ETV Bharat / bharat

ವಿದ್ಯಾರ್ಥಿನಿಯರಿಗೆ ₹20 ಸಾವಿರ, ಗೃಹಿಣಿಯರಿಗೆ ಮಾಸಿಕ ₹2 ಸಾವಿರ, ವರ್ಷಕ್ಕೆ 8 LPG ಸಿಲಿಂಡರ್​​ ಫ್ರೀ: ಸಿಧು ಭರ್ಜರಿ ಘೋಷಣೆ

Punjab Assembly Election 2022: ಪಂಜಾಬ್​ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ನವಜೋತ್​​ ಸಿಂಗ್​ ಸಿಧು ಅಲ್ಲಿನ ಜನರಿಗೆ ಭರ್ಜರಿ ಘೋಷಣೆ ಮಾಡಿದ್ದಾರೆ.

Punjab Assembly Election 2022
Punjab Assembly Election 2022
author img

By

Published : Jan 3, 2022, 7:19 PM IST

ಅಮೃತಸರ(ಪಂಜಾಬ್​​): ಪಂಜಾಬ್​​ನಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್​, ಆಮ್​ ಆದ್ಮಿ ಹಾಗೂ ಬಿಜೆಪಿ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.

ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ರಾಜಕೀಯ ಪಕ್ಷಗಳು ಭರ್ಜರಿ ಚುನಾವಣಾ ಘೋಷಣೆಗಳನ್ನು ಮಾಡುತ್ತಿವೆ. ಇದೀಗ ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ನವಜೋತ್‌ ಸಿಂಗ್‌ ಸಿಧು ಘೋಷಣೆಗಳ ಮಹಾಪೂರವನ್ನೇ ಹರಿಸಿದ್ದಾರೆ.

  • Punjab | Congress will give Rs 5000 & Rs 15000 each to girl students on passing Class 5 & Class 10, respectively. We'll give Rs 20,000 to each girl student when she passes Class 12. To help girl students pursue higher studies, we'll give them computer tablets: Navjot S Sidhu,Cong pic.twitter.com/gXEnqM7g2m

    — ANI (@ANI) January 3, 2022 " class="align-text-top noRightClick twitterSection" data=" ">

ಪಂಜಾಬ್​​ನಲ್ಲಿ ತಮ್ಮ ಕಾಂಗ್ರೆಸ್ ಸರ್ಕಾರ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬಂದರೆ ಗೃಹಿಣಿಯರಿಗೆ ಮಾಸಿಕ ₹2 ಸಾವಿರ ರೂ, ಪ್ರತಿ ವರ್ಷ 8 ಎಲ್​​ಪಿಜಿ ಸಿಲಿಂಡರ್​​ ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ, ವಿದ್ಯಾರ್ಥಿನಿಯರ ಉನ್ನತ ವ್ಯಾಸಂಗಕ್ಕಾಗಿ ಕಾಲೇಜು​ ಪ್ರವೇಶ ಪಡೆದುಕೊಳ್ಳುವವರಿಗೆ ದ್ವಿಚಕ್ರ ವಾಹನದ ಜೊತೆಗೆ ಕಂಪ್ಯೂಟರ್ ಉಚಿತವಾಗಿ​ ನೀಡುವುದಾಗಿ ಹೇಳಿದ್ದಾರೆ.

12ನೇ ತರಗತಿ ಪಾಸ್​ ಆಗುವ ವಿದ್ಯಾರ್ಥಿನಿಯರಿಗೆ ₹20 ಸಾವಿರ, 10ನೇ ತರಗತಿ ಪಾಸ್​ ಆಗುವ ವಿದ್ಯಾರ್ಥಿನಿಯರಿಗೆ ₹15 ಸಾವಿರ ರೂ. ಹಾಗೂ 5ನೇ ತರಗತಿ ಪಾಸ್​​ ಆಗುವ ಬಾಲಕಿಯರಿಗೆ ₹5 ಸಾವಿರ ರೂ. ನೀಡುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಕಣಿವೆ ನಾಡಿನಲ್ಲಿ ಶೂಟೌಟ್​​: ಎಲ್‌ಇಟಿಯ ಪ್ರಮುಖ ಕಮಾಂಡರ್‌ ಹತ್ಯೆಗೈದ ಸೇನೆ

ಕೇಂದ್ರದ ವಿರುದ್ಧ ಸಿಧು ವಾಗ್ದಾಳಿ

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನವಜೋತ್​ ಸಿಂಗ್​ ಸಿಧು, ದೇಶದಲ್ಲಿ ತೈಲ ಬೆಲೆ ಏರಿಕೆ ಹಾಗೂ ಸಿಲಿಂಡರ್ ಬೆಲೆ ಏರಿಕೆಯಾಗುತ್ತಿದ್ದು, ಇದರಿಂದ ಜನರು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ನೇರ ಕಾರಣ ಕೇಂದ್ರ ಸರ್ಕಾರದ ನೀತಿಗಳು ಎಂದರು.

ಕಳೆದ ಐದು ವರ್ಷಗಳಲ್ಲಿ ತೈಲ ಬೆಲೆ 50 ರೂ ದಿಂದ 100ಕ್ಕೆ ಏರಿಕೆಯಾಗಿದ್ದು, ಸಿಲಿಂಡರ್​ 400ರಿಂದ 900 ರೂ. ಆಗಿದೆ. ಅಡುಗೆ ತೈಲ ಬೆಲೆ ಐದರಷ್ಟು ದುಪ್ಪಟ್ಟು ಆಗಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.