ETV Bharat / bharat

ಭೂಮಿಯಂತಿರುವ ಎಕ್ಸೋಪ್ಲಾನೆಟ್​ ಕಂಡು ಹಿಡಿದ ನಾಸಾದ ವೆಬ್ ದೂರದರ್ಶಕ - 41 ಬೆಳಕಿನ ವರ್ಷ ದೂರದಲ್ಲಿರುವ ಎಕ್ಸೋಪ್ಲಾನೆಟ್​

ಭೂಮಿಯಿಂದ 41 ಬೆಳಕಿನ ವರ್ಷ ದೂರದಲ್ಲಿರುವ ಎಕ್ಸೋಪ್ಲಾನೆಟ್​ ಒಂದನ್ನು ಗುರುತಿಸಲಾಗಿದೆ. ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಈ ಎಕ್ಸೋಪ್ಲಾನೆಟ್​ ಅನ್ನು ಕಂಡು ಹಿಡಿದಿದೆ.

nasas-webb-telescope-spots-its-first-earth-like-exoplanet

author img

By

Published : Jan 12, 2023, 4:45 PM IST

ವಾಷಿಂಗ್ಟನ್: ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ ಬಳಸಿಕೊಂಡು ಸಂಶೋಧಕರು ಮೊದಲ ಬಾರಿಗೆ ಮತ್ತೊಂದು ನಕ್ಷತ್ರವನ್ನು ಸುತ್ತುವ ಗ್ರಹವಾದ ಎಕ್ಸೋಪ್ಲಾನೆಟ್ ಅನ್ನು ಕಂಡು ಹಿಡಿದಿದ್ದಾರೆ. ಔಪಚಾರಿಕವಾಗಿ LHS 475 b ಎಂದು ವರ್ಗೀಕರಿಸಲಾದ ಈ ಗ್ರಹವು ನಮ್ಮ ಭೂಮಿಯ ಗಾತ್ರದಷ್ಟೇ ಇದೆ. ಇದು ಸುಮಾರು ಭೂಮಿಯ ವ್ಯಾಸದ ಶೇ 99ರಷ್ಟಿದ್ದು, LHS 475 b ತುಲನಾತ್ಮಕವಾಗಿ ಹತ್ತಿರದಲ್ಲಿದೆ. ಇದು ಆಕ್ಟಾನ್ಸ್ ನಕ್ಷತ್ರಪುಂಜದಲ್ಲಿ ಕೇವಲ 41 ಬೆಳಕಿನ ವರ್ಷಗಳ ದೂರದಲ್ಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಭೂಮಿಯ ಗಾತ್ರದ, ಕಲ್ಲಿನ ಗ್ರಹದ ಈ ಮೊದಲ ವೀಕ್ಷಣಾ ಫಲಿತಾಂಶಗಳು ವೆಬ್‌ನೊಂದಿಗೆ ರಾಕಿ ಪ್ಲಾನೆಟ್​ಗಳ ವಾತಾವರಣವನ್ನು ಅಧ್ಯಯನ ಮಾಡಲು ಭವಿಷ್ಯದ ಅನೇಕ ಸಾಧ್ಯತೆಗಳಿಗೆ ಅನುವು ಮಾಡಿಕೊಡುತ್ತದೆ ಎಂದು ವಾಷಿಂಗ್ಟನ್ ಡಿಸಿಯಲ್ಲಿರುವ ನಾಸಾ ಪ್ರಧಾನ ಕಚೇರಿಯಲ್ಲಿ ಖಗೋಳ ಭೌತಶಾಸ್ತ್ರ ವಿಭಾಗದ ನಿರ್ದೇಶಕ ಮಾರ್ಕ್ ಕ್ಲಾಂಪಿನ್ ಹೇಳಿದ್ದಾರೆ. ನಮ್ಮ ಸೌರವ್ಯೂಹದ ಹೊರಗಿನ ಭೂಮಿಯಂತಹ ಪ್ರಪಂಚಗಳ ಹೊಸ ತಿಳಿವಳಿಕೆಗೆ ವೆಬ್ ನಮ್ಮನ್ನು ಮತ್ತಷ್ಟು ಹತ್ತಿರ ತರುತ್ತಿದೆ ಮತ್ತು ಈ ಯೋಜನೆ ಈಗಷ್ಟೇ ಪ್ರಾರಂಭವಾಗುತ್ತಿದೆ ಎಂದು ಅವರು ಬುಧವಾರ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಎಲ್ಲ ದೂರದರ್ಶಕಗಳಿಗೆ ಹೋಲಿಸಿದರೆ ವೆಬ್​​​​​ ಕಾರ್ಯಾಚರಣೆ ಬೆಸ್ಟ್​?: ಮೇರಿಲ್ಯಾಂಡ್‌ನ ಲಾರೆಲ್‌ನಲ್ಲಿರುವ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಅನ್ವಯಿಕ ಭೌತಶಾಸ್ತ್ರ ಪ್ರಯೋಗಾಲಯದ ಕೆವಿನ್ ಸ್ಟೀವನ್‌ಸನ್ ಮತ್ತು ಜಾಕೋಬ್ ಲುಸ್ಟಿಗ್ - ಯಾಗರ್ ಅವರು, ಈ ಎಕ್ಸೋಪ್ಲಾನೆಟ್ ಕಂಡು ಹಿಡಿದ ಸಂಶೋಧನಾ ತಂಡದ ನೇತೃತ್ವ ವಹಿಸಿದ್ದಾರೆ. ಕಾರ್ಯಾಚರಣೆಯಲ್ಲಿರುವ ಎಲ್ಲ ದೂರದರ್ಶಕಗಳಿಗೆ ಹೋಲಿಸಿದರೆ ವೆಬ್ ಮಾತ್ರ ಭೂಮಿಯ ಗಾತ್ರದ ಬಾಹ್ಯ ಗ್ರಹಗಳ ವಾತಾವರಣವನ್ನು ಕಂಡು ಹಿಡಿದು ನಿರೂಪಿಸುವ ಸಾಮರ್ಥ್ಯ ಹೊಂದಿದೆ. ಎಕ್ಸೋಪ್ಲಾನೆಟ್​​ನಲ್ಲಿ ಏನಿದೆ ಎಂಬುದನ್ನು ತಿಳಿಯಲು ಆಗದಿದ್ದರೂ ಅದರಲ್ಲಿ ಏನಿಲ್ಲ ಎಂಬುದನ್ನು ತಂಡವು ಖಂಡಿತವಾಗಿ ಹೇಳಬಹುದು.

ಭೂ ಮಾದರಿಯ ವಾತಾವರಣ?: ನಾವು ಪರಿಗಣಿಸದೆ ಇರಬಹುದಾದ ಕೆಲ ಭೂ-ಮಾದರಿಯ ವಾತಾವರಣಗಳಿವೆ ಎಂದು ಲುಸ್ಟಿಗ್-ಯಾಗರ್ ಹೇಳಿದರು. ಇದು ಶನಿಯ ಚಂದ್ರ ಟೈಟಾನ್‌ನಂತೆ ದಟ್ಟವಾದ ಮೀಥೇನ್-ಪ್ರಾಬಲ್ಯದ ವಾತಾವರಣವನ್ನು ಹೊಂದಲು ಸಾಧ್ಯವಿಲ್ಲ. ಈ ಗ್ರಹವು ಭೂಮಿಗಿಂತ ಕೆಲವು ನೂರು ಡಿಗ್ರಿಗಳಷ್ಟು ಬಿಸಿಯಾಗಿರುತ್ತದೆ ಎಂಬುದನ್ನು ವೆಬ್​​ ಬಹಿರಂಗಪಡಿಸಿದೆ. ಮೋಡಗಳು ಪತ್ತೆಯಾದರೆ, ಗ್ರಹವು ಇಂಗಾಲದ ಡೈಆಕ್ಸೈಡ್ ವಾತಾವರಣವನ್ನು ಹೊಂದಿರುವ ಮತ್ತು ದಟ್ಟವಾದ ಮೋಡಗಳಿಂದ ನಿರಂತರವಾಗಿ ಆವೃತವಾಗಿರುವ ಶುಕ್ರನಂತೆಯೇ ಇದೆ ಎಂದು ಸಂಶೋಧಕರು ತೀರ್ಮಾನಿಸಬಹುದು. ನಾವು ಸಣ್ಣ, ಕಲ್ಲಿನ ಬಹಿರ್ಗ್ರಹಗಳನ್ನು ಅಧ್ಯಯನ ಮಾಡುವಲ್ಲಿ ಮುಂಚೂಣಿಯಲ್ಲಿದ್ದೇವೆ ಎಂದು ಲುಸ್ಟಿಗ್-ಯಾಗರ್ ಹೇಳಿದ್ದಾರೆ.

ಭೂಮಿಗೆ ಮರಳಿದ ಉಪಗ್ರಹ: ಸುಮಾರು ನಾಲ್ಕು ದಶಕಗಳ ಕಾಲ ಬಾಹ್ಯಾಕಾಶದಲ್ಲಿದ್ದ ಉಪಗ್ರಹ ನಂತರ ನಿಷ್ಕ್ರಿಯಗೊಂಡ ನಾಸಾ ಉಪಗ್ರಹವೊಂದು ಭೂಮಿಗೆ ಮರಳಿದೆ. ದಿ ಅರ್ಥ್ ರೇಡಿಯೇಶನ್ ಬಜೆಟ್ ಸ್ಯಾಟಲೈಟ್ ಹೆಸರಿನ ಉಪಗ್ರಹವನ್ನು (ERBS) 1984 ರಲ್ಲಿ ಬಾಹ್ಯಾಕಾಶ ನೌಕೆ ಚಾಲೆಂಜರ್‌ ಮೂಲಕ ಉಡಾವಣೆ ಮಾಡಲಾಗಿತ್ತು. 5,400 ಪೌಂಡ್ (2,420 ಕಿಲೋಗ್ರಾಂಗಳು) ತೂಕದ ಉಪಗ್ರಹವು ಬೇರಿಂಗ್ ಸಮುದ್ರದ ಮೇಲೆ ವಾತಾವರಣ ಮರುಪ್ರವೇಶಿಸಿದೆ ಎಂದು ಯುಎಸ್​​ ರಕ್ಷಣಾ ಇಲಾಖೆ ದೃಢಪಡಿಸಿದೆ ಎಂದು ನಾಸಾ ಸೋಮವಾರ ಹೇಳಿದೆ.

21 ವರ್ಷಗಳ ಕಾಲ ಕಕ್ಷೆಯಲ್ಲಿದ್ದ ಸ್ಯಾಟಲೈಟ್​: 21 ವರ್ಷಗಳ ಕಾಲ ಕಕ್ಷೆಯಲ್ಲಿದ್ದ ಉಪಗ್ರಹವು ಭೂಮಿಯು ಸೂರ್ಯನಿಂದ ಶಕ್ತಿಯನ್ನು ಹೇಗೆ ಹೀರಿಕೊಳ್ಳುತ್ತದೆ ಮತ್ತು ಹೇಗೆ ಹೊರಸೂಸುತ್ತದೆ ಮತ್ತು ವಾಯುಮಂಡಲದ ಓಝೋನ್, ನೀರಿನ ಆವಿ, ನೈಟ್ರೋಜನ್ ಡೈಆಕ್ಸೈಡ್ ಮತ್ತು ಏರೋಸಾಲ್​ಗಳನ್ನು ಮಾಪನ ಹೇಗೆ ಮಾಡಿದೆ ಎಂಬುದನ್ನು ERBS ಸಕ್ರಿಯವಾಗಿ ಅಧ್ಯಯನ ಮಾಡಿದೆ ಎಂದು ನಾಸಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಮಂಗಳನ ಮೇಲೆ ರೋವರ್​ ಲ್ಯಾಂಡಿಂಗ್ - ನಾಸಾದಿಂದ ವಿಡಿಯೋ ರಿಲೀಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.