್ಪರ್ಶವಾಗಿತ್ತು. ಅದೇ ತಿಂಗಳಲ್ಲಿ ವರದಿಯಾದ ಇನ್ನೊಂದು ಘಟನೆಯಲ್ಲಿ, ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಗ್ಯಾಗ್ರೆಟ್ ಪ್ರದೇಶದ ಮೇಲೆ ಹಾರಾಟ ನಡೆಸುತ್ತಿದ್ದಾಗ ನಕ್ರೋಹ್ ಗ್ರಾಮದಲ್ಲಿ ತಾಂತ್ರಿಕ ದೋಷಕ್ಕೀಡಾಗಿತ್ತು.
ಬಿಎಸ್ವೈ ಇದ್ದ ಕಾಪ್ಟರ್ಗೆ ಭದ್ರತಾ ಲೋಪ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿದ್ದ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ವೇಳೆ ಭದ್ರತಾ ಲೋಪವಾಗಿ, ಹೆಲಿಕಾಪ್ಟರ್ ಇಳಿಯದೇ ಮರು ಹಾರಾಟ ನಡೆಸಿದ್ದ ಘಟನೆ ಮೊನ್ನೆ ಕಲಬುರಗಿಯಲ್ಲಿ ನಡೆದಿತ್ತು. ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆಯಲ್ಲಿ ಜಿಲ್ಲೆಯ ಜೇವರ್ಗಿ ಪಟ್ಟಣಕ್ಕೆ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದರು. ಪಟ್ಟಣದ ಹೊರವಲಯದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿತ್ತು. ಹೆಲಿಕಾಪ್ಟರ್ ಲ್ಯಾಂಡ್ ಆಗುವಾಗ ಗಾಳಿಗೆ ಹೆಲಿಪ್ಯಾಡ್ ಸುತ್ತ ಜಮೀನಿನಲ್ಲಿದ್ದ ಬಿಸಾಡಲಾಗಿದ್ದ ಪ್ಲಾಸ್ಟಿಕ್ ಚೀಲಗಳು, ವಸ್ತುಗಳು ಹಾರಿಕೊಂಡು ಬಂದಿದ್ದವು. ತಕ್ಷಣ ಎಚ್ಚೆತ್ತ ಪೈಲಟ್ ಕಾಪ್ಟರ್ ಅನ್ನು ಟೇಕ್ ಆಫ್ ಮಾಡಿದ್ದರು. ಪೊಲೀಸರು ಪ್ಲಾಸ್ಟಿಕ್ ಚೀಲಗಳನ್ನು ತೆರವು ಮಾಡಿದ ಬಳಿಕ ಪೈಲಟ್ ಸುರಕ್ಷಿತವಾಗಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ್ದರು.
ಇದನ್ನೂ ಓದಿ: ನಿರುಪಯಕ್ತ ಉಪಗ್ರಹವನ್ನು ಭೂಮಿಗೆ ಯಶಸ್ವಿಯಾಗಿ ಇಳಿಸಿದ ಇಸ್ರೋ!