ETV Bharat / bharat

ಗೂಗಲ್​ಗೆ 1,337.76 ಕೋಟಿ ರೂ. ದಂಡ.. ಆದೇಶ ಎತ್ತಿಹಿಡಿದ ಎನ್‌ಸಿಎಲ್‌ಎಟಿ​

author img

By

Published : Mar 29, 2023, 6:01 PM IST

ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ವಿಧಿಸಿರುವ ದಂಡದ ಕುರಿತು ಗೂಗಲ್ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ದಂಡ ವಿಧಿಸಿರುವ ಆದೇಶವನ್ನು ಎನ್​ಸಿಎಲ್​ಎಟಿ ಎತ್ತಿಹಿಡಿದಿದೆ.

Google
ಗೂಗಲ್​

ನವದೆಹಲಿ: ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಗೂಗಲ್ ವಿಷಯದಲ್ಲಿ ಭಾರತೀಯ ಸ್ಪರ್ಧಾತ್ಮಕ ಆಯೋಗದ (ಸಿಸಿಐ) ನಿರ್ಧಾರವನ್ನು ಎತ್ತಿಹಿಡಿದಿದೆ. ಆ್ಯಂಡ್ರಾಯ್ಡ್ ಮೊಬೈಲ್ ಸಾಧನಗಳ ವಿಷಯದಲ್ಲಿ ಸ್ಪರ್ಧಾತ್ಮಕ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ತಂತ್ರಜ್ಞಾನ ಕಂಪನಿ ಗೂಗಲ್‌ಗೆ ಸಿಸಿಐಯು 1,337.76 ಕೋಟಿ ರೂ. ದಂಡವನ್ನು ವಿಧಿಸಿದೆ.

30 ದಿನಗಳಲ್ಲಿ ದಂಡ ಪಾವತಿಸಲು ಆದೇಶ: ಮೇಲ್ಮನವಿ ನ್ಯಾಯಮಂಡಳಿಯ ದ್ವಿಸದಸ್ಯ ಪೀಠವು ನಿರ್ದೇಶನಗಳನ್ನು ಅನುಸರಿಸಬೇಕು ಹಾಗೂ 30 ದಿನಗಳಲ್ಲಿ ದಂಡದ ಮೊತ್ತವನ್ನು ಠೇವಣಿ ಮಾಡುವಂತೆ ಗೂಗಲ್‌ಗೆ ತಿಳಿಸಿದೆ. ಎನ್‌ಸಿಎಲ್‌ಎಟಿ ಅಧ್ಯಕ್ಷ ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ಸದಸ್ಯ ಅಲೋಕ್ ಶ್ರೀವಾಸ್ತವ್​ ಅವರ ಪೀಠವು ಸ್ಪರ್ಧಾತ್ಮಕ ಆಯೋಗದ ಆದೇಶದಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿದೆ. ಸ್ಪರ್ಧಾತ್ಮಕ ಆಯೋಗವು ತನಿಖೆಯಲ್ಲಿ ಸ್ವಾಭಾವಿಕ ನ್ಯಾಯವನ್ನು ಉಲ್ಲಂಘಿಸಿದೆ ಎಂಬ ಗೂಗಲ್‌ನ ಮನವಿಯನ್ನು ಮೇಲ್ಮನವಿ ನ್ಯಾಯಮಂಡಳಿ ತಿರಸ್ಕರಿಸಿದೆ.

ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ವಿಧಿಸಿರುವ ದಂಡದ ಕುರಿತು ಗೂಗಲ್ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ದಂಡ ವಿಧಿಸಿರುವ ಆದೇಶವನ್ನು ಎತ್ತಿಹಿಡಿಯಲಾಗಿದೆ. ಈ ದಂಡವನ್ನು 30 ದಿನಗಳೊಳಗೆ ಪಾವತಿಸಲು ಸೂಚಿಸಿದೆ.

ಗೂಗಲ್​ಗೆ ದಂಡ ವಿಧಿಸಿದ್ದು ಯಾಕೆ ಗೊತ್ತಾ?: ಕಳೆದ ವರ್ಷ ಅಕ್ಟೋಬರ್ 20 ರಂದು ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ)ವು ಆ್ಯಂಡ್ರಾಯ್ಡ್ ಮೊಬೈಲ್ ಸಾಧನಗಳ ವಿಷಯದಲ್ಲಿ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಗೂಗಲ್‌ಗೆ 1,337.6 ಕೋಟಿ ರೂಪಾಯಿ ದಂಡ ವಿಧಿಸಿತ್ತು.

ಇದು ಭಾರತೀಯ ಬಳಕೆದಾರರಿಗೆ ದೊಡ್ಡ ಹೊಡೆತ ಎಂದು ಗೂಗಲ್​ಗೆ ಹೇಳಿತ್ತು. ನಿಯಂತ್ರಕ ಕಂಪನಿಯು ಹಲವಾರು ಅನ್ಯಾಯದ ವ್ಯಾಪಾರ ಪದ್ಧತಿಗಳಿಂದ ದೂರವಿರಲು ಮತ್ತು ತ್ಯಜಿಸುವಂತೆ ತಿಳಿಸಲಾಗಿತ್ತು. ಸ್ಪರ್ಧಾತ್ಮಕ ಆಯೋಗದ ಈ ಆದೇಶವನ್ನು ಗೂಗಲ್, ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನೆ ಮಾಡಿತ್ತು. ಇದೀಗ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ದಂಡದ ತೀರ್ಪನ್ನು ಎತ್ತಿಹಿಡಿದಿದೆ.

ಸಿಸಿಐ ಆದೇಶಗಳನ್ನು ದಿಕ್ಕರಿಸುತ್ತಿದೆಯಂತೆ ಗೂಗಲ್​- ಎಡಿಐಎಫ್ ಆರೋಪ: ಭಾರತದ ಸ್ಪರ್ಧಾ ಆಯೋಗದ (ಸಿಸಿಐ) ಆದೇಶಗಳನ್ನು ಗೂಗಲ್ ಉಲ್ಲಂಘಿಸುತ್ತಿದೆ ಮತ್ತು ಆಪ್ ಡೆವಲಪರ್‌ಗಳಿಗೆ ಶೇ. 11-26 ಕಮಿಷನ್ ವಿಧಿಸುತ್ತಿದೆ ಎಂದು ಅಲಯನ್ಸ್ ಆಫ್ ಡಿಜಿಟಲ್ ಇಂಡಿಯಾ ಫೌಂಡೇಶನ್ (ಎಡಿಐಎಫ್) ಫೆ.25ರಂದು ಹೇಳಿತ್ತು. ಗೂಗಲ್ ಇತ್ತೀಚೆಗೆ ಅಪ್ಲಿಕೇಶನ್ ಡೆವಲಪರ್‌ಗಳಿಗೆ ತನ್ನ ಬಿಲ್ಲಿಂಗ್ ಅಗತ್ಯವನ್ನು ಬದಲಾಯಿಸಿತ್ತು. ಬಳಕೆದಾರರು ಪರ್ಯಾಯ ಬಿಲ್ಲಿಂಗ್ ವಿಧಾನದ ಮೂಲಕ ಪಾವತಿಸಿದರೆ, Google Play ಸೇವಾ ಶುಲ್ಕವು 4 ಪ್ರತಿಶತದಷ್ಟು ಕಡಿಮೆಯಾಗುತ್ತದೆ ಎಂದು ಉಲ್ಲೇಖಿಸಲಾಗಿತ್ತು.

ಪರ್ಯಾಯ ಬಿಲ್ಲಿಂಗ್ ವ್ಯವಸ್ಥೆಯನ್ನು ಗೂಗಲ್ ಅನುಮತಿಸಿದರೆ, ಬಳಕೆದಾರರು Google Play ನ ಬಿಲ್ಲಿಂಗ್ ಸಿಸ್ಟಮ್ (GPBS) ಆಯ್ಕೆಯನ್ನು ಪಡೆದರೆ ವಿಧಿಸಲಾಗುವ ಸಾಮಾನ್ಯ ಸೇವೆಗಿಂತ 4 ಪ್ರತಿಶತದಷ್ಟು ಕಡಿಮೆ ಸೇವಾ ಶುಲ್ಕವನ್ನು ಡೆವಲಪರ್‌ಗಳಿಗೆ ವಿಧಿಸುವುದನ್ನು ಮುಂದುವರಿಸುತ್ತದೆ ಎಂದು ಎಡಿಐಎಫ್ ಹೇಳಿತ್ತು. ಆಯೋಗದ ದರ ಬಳಕೆದಾರರ ಆಯ್ಕೆ ಅಡಿಯಲ್ಲಿ 11 ಪ್ರತಿಶತ ಅಥವಾ 26 ಪ್ರತಿಶತ ಇರುತ್ತದೆ ಎಂದು ಅಲಯನ್ಸ್ ಆಫ್ ಡಿಜಿಟಲ್ ಇಂಡಿಯಾ ಫೌಂಡೇಶನ್ ಹೇಳಿಕೆಯಲ್ಲಿ ತಿಳಿಸಿತ್ತು. ಆದ್ದರಿಂದ, ಅಪ್ಲಿಕೇಶನ್ ಡೆವಲಪರ್‌ಗಳು ಗೂಗಲ್‌ನ ಯಾವುದೇ ಸೇವೆಗಳನ್ನು ಬಳಸದಿದ್ದರೂ ಗೂಗಲ್‌ಗೆ ಕಮಿಷನ್ ಪಾವತಿಸಲು ಒತ್ತಾಯ ಮಾಡಿತ್ತು.

ಹೊಣೆಗಾರಿಕೆಯನ್ನು ತಪ್ಪಿಸಲು ಸಿಸಿಐ ಆದೇಶಗಳನ್ನು ಉಲ್ಲೇಖಿಸಿದ ಭಾರತದಲ್ಲಿನ ನಿಯಂತ್ರಕ ಬೆಳವಣಿಗೆಗಳಿಗೆ ಪ್ರತಿಕ್ರಿಯೆಯಾಗಿ ಬದಲಾವಣೆಯಾಗಿದೆ ಎಂದು ಗೂಗಲ್ ಹೇಳಿಕೊಂಡಿದೆ ಎಂದು ಎಡಿಐಎಫ್ ಹೇಳಿತ್ತು. ಗೂಗಲ್ ಎಡಿಐಎಫ್ ಕಮಿಷನ್ ಪಾವತಿಸಲು ಬಲವಂತವಾಗಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗೂಗಲ್‌ಗೆ 936.44 ಕೋಟಿ ದಂಡವನ್ನು ವಿಧಿಸಿತ್ತು. ಅದರ ಜೊತೆಗೆ ತನ್ನ ಪ್ಲೇ ಸ್ಟೋರ್ ನೀತಿಗಳಿಗೆ ಸಂಬಂಧಿಸಿದಂತೆ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ. ನಿಗದಿತ ಸಮಯದ ಚೌಕಟ್ಟಿನೊಳಗೆ ತನ್ನ ನಡವಳಿಕೆಯನ್ನು ಮಾರ್ಪಡಿಸುವಂತೆ ಆಯೋಗವು ಗೂಗಲ್‌ಗೆ ಸೂಚಿಸಿತ್ತು. ಎಡಿಐಎಫ್ ಪ್ರಕಾರ, ಅಪ್ಲಿಕೇಶನ್ ಡೆವಲಪರ್‌ಗಳು ಗೂಗಲ್​​ನ ಯಾವುದೇ ಸೇವೆಗಳನ್ನು ಬಳಸದಿದ್ದರೂ ಸಹ ಗೂಗಲ್ ಕಮಿಷನ್ ಪಾವತಿಸಲು ಒತ್ತಾಯಿಸಲಾಗುತ್ತದೆ ಎಂದು ಎಡಿಐಎಫ್ ತಿಳಿಸಿತ್ತು.

ಇದನ್ನೂ ಓದಿ: ಎನ್‌ಸಿಪಿ ಸಂಸದ ಮೊಹಮ್ಮದ್ ಫೈಜಲ್ ಅನರ್ಹತೆ ರದ್ದು.. ಅಧಿಸೂಚನೆ ಹೊರಡಿಸಿದ ಲೋಕಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.