ETV Bharat / bharat

ಮೋದಿ ಸರ್ಕಾರದಿಂದ ಪ್ರಜಾಪ್ರಭುತ್ವ ಹರಣ; ದಿಶಾ ಬಿಡುಗಡೆಗೆ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್​ ಒತ್ತಾಯ

ಪ್ರಧಾನಿ ಮೋದಿ ತಮ್ಮ ಹಾಗೂ ಬಿಜೆಪಿ ಅಭಿಪ್ರಾಯಗಳನ್ನು ವಿರೋಧಿಸುವವರನ್ನು ಗುರಿಯಾಗಿಸಿಕೊಂಡಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ನಾಶ ಮಾಡುವುದು ಬಿಜೆಪಿಯ ಗುರಿಯಾಗಿದೆ. ಅಸಹಕಾರ ಮತ್ತು ಸತ್ಯಾಗ್ರಹ ಮಹಾತ್ಮರ ಅಂತರಿಕ ಸಾಧನಗಳಾಗಿವೆ..

national-womens-congress-demands-release-of-disha
ರಾಷ್ಟ್ರೀಯ ಮಹಿಳಾ ಕಾಂಗ್ರೆಸ್​
author img

By

Published : Feb 15, 2021, 4:00 PM IST

Updated : Feb 15, 2021, 4:53 PM IST

ನವದೆಹಲಿ : ನೂತನ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬುದಕ್ಕೆ ಸಂಬಂಧಪಟ್ಟಂತೆ 'ಟೂಲ್‌ಕಿಟ್' ಸಿದ್ಧಪಡಿಸಿದ್ದ ಆರೋಪದ ಮೇಲೆ ಬೆಂಗಳೂರಿನ 21 ವರ್ಷ ವಯಸ್ಸಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಬಂಧಿಸಲಾಗಿದೆ. ಇದಕ್ಕೆ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್​ ಭಾರಿ ವಿರೋಧ ವ್ಯಕ್ತಪಡಿಸಿದ್ದು, ದಿಶಾ ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದೆ.

ದಿಶಾ ರವಿ ಅವರನ್ನು ಅಕ್ರಮವಾಗಿ ಬಂಧಿಸಿದ್ದನ್ನು ಖಂಡಿಸುತ್ತೇವೆ. ದೆಹಲಿ ಪೊಲೀಸರು ಕ್ರಿಮಿನಲ್​ ಸಂವಿಧಾನದ ಎಲ್ಲಾ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಿದ್ದಾರೆ.

ರಾಜ್ಯಗಳ ನಡುವೆ ಸ್ಥಾಳಾಂತರಿಸುವ ಸಮಯದಲ್ಲಿ ಸಾರಿಗೆ ರಿಮಾಂಡ್​​ನ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಅಲ್ಲದೆ, ಆಕೆಗೆ ಕಾನೂನು ಸಲಹೆಗಾರನನ್ನು ಪಡೆಯಲು ಅವಕಾಶ ನೀಡಿಲ್ಲ. ಇಲ್ಲಿ ಆರ್ಟಿಕಲ್ ​​22ರ ಷರತ್ತು(1) ಉಲ್ಲಂಘನೆಯಾಗಿದೆ.

ಒಟ್ಟಾರೆ, ಕಾನೂನಿನಿಂದ ಸ್ಥಾಪಿಸಲ್ಪಟ್ಟ ಕಾರ್ಯವಿಧಾನದ ಬಗ್ಗೆ ಸಂಪೂರ್ಣ ಅಪಹಾಸ್ಯ ಮಾಡಿದೆ. ದೆಹಲಿ ಪೊಲೀಸರ ಇಂತಹ ಕಾನೂನುಬಾಹಿರ ಕ್ರಮಗಳು ಕಾನೂನಿನ ನೆಪದಲ್ಲಿ ಅಪಹರಣಕ್ಕೆ ಕಾರಣವಾಗುತ್ತವೆ. ಆದ್ದರಿಂದ ದಿಶಾ ಅವರನ್ನು ಅಕ್ರಮ ಬಂಧನದಿಂದ ತಕ್ಷಣ ಬಿಡುಗಡೆ ಮಾಡಬೇಕು. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಕಾಂಗ್ರೆಸ್​​​ ಒತ್ತಾಯಿಸಿದೆ.

ಪ್ರಧಾನಿ ಮೋದಿ ತಮ್ಮ ಹಾಗೂ ಬಿಜೆಪಿ ಅಭಿಪ್ರಾಯಗಳನ್ನು ವಿರೋಧಿಸುವವರನ್ನು ಗುರಿಯಾಗಿಸಿಕೊಂಡಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ನಾಶ ಮಾಡುವುದು ಬಿಜೆಪಿಯ ಗುರಿಯಾಗಿದೆ. ಅಸಹಕಾರ ಮತ್ತು ಸತ್ಯಾಗ್ರಹ ಮಹಾತ್ಮರ ಅಂತರಿಕ ಸಾಧನಗಳಾಗಿವೆ.

ಗಾಂಧೀಜಿಯವರ ತತ್ವಗಳು ಈ ರಾಷ್ಟ್ರದ ಜೀವನಾಡಿಯಲ್ಲಿ ಅವುಗಳು ಬೇರೂರಿವೆ. 'ವಾಕ್ ಸ್ವಾತಂತ್ರ್ಯ' ಮತ್ತು 'ಪ್ರತಿಭಟನೆಯ ಹಕ್ಕು' ಎನ್ನುವುದು ಆರ್ಟಿಕಲ್ 19ರ ಅಡಿ ಒಂದು ಮೂಲಭೂತ ಹಕ್ಕು. ಈ ಹಕ್ಕುಗಳನ್ನು ನಿಗ್ರಹಿಸುವಲ್ಲಿ ಮತ್ತು ಮುಚ್ಚಲು ಮೋದಿ ಸರ್ಕಾರ ಮುಂದಾಗಿದೆ.

ಇದರಿಂದ ಈಗಾಗಲೇ ದಿಶಾ ರವಿ, ನದೀಪ್ ಕೌರ್ ಮತ್ತು ನೂರಾರು ಜನರು ಕಾಣೆಯಾಗಿದ್ದಾರೆ. ಪತ್ರಕರ್ತರು ವಿರೋಧ ಪಕ್ಷದ ಸದಸ್ಯರ ವಿರುದ್ಧ ಎಫ್​​​ಐಆರ್​​ ದಾಖಲಿಸುವುದು. ಪ್ರಶ್ನಿಸಿದವರ ಮೇಲೆ ದೇಶದ್ರೋಹ, ಅರ್ಬನ್​ ನಕ್ಸಲ್​​, ಖಾನ್​ ಎಂದು ಲೇಬಲ್​ ನೀಡುತ್ತಿದ್ದಾರೆ.

ಮಾರ್ಕೆಟ್​​ ಗ್ಯಾಂಗ್​​​, ಲುಟಿಯನ್ಸ್​​ ಗ್ಯಾಂಗ್​​, ಆಂಟಿ-ನ್ಯಾಷನಲ್ಸ್​​​, ಆಂದೋಲನ ಜೀವಿ ಇತ್ಯಾದಿಗಳೆಲ್ಲವನ್ನು ಪಿಎಂ ನರಂದ್ರ ಮೋದಿ ಹೊಸ ಭಾರತ ಎಂದು ಕರೆಯುತ್ತಾರೆ ಎಂದು ದೂರಿದ್ದಾರೆ.

Last Updated : Feb 15, 2021, 4:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.