ನಾಸಿಕ್(ಮಹಾರಾಷ್ಟ್ರ) : ಕೊರೊನಾ ಭೀಕರತೆ ರಾಜ್ಯಾದ್ಯಂತ ವ್ಯಾಪಿಸಿದ್ದರಿಂದಾಗಿ ಜನ ತತ್ತರಿಸಿದ್ದಾರೆ. ನಾಸಿಕ್ ಕೂಡ ಇದಕ್ಕೇನೂ ಹೊರತಾಗಿಲ್ಲ. ಇದೀಗ ನಾಸಿಕ್ ಇನ್ನೊಂದು ಭೀಕರತೆಗೆ ಸಾಕ್ಷಿಯಾಗ್ತಿದೆ.
ಇಂದು ತಲೆಸುತ್ತು ಬಂದು ಬರೋಬ್ಬರಿ 11 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ನಾಸಿಕ್ ಪಟ್ಟಣದಲ್ಲಿ ನಡೆದಿದೆ. ಕೊರೊನಾ ಸಂಬಂಧಿತ ಸಾವುಗಳು ಇಲ್ಲಿ ಹೆಚ್ಚಾಗಿವೆ. ಪ್ರತಿದಿನ 2 ಸಾವಿರ ಕೇಸ್ವ ರದಿಯಾಗ್ತಿವೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ 9 ಮಂದಿ ಒಂದೇ ದಿನ ಪ್ರಾಣ ಕಳೆದುಕೊಂಡಿದ್ದರು.
ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಇತರೆ ರೋಗಿಗಳ ಪಾಡು ಕೇಳುವವರಿಲ್ಲದಂತಾಗಿದೆ. ಯಾವುದೇ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ.