ETV Bharat / bharat

ರಾಷ್ಟ್ರೀಯ ಶಿಕ್ಷಣ ದಿನ: ದೇಶದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಸ್ಮರಣೆ

author img

By ETV Bharat Karnataka Team

Published : Nov 11, 2023, 11:44 AM IST

National Education Day: ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದಂದು ಪ್ರತಿ ವರ್ಷ ನವೆಂಬರ್ 11ರಂದು ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸಲಾಗುತ್ತದೆ.

National Education Day
ರಾಷ್ಟ್ರೀಯ ಶಿಕ್ಷಣ ದಿನ: ದೇಶದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಸ್ಮರಣೆ

ಹೈದರಾಬಾದ್: ಶಿಕ್ಷಣವು ಜ್ಞಾನದ ಹೆಬ್ಬಾಗಿಲು, ಕಲಿಕೆಯನ್ನು ವಿವಿಧ ರೂಪಗಳಲ್ಲಿ ಬೆಳೆಸುತ್ತದೆ. ವಾರ್ಷಿಕವಾಗಿ ನವೆಂಬರ್ 11ರಂದು ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ. ಈ ದಿನಾಚರಣೆ ಮೂಲಕ ಖ್ಯಾತ ವಿದ್ವಾಂಸ ಹಾಗೂ ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.

ಮೌಲಾನಾ ಅಬುಲ್ ಕಲಾಂ ಆಜಾದ್, ನವೆಂಬರ್ 11, 1888 ರಂದು ಜನಿಸಿದ್ದರು. ಭಾರತರತ್ನ ಆಜಾದ್ ಅವರು ಶಿಕ್ಷಣ ಕ್ಷೇತ್ರಕ್ಕೆ ಉನ್ನತ ಕೊಡುಗೆಗಳನ್ನು ನೀಡಿದ್ದಾರೆ. ಖಿಲಾಫತ್ ಚಳವಳಿ, ಅಸಹಕಾರ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. "ಇಂಡಿಯಾ ವಿನ್ಸ್ ಫ್ರೀಡಮ್" ಮತ್ತು "ಘುಬರ್-ಎ-ಖಾತಿರ್" ಎಂಬ ಕೃತಿಗಳನ್ನು ಬರೆದಿದ್ದರು. ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಇತರ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಆಜಾದ್​ ಅವರು 1923ರಿಂದ 1940ರ ವರೆಗೆ ಹಾಗೂ 1940 ರಿಂದ 1945ರ ವರೆಗೆ ಕಾಂಗ್ರೆಸ್​ನ ಅಧ್ಯಕ್ಷರಾಗಿದ್ದರು.

ಶಿಕ್ಷಣದ ಮೂಲತತ್ವವು ವ್ಯಕ್ತಿಗಳನ್ನು ಜ್ಞಾನದಿಂದ ಸಬಲಗೊಳಿಸುವುದು. ಅವರ ತಿಳುವಳಿಕೆ, ಮೌಲ್ಯಗಳು, ಸಾಮರ್ಥ್ಯಗಳು, ಅಭ್ಯಾಸಗಳು ಮತ್ತು ನಂಬಿಕೆಗಳನ್ನು ರೂಪಿಸುವಲ್ಲಿ ಶಿಕ್ಷಣ ಉತ್ತಮವಾದ ಪಾತ್ರವಹಿಸುತ್ತದೆ. ಇದು ಔಪಚಾರಿಕ ಶಾಲಾ ಶಿಕ್ಷಣವನ್ನು ಮೀರಿ ವಿಸ್ತರಿಸುತ್ತದೆ. ಸಮಾಜದ ಪರಿವರ್ತನೆ, ಅಪರಾಧ ತಡೆಗಟ್ಟುವಿಕೆ, ಮಹಿಳಾ ಸಬಲೀಕರಣ, ಬಡತನ ನಿರ್ಮೂಲನೆ ಮತ್ತು ಶಾಂತಿಯನ್ನು ಬೆಳೆಸುವಲ್ಲಿ ಶಿಕ್ಷಣವು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಭಾರತದಲ್ಲಿರುವ ಇಂದಿನ ಶಿಕ್ಷಣ: ದೇಶದಲ್ಲಿ 15 ಲಕ್ಷ ಶಾಲೆಗಳು, 26.5 ಕೋಟಿ ವಿದ್ಯಾರ್ಥಿಗಳು ಮತ್ತು ಶಾಲಾ ಮಟ್ಟದಲ್ಲಿ 95 ಲಕ್ಷ ಶಿಕ್ಷಕರು ಇದ್ದಾರೆ. ದೇಶದ ಉನ್ನತ ಶಿಕ್ಷಣ ವ್ಯಾಪ್ತಿಯಲ್ಲಿ 43,796 ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. 1,113 ವಿಶ್ವವಿದ್ಯಾಲಯಗಳು ಮತ್ತು 11,296 ಸ್ವತಂತ್ರ ಶಿಕ್ಷಣ ಸಂಸ್ಥೆಗಳನ್ನು ಇವೆ. 2011 ರ ಜನಗಣತಿಯ ಪ್ರಕಾರ ಸಾಕ್ಷರತೆಯ ಪ್ರಮಾಣವು ಶೇ. 74.04 ರಷ್ಟಿತ್ತು. 2001ರಿಂದ ವಿಶೇಷವಾಗಿ ಗ್ರಾಮೀಣ ಮಹಿಳೆಯರಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಸಾಕ್ಷರತೆಯಲ್ಲಿ ಕೇರಳ ರಾಜ್ಯ ಪ್ರಥಮ ಸ್ಥಾನದಲ್ಲಿದ್ದು, ದೆಹಲಿ, ಮಹಾರಾಷ್ಟ್ರ ಮತ್ತು ತಮಿಳುನಾಡು ನಂತರದ ಸ್ಥಾನದಲ್ಲಿವೆ. ಒಟ್ಟು ದಾಖಲಾತಿ ಅನುಪಾತವು (GER) ಪ್ರಾಥಮಿಕ, ಹಿರಿಯ ಪ್ರಾಥಮಿಕ, ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಹಂತಗಳಲ್ಲಿ ಪ್ರಗತಿಯನ್ನು ತೋರಿಸುತ್ತದೆ.

ದೇಶದಲ್ಲಿರುವ ಸವಾಲುಗಳು: ಶಿಕ್ಷಕರ ಸಂಖ್ಯೆಯಲ್ಲಿ ಕುಸಿತ ಮತ್ತು ಮಾಧ್ಯಮಿಕ ಹಂತದಲ್ಲಿ ಸರಾಸರಿ ಶೇ. 12.6 ಶಾಲೆ ಬಿಡುವ ವಿದ್ಯಾರ್ಥಿಗಳ ಪ್ರಮಾಣ ಇದೆ. ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಶಿಕ್ಷಣದ ಮೇಲಿನ ವೆಚ್ಚವನ್ನು ಹೆಚ್ಚಿಸಲು ಗಮನ ಹರಿಸಲಾಗುತ್ತಿದೆ. ಶಿಕ್ಷಣದ ಮೇಲಿನ ವೆಚ್ಚವು ಪ್ರತಿಯೊಂದು ರಾಜ್ಯದಲ್ಲಿಯೂ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ಸರ್ಕಾರಿ ಸಂಸ್ಥೆಗಳಿಗೆ ಪ್ರವೇಶಿಸಲು ಮಕ್ಕಳಿಗೆ ಅನುಕೂಲವಾಗುವಂತೆ ಮಾಡಬೇಕು. ಇತ್ತೀಚಿನ ರಾಷ್ಟ್ರೀಯ ಶಿಕ್ಷಣ ನೀತಿಯು ಮೂಲಸೌಕರ್ಯವನ್ನು ಸುಧಾರಿಸಲು ಸರ್ಕಾರವು ದೇಶದ ಜಿಡಿಪಿಯ ಕನಿಷ್ಠ ಶೇ 6ರಷ್ಟು ಹೂಡಿಕೆ ಮಾಡಬೇಕು ಎಂದು ಸೂಚಿಸುತ್ತದೆ.

ಕೋವಿಡ್​-19 ಸಾಂಕ್ರಾಮಿಕ ಎದುರಾದ ವೇಳೆ, ಶಾಲೆಗಳಲ್ಲಿ ಡಿಜಿಟಲ್ ಕಲಿಕೆ ಮತ್ತು ಎಐ ಆಧಾರಿತ ಪರಿಕರಗಳ ಅಳವಡಿಕೆ ಪ್ರಕ್ರಿಯೆಯು ವೇಗವನ್ನು ಪಡೆದುಕೊಂಡಿದೆ. ಇದು ದೇಶದ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಯನ್ನು ತಂದಿದೆ.

ಇದನ್ನೂ ಓದಿ: ಅತ್ತಿಬೆಲೆಯಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ ..ತಮಿಳುನಾಡಿನಲ್ಲಿ ಹೆಚ್ಚಿದ ಖರೀದಿಗಾರರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.