ETV Bharat / bharat

ಒಂದು ಕಾಲದಲ್ಲಿ ಖಂಡಿತವಾಗಿಯೂ ಮಂಗಳ ಗ್ರಹದಲ್ಲಿ ನೀರಿತ್ತು ಎಂದ ನಾಸಾ! - ಭೂಮಿ ವೀಕ್ಷಣಾ ಉಪಗ್ರಹ

ಕೆಂಪು ಗ್ರಹ ಮಂಗಳನಲ್ಲಿ ಎಷ್ಟೋ ಶತಕೋಟಿ ವರ್ಷಗಳ ಹಿಂದೆ ಖಂಡಿತವಾಗಿಯೂ ನೀರಿತ್ತು ಎಂಬ ಸುಳಿವನ್ನು ನಾಸಾ ಪಡೆದಿದೆ. ನಾಸಾದ ಕ್ಯೂರಿಯಾಸಿಟಿ ರೋವರ್ ಉಪಗ್ರಹವು ಈ ಸುಳಿವುಗಳನ್ನು ಪತ್ತೆ ಮಾಡಿದೆ.

ಮಂಗಳ ಗ್ರಹದಲ್ಲಿ ಒಂದು ಕಾಲದಲ್ಲಿ ಖಂಡಿತವಾಗಿಯೂ ನೀರಿತ್ತು ಎಂದ ನಾಸಾ!

author img

By

Published : Feb 9, 2023, 5:01 PM IST

ವಾಷಿಂಗ್ಟನ್: ನಾಸಾದ ಕ್ಯೂರಿಯಾಸಿಟಿ ರೋವರ್ ಉಪಗ್ರಹವು ರೆಡ್ ಪ್ಲಾನೆಟ್‌ ಎಂದು ಕರೆಯಿಸಿಕೊಳ್ಳುವ ಮಂಗಳನಲ್ಲಿ ಸರೋವರಗಳಿಂದ ರೂಪುಗೊಂಡ ಪ್ರಾಚೀನ ನೀರಿನ ಅಲೆಗಳ ಸ್ಪಷ್ಟ ಪುರಾವೆಗಳನ್ನು ಪತ್ತೆ ಮಾಡಿದೆ. ಶತಕೋಟಿ ವರ್ಷಗಳ ಹಿಂದೆ, ಆಳವಿಲ್ಲದ ಸರೋವರದ ಮೇಲ್ಮೈಯಲ್ಲಿ ಅಲೆಗಳು, ಸರೋವರದ ಕೆಳಭಾಗದಲ್ಲಿ ಕೆಸರನ್ನು ಕಲಕಿ ಕಾಲಾನಂತರದಲ್ಲಿ ಬಂಡೆಯಲ್ಲಿ ಉಳಿದಿರುವ ಏರಿಳಿತದ ರಚನೆಗಳನ್ನು ಸೃಷ್ಟಿಸಿದವು.

ರೋವರ್ ಮಾಡಿದ ಇತರ ಆವಿಷ್ಕಾರಗಳ ಪೈಕಿ ಏರಿಳಿತದ ಕಲ್ಲಿನ ರಚನೆಗಳು ಪ್ರಾಚೀನ ಮಂಗಳದ ಪ್ರದೇಶದಲ್ಲಿ ಸರೋವರಗಳು ಅಸ್ತಿತ್ವದಲ್ಲಿದ್ದವು ಎಂಬುದನ್ನು ಸೂಚಿಸುತ್ತವೆ ಮತ್ತು ಅವು ಒಣಗಿದ್ದವು ಎಂದು ವಿಜ್ಞಾನಿಗಳು ಭಾವಿಸಿದ್ದಾರೆ. ಇಡೀ ಕಾರ್ಯಾಚರಣೆಯಲ್ಲಿ ಇದು ನಮಗೆ ಸಿಕ್ಕ ನೀರು ಮತ್ತು ಅಲೆಗಳ ಅತ್ಯುತ್ತಮ ಪುರಾವೆಯಾಗಿದೆ ಎಂದು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ಕ್ಯೂರಿಯಾಸಿಟಿಯ ಪ್ರಾಜೆಕ್ಟ್ ವಿಜ್ಞಾನಿ ಆಗಿರುವ ಅಶ್ವಿನ್ ವಾಸವಾಡ ಹೇಳಿದರು.

ಮೌಂಟ್​​ ಶಾರ್ಪ್ ಏರುತ್ತಿರುವ ರೋವರ್​: ನಾವು ಸಾವಿರಾರು ಅಡಿಗಳಷ್ಟು ಸರೋವರದ ನಿಕ್ಷೇಪಗಳ ಮೂಲಕ ಏರಿದೆವು ಮತ್ತು ಹಿಂದೆ ಎಂದೂ ಕಾಣದ ರೀತಿಯ ಪುರಾವೆಗಳನ್ನು ನಾವು ನೋಡಿದೆವು. ಈಗ ನಾವು ಅದನ್ನು ಶುಷ್ಕ ಎಂದು ನಿರೀಕ್ಷಿಸಿದ ಸ್ಥಳದಲ್ಲಿ ಕಂಡುಕೊಂಡಿದ್ದೇವೆ ಎಂದು ವಾಸವಾಡ ತಿಳಿಸಿದರು. 2014 ರಿಂದ, ರೋವರ್ ಮೌಂಟ್ ಶಾರ್ಪ್‌ನ ತಪ್ಪಲಿನಲ್ಲಿ ಏರುತ್ತಿದೆ. ಮೌಂಟ್ ಶಾರ್ಪ್ ಇದು 3 ಮೈಲಿ (5-ಕಿಮೀ) ಎತ್ತರದ ಪರ್ವತವಾಗಿದ್ದು, ಒಂದು ಕಾಲದಲ್ಲಿ ಸರೋವರಗಳು ಮತ್ತು ತೊರೆಗಳಿಂದ ಕೂಡಿತ್ತು. ಒಂದಾನೊಂದು ಕಾಲದಲ್ಲಿ ಯಾವಾಗಲಾದರೂ ಮಂಗಳನ ಮೇಲೆ ಜೀವರಾಶಿ ಇದ್ದಿದ್ದರೆ ಆಗ ಇದು ಸೂಕ್ಷ್ಮಜೀವಿಗಳ ಜೀವನಕ್ಕೆ ಉತ್ತಮ ವಾತಾವರಣ ಒದಗಿಸಿತ್ತು ಎಂದು ವಿಜ್ಞಾನಿಗಳು ಭಾವಿಸಿದ್ದಾರೆ.

ಪರ್ವತದ ತಳದಿಂದ ಸುಮಾರು ಅರ್ಧ ಮೈಲಿ ಹತ್ತಿದ ನಂತರ, ಕ್ಯೂರಿಯಾಸಿಟಿಯು ಮಾರ್ಕರ್ ಬ್ಯಾಂಡ್ ಎಂಬ ಹೆಸರಿನಲ್ಲಿ ಸಂರಕ್ಷಿಸಲ್ಪಟ್ಟಿರುವ ಈ ತರಂಗ ಶಿಲಾ ರಚನೆಗಳನ್ನು ಕಂಡು ಹಿಡಿದಿದೆ. ಇದು ಮೌಂಟ್ ಶಾರ್ಪ್‌ನ ಉಳಿದ ಭಾಗದಿಂದ ಎದ್ದು ಕಾಣುವ ಕಪ್ಪು ಬಂಡೆಯ ತೆಳುವಾದ ಪದರವಾಗಿದೆ. ಮಾರ್ಕರ್ ಬ್ಯಾಂಡ್‌ನ ಮುಂದೆ, ವಿಜ್ಞಾನಿಗಳು ಗೆಡಿಜ್ ವ್ಯಾಲಿಸ್ ಎಂಬ ಕಣಿವೆಯಲ್ಲಿ ಮಂಗಳದ ಪ್ರಾಚೀನ ನೀರಿನ ಇತಿಹಾಸದ ಮತ್ತೊಂದು ಸುಳಿವನ್ನು ಕಂಡು ಹಿಡಿದಿದ್ದಾರೆ.

ಅಲೆಗಳು, ಶಿಲಾ ಖಂಡರಾಶಿಗಳ ಹರಿವುಗಳು ಮತ್ತು ಲಯಬದ್ಧ ಪದರಗಳು ಮಂಗಳದಲ್ಲಿ ಒಂದು ಕಾಲದಲ್ಲಿ ತೇವ ಇದ್ದು ನಂತರ ಅದೆಲ್ಲ ಒಣಗಿತು ಎಂಬ ಸಿದ್ಧಾಂತವೇ ಅಂತಿಮವಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ವಾಸವಾಡ ಹೇಳಿದರು. ಮಂಗಳದ ಪ್ರಾಚೀನ ಹವಾಮಾನವು ಭೂಮಿಯಂತೆಯೇ ಅದ್ಭುತವಾದ ಸಂಕೀರ್ಣತೆ ಹೊಂದಿತ್ತು.

ಭೂಮಿ ವೀಕ್ಷಣಾ ಉಪಗ್ರಹ ತಯಾರಿಸಿದ ನಾಸಾ - ಇಸ್ರೋ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಜಂಟಿಯಾಗಿ ಭೂಮಿ ವೀಕ್ಷಣಾ ಉಪಗ್ರಹ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ನಿಸಾರ್ (ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್) ಎಂದು ಹೆಸರಿಸಲಾಗಿದೆ. ಇದನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಪ್ರಯೋಗಾಲಯದ ಜೆಟ್ ಪ್ರೊಪಲ್ಷನ್‌ನ ಕೇಂದ್ರದಿಂದ ಭಾರತಕ್ಕೆ ಕಳುಹಿಸಿಕೊಡಲಾಗಿದೆ. ಕೃಷಿ ಮ್ಯಾಪಿಂಗ್ ಮತ್ತು ಹಿಮಾಲಯದಲ್ಲಿನ ಹಿಮನದಿಗಳ ಮೇಲ್ವಿಚಾರಣೆ, ಭೂಕುಸಿತ ಪೀಡಿತ ಪ್ರದೇಶಗಳು ಮತ್ತು ಕರಾವಳಿಯಲ್ಲಿನ ಬದಲಾವಣೆಗಳು ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಇಸ್ರೊ ಸಂಸ್ಥೆಯು NISAR ಅನ್ನು ಬಳಸಲಿದೆ.

ಇದನ್ನೂ ಓದಿ: ಭಾರತದಲ್ಲಿ 30 ಲಕ್ಷ ಜನರಿಗೆ ಹಿಮನದಿಗಳ ಪ್ರವಾಹದ ಅಪಾಯ.. ಏನಿದು ನಿರ್ಗಲ್ಲು ಸಂಕಷ್ಟ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.