ಇಂದು ಸ್ವತಂತ್ರ ಮತ್ತು ಜವಾಬ್ದಾರಿಯುತ ಪತ್ರಿಕಾ ಉಪಸ್ಥಿತಿಯನ್ನು ಸೂಚಿಸುವ ರಾಷ್ಟ್ರೀಯ ಪತ್ರಿಕಾ ದಿನ. ಪ್ರತಿ ವರ್ಷ ನವೆಂಬರ್ 16ರಂದು ಸ್ವತಂತ್ರ ಪತ್ರಿಕಾ ಅಸ್ತಿತ್ವವನ್ನು ಸಾರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ (ಪಿಐಬಿ) ಗೌರವ ಸಮರ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ನಡೆಯುತ್ತದೆ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವು ಪ್ರತಿಯೊಬ್ಬ ಪತ್ರಕರ್ತನ ಹೊಣೆಗಾರಿಕೆ, ಪತ್ರಿಕೆಯ ರಕ್ಷಣೆ ಮತ್ತು ಪತ್ರಿಕಾ ಸ್ವಾತಂತ್ರ್ಯದ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಈ ಸಲದ ಪತ್ರಿಕಾ ದಿನಾಚರಣೆಗೆ ಪಿಐಬಿ ನವದೆಹಲಿಯ ವಿಜ್ಞಾನ ಭವನದಲ್ಲಿ "ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾಧ್ಯಮ" ಎಂಬ ವಿಷಯದ ಮೇಲೆ ರಾಷ್ಟ್ರೀಯ ಪತ್ರಿಕಾ ದಿನ ಆಯೋಜಿಸಿದೆ.
-
Press Council of India is organizing National Press Day on the theme “Media in the Era of Artificial Intelligence” on November 16, 2023 at Vigyan Bhawan, New Delhi.
— Press Council of India (@PressCouncil_IN) November 15, 2023 " class="align-text-top noRightClick twitterSection" data="
">Press Council of India is organizing National Press Day on the theme “Media in the Era of Artificial Intelligence” on November 16, 2023 at Vigyan Bhawan, New Delhi.
— Press Council of India (@PressCouncil_IN) November 15, 2023Press Council of India is organizing National Press Day on the theme “Media in the Era of Artificial Intelligence” on November 16, 2023 at Vigyan Bhawan, New Delhi.
— Press Council of India (@PressCouncil_IN) November 15, 2023
ಪಿಐಬಿ ಹುಟ್ಟು: 1956ರಲ್ಲಿ ಮೊದಲ ಪತ್ರಿಕಾ ಆಯೋಗವು ಪತ್ರಿಕೋದ್ಯಮದಲ್ಲಿ ವೃತ್ತಿಪರ ನೈತಿಕತೆಯನ್ನು ಪ್ರೋತ್ಸಾಹಿಸಲು ಹಾಗೂ ನಿರ್ವಹಿಸಲು ಶಾಸನಬದ್ಧ ಅಧಿಕಾರ ಹೊಂದಿರುವ ಸಂಸ್ಥೆ ರಚಿಸಲು ನಿರ್ಧರಿಸಿತು. ಈ ಉದ್ದೇಶದಿಂದಲೇ 1966ರಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸ್ಥಾಪನೆಯಾಯಿತು. 1966 ನವೆಂಬರ್ 16ರಿಂದ ಸಂಸ್ಥೆ ತನ್ನ ಕಾರ್ಯ ನಿರ್ವಹಿಸಲು ಪ್ರಾರಂಭಿಸಿತು. ಪ್ರೆಸ್ ಕೌನ್ಸಿಲ್ ಆರಂಭವಾದಾಗದಿಂದಲೂ ಸಂಸ್ಥೆಯು ತನ್ನ ಉದ್ದೇಶವನ್ನು ಶ್ರದ್ಧೆಯಿಂದ ಪಾಲಿಸಿಕೊಂಡು ಬಂದಿದೆ.
-
National Awards for Excellence in Journalism,
— Prof (Dr) Jasim Mohammad 🇮🇳 (@jasimmohammad_) July 5, 2023 " class="align-text-top noRightClick twitterSection" data="
Last Date Apply: August 12, 2023@09seemasharma @animedianetwork @divs13 @JagranNews @ArchisMohan @hajipurrajesh @PCITweets @pressfreedom @spj_tweets @ANI @rishi_suri @TheDailyMilap @RisingKashmir @tallstories @mohammedTOI… pic.twitter.com/WIIG3oLUfU
">National Awards for Excellence in Journalism,
— Prof (Dr) Jasim Mohammad 🇮🇳 (@jasimmohammad_) July 5, 2023
Last Date Apply: August 12, 2023@09seemasharma @animedianetwork @divs13 @JagranNews @ArchisMohan @hajipurrajesh @PCITweets @pressfreedom @spj_tweets @ANI @rishi_suri @TheDailyMilap @RisingKashmir @tallstories @mohammedTOI… pic.twitter.com/WIIG3oLUfUNational Awards for Excellence in Journalism,
— Prof (Dr) Jasim Mohammad 🇮🇳 (@jasimmohammad_) July 5, 2023
Last Date Apply: August 12, 2023@09seemasharma @animedianetwork @divs13 @JagranNews @ArchisMohan @hajipurrajesh @PCITweets @pressfreedom @spj_tweets @ANI @rishi_suri @TheDailyMilap @RisingKashmir @tallstories @mohammedTOI… pic.twitter.com/WIIG3oLUfU
ಸಂಸ್ಥೆಯ ರಚನೆ: ಇದರ ಅಧ್ಯಕ್ಷರು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರಾಗಿರುತ್ತಾರೆ. ಇವರನ್ನು ಹೊರತುಪಡಿಸಿ 28 ಇತರ ಸದಸ್ಯರಿದ್ದಾರೆ. ಈ ಪೈಕಿ 20 ಮಂದಿ ಪತ್ರಿಕಾ ಮಾಧ್ಯಮದವರು, 5 ಸದಸ್ಯರನ್ನು ಸಂಸತ್ತಿನ ಉಭಯ ಸದನಗಳಿಂದ ನಾಮನಿರ್ದೇಶನ ಮಾಡಲಾಗುತ್ತದೆ. ಉಳಿದ ಮೂವರು ಸದಸ್ಯರು ಸಾಂಸ್ಕೃತಿಕ, ಸಾಹಿತ್ಯ ಮತ್ತು ಕಾನೂನು ಕ್ಷೇತ್ರಗಳ ಪ್ರತಿನಿಧಿಗಳಾಗಿರುತ್ತಾರೆ.
-
P.C.I. will be observing National Press Day on November 16, 2023 at Vigyan Bhawan, New Delhi on the theme “Media in the Era of Artificial Intelligence” to be inaugurated by Hon’ble Vice-President of India, Shri Jagdeep Dhankar.
— Press Council of India (@PressCouncil_IN) November 15, 2023 " class="align-text-top noRightClick twitterSection" data="
">P.C.I. will be observing National Press Day on November 16, 2023 at Vigyan Bhawan, New Delhi on the theme “Media in the Era of Artificial Intelligence” to be inaugurated by Hon’ble Vice-President of India, Shri Jagdeep Dhankar.
— Press Council of India (@PressCouncil_IN) November 15, 2023P.C.I. will be observing National Press Day on November 16, 2023 at Vigyan Bhawan, New Delhi on the theme “Media in the Era of Artificial Intelligence” to be inaugurated by Hon’ble Vice-President of India, Shri Jagdeep Dhankar.
— Press Council of India (@PressCouncil_IN) November 15, 2023
ಉದ್ದೇಶ, ಜವಾಬ್ದಾರಿ: ಪ್ರಜಾಪ್ರಭುತ್ವದ 4ನೇ ಸ್ತಂಭವಾಗಿರುವ ಮಾಧ್ಯಮ ರಂಗವನ್ನು ಶ್ರೀಮಂತರ ಪ್ರಭಾವ, ರಾಜಕೀಯ ಹಸ್ತಕ್ಷೇಪ, ಮಾಧ್ಯಮ ಕಾರ್ಯಕರ್ತರಿಗೆ ಬೆದರಿಕೆಗಳಿಂದ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ರಕ್ಷಿಸುವುದಲ್ಲದೆ ಇನ್ನೂ ಹಲವು ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಇನ್ನುಳಿದಂತೆ,
- ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆ.
- ಮಾಧ್ಯಮ ಗುಣಮಟ್ಟದ ಸುಧಾರಣೆ.
- ಪ್ರಜಾಪ್ರಭುತ್ವದ ಆರೋಗ್ಯ ಕಾಪಾಡುವುದು.
- ಮಾಧ್ಯಮ ಕಾರ್ಯಚಟುವಟಿಕೆಗಳ ಮೇಲ್ವಿಚಾರಣೆ.
- ಪತ್ರಿಕಾ ಸಂಬಂಧಿತ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು.
- ವಿಚಾರಗಳ ನಿರ್ಧಾರಗಳ ಬಗ್ಗೆ ಸರ್ಕಾರ/ಸಂಬಂಧಿತ ಪಕ್ಷಗಳಿಗೆ ತಿಳಿಸುವುದು.
- ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕಾರ್ಯನಿರ್ವಹಿಸುವುದು.
- ಧ್ವನಿಯಿಲ್ಲದವರಿಗೆ ಧ್ವನಿಯಾಗಿ ನಿಲ್ಲುವುದು.
- ಸುದ್ದಿಸಂಸ್ಥೆಗಳು ಮತ್ತು ಪತ್ರಕರ್ತರಲ್ಲಿ ಉನ್ನತ ವೃತ್ತಿಪರ ಮಾನದಂಡಗಳು ಹಾಗೂ ನೈತಿಕ ನಡವಳಿಕೆಯನ್ನು ಉತ್ತೇಜಿಸುವುದು.
- ಜವಾಬ್ದಾರಿಯುತ ಮತ್ತು ನಿಷ್ಪಕ್ಷಪಾತ ಪತ್ರಿಕೋದ್ಯಮದ ತತ್ವಗಳನ್ನು ಎತ್ತಿಹಿಡಿಯುವುದು ಪಿಐಬಿಯ ಪ್ರಮುಖ ಉದ್ದೇಶ ಮತ್ತು ಜವಾಬ್ದಾರಿಗಳಾಗಿವೆ.
ಮುಕ್ತ, ನಿರ್ಭೀತ, ನ್ಯಾಯನಿಷ್ಠ ಹಾಗೂ ಮೌಲ್ಯಯುತವಾಗಿ ಕಾರ್ಯನಿರ್ವಹಿಸುವ ಎಲ್ಲಾ ಪರ್ತಕರ್ತರಿಗೂ 'ಈಟಿವಿ ಭಾರತ್'ನಿಂದ ರಾಷ್ಟ್ರೀಯ ಪತ್ರಿಕಾ ದಿನದ ಶುಭಾಶಯಗಳು.
ಇದನ್ನೂ ಓದಿ: 30 ವರ್ಷದಲ್ಲಿ ವಿಶ್ವದಾದ್ಯಂತ 1,600ಕ್ಕೂ ಹೆಚ್ಚು ಪತ್ರಕರ್ತರ ಹತ್ಯೆ!