ETV Bharat / bharat

ಕೋವಿಡ್​ ವ್ಯಾಕ್ಸಿನ್​ ತುಂಬಿದ್ದ ಟ್ರಕ್​ ಬಿಟ್ಟು ಪರಾರಿ​... ರಸ್ತೆ ಬದಿ ಅನಾಥವಾಗಿ ಸಿಕ್ಕ 8 ಕೋಟಿ ರೂ.ಮೌಲ್ಯದ ಲಸಿಕೆ! - ವ್ಯಾಕ್ಸಿನ್​ ತುಂಬಿದ್ದ ಟ್ರಕ್​ ಬಿಟ್ಟು ಪರಾರಿ

ಕೊರೊನಾ ವ್ಯಾಕ್ಸಿನ್ ತುಂಬಿದ್ದ ಟ್ರಕ್ ಬಿಟ್ಟು ಡ್ರೈವರ್​ ಪರಾರಿಯಾಗಿರುವ ಘಟನೆ ನಡೆದಿದ್ದು, 12 ಗಂಟೆಗಳ ನಂತರ ಅದನ್ನ ರವಾನೆ ಮಾಡಲಾಗಿದೆ.

driver escapes vaccine container
driver escapes vaccine container
author img

By

Published : May 1, 2021, 3:53 PM IST

ನರಸಿಂಗ್​ಪುರ(ಮಧ್ಯಪ್ರದೇಶ): ದೇಶಾದ್ಯಂತ ಕೊರೊನಾ ವ್ಯಾಕ್ಸಿನ್​ ಅಭಿಯಾನ ಜೋರಾಗಿ ನಡೆಯುತ್ತಿದ್ದು, ಇಂದಿನಿಂದ ಮೂರನೇ ಹಂತದ ವ್ಯಾಕ್ಸಿನೇಷನ್​ಗೆ ಚಾಲನೆ ನೀಡಲಾಗಿದೆ. ಇದರ ಮಧ್ಯೆ ಕೋವಿಡ್​ ಲಸಿಕೆ ತುಂಬಿದ್ದ ಟ್ರಕ್​ ರಸ್ತೆ ಮಧ್ಯೆ ಬಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ.

ರಸ್ತೆ ಮಧ್ಯೆ ಸಿಕ್ಕ ಕೋವಿಡ್​ ವ್ಯಾಕ್ಸಿನ್ ತುಂಬಿದ್ದ ಟ್ರಕ್​

ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆ ಕರೇಲಿ ಬಸ್​ ನಿಲ್ದಾಣದ ಬಳಿ ಈ ಟ್ರಕ್​ ಕಂಡು ಬಂದಿದೆ. ಬಹಳ ಸಮಯಗಳ ಕಾಲ ಟ್ರಕ್​ ಇಲ್ಲಿ ನಿಂತಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಇದರಲ್ಲಿ ಕೋವ್ಯಾಕ್ಸಿನ್​​ನ 2,40,000 ಡೋಸ್ ಕಂಡು ಬಂದಿವೆ.

ಹೈದರಾಬಾದ್​​ನಿಂದ ಪಂಜಾಬ್​ಗೆ ರವಾನೆ

ಪ್ರಾಥಮಿಕ ಮಾಹಿತಿ ಪ್ರಕಾರ, ಈ ಟ್ರಕ್ ಹೈದರಾಬಾದ್​ನ ಭಾರತ ಬಯೋಟೆಕ್​ನಿಂದ ಕೋವಿಡ್​ ವ್ಯಾಕ್ಸಿನ್​ ತೆಗೆದುಕೊಂಡು ಪಂಜಾಬಿಗೆ​ ಪ್ರಯಾಣಿಸುತ್ತಿತ್ತು. ಆದರೆ ರಸ್ತೆ ಮಧ್ಯದಲ್ಲಿ ನಿಲ್ಲಿಸಿ ಡ್ರೈವರ್ ಹಾಗೂ ಕ್ಲೀನರ್ ಪರಾರಿಯಾಗಿದ್ದಾರೆ. ಅಲ್ಲಿಂದ ಮತ್ತೋರ್ವ ಚಾಲಕ ಬಂದ ನಂತರ ಸುಮಾರು 12 ಗಂಟೆಗಳ ಬಳಿಕ ಈ ಟ್ರಕ್​ ತೆಗೆದುಕೊಂಡು ಹೋಗಲಾಗಿದೆ. ಈ ಲಸಿಕೆಗಳ ಒಟ್ಟು ಮೌಲ್ಯ 8 ಕೋಟಿ ರೂ.ಗಳಿರಬಹುದು ಎಂದು ಅಂದಾಜು ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.