ನಾಸಿಕ್(ಮಹಾರಾಷ್ಟ್ರ): ಕಂಪನಿಗಳು ಗಳಿಸುವ ಆದಾಯ,ಲಾಭದಲ್ಲಿ ಪ್ರತಿ ವರ್ಷ ತನ್ನ ಉದ್ಯೋಗಿಗಳ ಖುಷಿಗೋಸ್ಕರ ಬೋನಸ್ ಅಥವಾ ಸಣ್ಣ ಪ್ರಮಾಣದ ಉಡುಗೊರೆ ನೀಡುವುದು ಸರ್ವೆ ಸಾಮಾನ್ಯ. ಆದರೆ, ನಾಸಿಕ್ನ ಡೈರಿ ಕಂಪನಿವೊಂದು ತನ್ನ ಉದ್ಯೋಗಿಗಳಿಗೆ ಮಹೀಂದ್ರಾ ಕಾರು ಗಿಫ್ಟ್ ನೀಡಿ, ಆಶ್ಚರ್ಯ ಮೂಡಿಸಿದೆ.
ಗುರು ಪೌರ್ಣಮಿ ಸಂದರ್ಭದಲ್ಲಿ ನಾಸಿಕ್ನ ಹಾಲಿನ ಉತ್ಪನ್ನ ತಯಾರಿಸುವ ಕಂಪನಿ ತನ್ನ ಉದ್ಯೋಗಿಗಳಿಗೆ ಕಾರು ಉಡುಗೊರೆಯಾಗಿ ನೀಡಿದೆ. ಕಂಪನಿಯ 12 ಉದ್ಯೋಗಿಗಳಿಗೆ ಮಹೀಂದ್ರ ಎಸ್ಯುವಿ ಗಿಫ್ಟ್ ನೀಡಿದೆ. ನಾಸಿಕ್ನಲ್ಲಿ ಡೈರಿ ಪವರ್ ಹಾಲು ಮತ್ತು ಹಾಲಿನ ಉತ್ಪನ್ನ ತಯಾರಿಸುವ ಕಂಪನಿ ಇದೆ. ಇದರಲ್ಲಿ ನೂರಾರು ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ಇದೀಗ ಕಂಪನಿ ತನ್ನ 12 ಉದ್ಯೋಗಿಗಳಿಗೆ ಮಹೀಂದ್ರಾ SUV 300 ಉಡುಗೊರೆಯಾಗಿ ನೀಡಿದ್ದಾರೆ.
ಇದನ್ನೂ ಓದಿರಿ: ಎತ್ತಿನ ಭಾರಕ್ಕೆ ನೊಗವಾದ 'ರೋಲಿಂಗ್ ಸಪೋರ್ಟ್'.. ವಿದ್ಯಾರ್ಥಿಗಳಿಂದ 'ಸಾರಥಿ' ನಿರ್ಮಾಣ
ಇದರ ಬಗ್ಗೆ ಮಾತನಾಡಿರುವ ಕಂಪನಿ ಮಾಲೀಕ ದೀಪಕ್, ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಉದ್ಯೋಗಿ ನಮ್ಮ ಮನೆಯ ಕುಟುಂಬದ ಸದಸ್ಯರ ರೀತಿ. ಅವರ ಬಳಿ ಸ್ವಂತ ಮನೆ, ಕಾರು, ಹಣ ಇರಬೇಕು ಎಂಬುದು ನನ್ನ ಬಯಕೆ. ಹೀಗಾಗಿ ಇಲ್ಲಿ ಕೆಲಸ ಮಾಡುವ ಕೆಲವರಿಗೆ ಕಾರು ಉಡುಗೊರೆಯಾಗಿ ನೀಡಲಾಗಿದೆ ಎಂದಿದ್ದಾರೆ. ಕಂಪನಿ ನೀಡಿರುವ ಪ್ರತಿ ಕಾರಿನ ಬೆಲೆ 12 ಲಕ್ಷ 60 ಸಾವಿರ ರೂಪಾಯಿ ಆಗಿದ್ದು, 12 ಸಿಬ್ಬಂದಿಗೆ ನೀಡಿದ್ದಾರೆ.