ETV Bharat / bharat

'ಜಾಗತಿಕ ಯೋಗಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ': ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವ

author img

By

Published : Feb 27, 2023, 7:47 PM IST

ಭಾರತವು ಪ್ರತಿವರ್ಷ 'ರಾಷ್ಟ್ರೀಯ ವಿಜ್ಞಾನ ದಿನ' ಆಚರಿಸುತ್ತಿದೆ.

Bharat Ratna C V Raman
ಭಾರತ ರತ್ನ ಸಿ.ವಿ. ರಾಮನ್​

ಶ್ರೇಷ್ಠ ಭಾರತೀಯ ವಿಜ್ಞಾನಿ, ಭೌತ ವಿಜ್ಞಾನಿ ಸಿ.ವಿ.ರಾಮನ್​ ಅವರು ಆವಿಷ್ಕರಿಸಿದ್ದ 'ರಾಮನ್ ಎಫೆಕ್ಟ್' ಅನ್ನು ಗೌರವಿಸಲು ಭಾರತವು ಪ್ರತಿವರ್ಷ ಫೆಬ್ರವರಿ 28ರಂದು 'ರಾಷ್ಟ್ರೀಯ ವಿಜ್ಞಾನ ದಿನ'ವನ್ನು ಆಚರಿಸುತ್ತದೆ. ವಿಜ್ಞಾನವು ನಮ್ಮ ಜೀವನದ ಮೇಲೆ ಬೀರಿದ ಪ್ರಭಾವವನ್ನು ಈ ಮೂಲಕ ಸ್ಮರಿಸಲಾಗುತ್ತಿದೆ.

ಐತಿಹಾಸಿಕ ದಿನದ ಸ್ಮರಣೆ: 'ರಾಮನ್ ಎಫೆಕ್ಟ್' ಅನ್ನು 1928ರಲ್ಲಿ ಫೆಬ್ರವರಿ 28 ರಂದು ಆವಿಷ್ಕಾರ ಮಾಡಲಾಗಿದೆ. ವಿದ್ಯಾರ್ಥಿಗಳು ವಿಜ್ಞಾನ ಆಯ್ಕೆ ಮಾಡಿಕೊಳ್ಳಲು ಪ್ರೇರೇಪಿಸಲು ಮತ್ತು ವಿಜ್ಞಾನ ಕ್ಷೇತ್ರದತ್ತ ಕುತೂಹಲ ಹುಟ್ಟುವಂತೆ ಮಾಡಲು ಈ ದಿನಾಚರಿಸಲಾಗುತ್ತದೆ. "ಜಾಗತಿಕ ಯೋಗಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ" ಎಂಬ ಘೋಷ ವಾಕ್ಯದೊಂದಿಗೆ ಪ್ರಸಕ್ತ ವರ್ಷ ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆ ನಡೆಯುತ್ತಿದೆ.

ಇದನ್ನೂ ಓದಿ: ಅರಿವಳಿಕೆ ನೀಡಿದಾಗ ವ್ಯಕ್ತಿಗೆ ಆಕಸ್ಮಿಕ ಎಚ್ಚರವಾಗುವುದನ್ನು ಪತ್ತೆ ಮಾಡುವ ವಿಧಾನ ಕಂಡುಹಿಡಿದ ಸಂಶೋಧಕರು

'ರಾಮನ್ ಎಫೆಕ್ಟ್': 'ರಾಮನ್ ಎಫೆಕ್ಟ್' ಅಥವಾ 'ರಾಮನ್ ಸ್ಕ್ಯಾಟರಿಂಗ್' ಪ್ರಕಾರ, ಬೆಳಕಿನ ಕಿರಣವು ಪಾರದರ್ಶಕ ವಸ್ತುವಿನ ಮೂಲಕ ಹಾದುಹೋದಾಗ, ಅದು ವಸ್ತುವಿನ ಆಣ್ವಿಕ ರಚನೆಯ ಬಗ್ಗೆ ಮಾಹಿತಿ ಬಹಿರಂಗಪಡಿಸುವ ರೀತಿಯಲ್ಲಿ ಹರಡುತ್ತದೆ. ಈ ಸಂಶೋಧನೆಯಿಂದ ಸಿ.ವಿ.ರಾಮನ್ ಅವರಿಗೆ ಭೌತಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿತ್ತು. ಈ ಆವಿಷ್ಕಾರದ ನಂತರ, ಭಾರತ ಸರ್ಕಾರವು ರಾಮನ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ನೀಡಿ ಗೌರವಿಸಿತ್ತು.

ಇದನ್ನೂ ಓದಿ: ಹಿಮಪದರುಗಳ ಚಲನೆಗೂ ಸಮುದ್ರಮಟ್ಟ ಏರುವಿಕೆಗೂ ಸಂಬಂಧವಿದೆ: ಸಂಶೋಧನೆಯಲ್ಲಿ ಬಹಿರಂಗ

ವಿಜ್ಞಾನಿಗಳಿಗೆ ಪ್ರೋತ್ಸಾಹ: ಪ್ರತೀ ವರ್ಷ ಈ ಆವಿಷ್ಕಾರದ ವಾರ್ಷಿಕೋತ್ಸವದಂದು, ಭಾರತ ಸರ್ಕಾರವು ವಿಜ್ಞಾನ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ ವಿಜ್ಞಾನಿಗಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದೆ. ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ರಾಮನ್ ಅವರ ಮಹತ್ವದ ಆವಿಷ್ಕಾರವನ್ನು ತಿಳಿಸಲು ದೇಶಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮಾನವನ ಕಲ್ಯಾಣಕ್ಕಾಗಿ ವಿಜ್ಞಾನದ ಮಹತ್ವವನ್ನು ಅಂಗೀಕರಿಸುವ ದಿನವೂ ಇದಾಗಿದೆ. ಈ ದಿನವು ನಮಗೆ ಹೊಸ ತಂತ್ರಜ್ಞಾನಗಳ ಅನುಷ್ಠಾನ ಮತ್ತು ವಿಜ್ಞಾನದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಮತ್ತು ದೇಶದ ವೈಜ್ಞಾನಿಕ ಮನೋಭಾವದ ನಾಗರಿಕರಿಗೆ ಅವಕಾಶ ನೀಡಲು ಪೂರಕವಾಗಿದೆ.

ವಿಜ್ಞಾನ ದಿನದ ಚಟುವಟಿಕೆಗಳು: ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ವಿಜ್ಞಾನ ಯೋಜನೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ರಾಷ್ಟ್ರೀಯ ಮತ್ತು ರಾಜ್ಯ ವಿಜ್ಞಾನ ಸಂಸ್ಥೆಗಳು ತಮ್ಮ ಇತ್ತೀಚಿನ ಸಂಶೋಧನೆಗಳನ್ನು ಪ್ರದರ್ಶಿಸಲಿದ್ದಾರೆ. ಈ ದಿನಾಚರಣೆಯು ಸಾರ್ವಜನಿಕ ಭಾಷಣಗಳು, ರೇಡಿಯೋ-ಟಿವಿ ಟಾಕ್ ಶೋಗಳು, ವಿಜ್ಞಾನ ಚಲನಚಿತ್ರ ಪ್ರದರ್ಶನಗಳು, ವಿಜ್ಞಾನ ವಸ್ತು ಪ್ರದರ್ಶನಗಳು, ನಕ್ಷತ್ರ ವೀಕ್ಷಣೆ, ಲೈವ್ ವಿಜ್ಞಾನ ಕಾರ್ಯಕ್ರಮಗಳು, ಚರ್ಚೆಗಳು, ರಸಪ್ರಶ್ನೆ ಸ್ಪರ್ಧೆಗಳು, ಉಪನ್ಯಾಸಗಳು ಹಾಗೂ ಇತರ ಅನೇಕ ಚಟುವಟಿಕೆಗಳನ್ನು ಒಳಗೊಂಡಿವೆ.

ಇದನ್ನೂ ಓದಿ: ಕ್ರೋಮ್​ನಲ್ಲಿ ಶೇ 300ರಷ್ಟು ಜೂಮಿಂಗ್: ಹೊಸ ವೈಶಿಷ್ಟ್ಯ ಪರಿಚಯಿಸಿದ ಗೂಗಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.