ಬಾರಾಮುಲ್ಲಾ (ಜಮ್ಮು-ಕಾಶ್ಮೀರ) : ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ನಲ್ಲಿರುವ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಜಂಟಿ ಭದ್ರತಾ ಪಡೆಗಳು ಇಂದು 30 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿವೆ.
ಎಲ್‌ಒಸಿಯಲ್ಲಿ ಅನುಮಾನಾಸ್ಪದ ಚಲನೆ ಗಮನಿಸಿದ ಭಾರತೀಯ ಸೇನಾ ಪಡೆ ಹಾಗೂ ಪೊಲೀಸ್ ಸಿಬ್ಬಂದಿ ಅಲ್ಲಿ ಕೆಲವು ಮಾದಕ ದ್ರವ್ಯಗಳನ್ನು ಬಿದ್ದಿರುವುದನ್ನು ನೋಡಿದ್ದಾರೆ. ಸೇನಾ ಸಿಬ್ಬಂದಿಯನ್ನು ಕಂಡ ಡ್ರಗ್ ಪೆಡ್ಲರ್‌ಗಳು ತಮ್ಮ ಬಳಿ ಇದ್ದ ವಸ್ತುಗಳನ್ನು ಅಲ್ಲೇ ಬಿಟ್ಟು ಓಡಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ಪಾರ್ಟಿಯಲ್ಲಿ ಶಾರುಖ್ ಖಾನ್ ಮಗನ ಹೆಸರು : ಆ ಮಗುವಿಗೆ ಉಸಿರಾಡಲು ಬಿಡಿ ಎಂದ ಸುನೀಲ್ ಶೆಟ್ಟಿ
ಭದ್ರತಾ ಪಡೆಗಳು ಅವುಗಳನ್ನು ವಶಪಡಿಸಿಕೊಂಡು ಪರಿಶೀಲಿಸಿದಾಗ ಅವು ಸುಮಾರು 25-30 ಕೆಜಿ ತೂಕದ ಹಾಗೂ 30 ಕೋಟಿ ರೂ. ಮೌಲ್ಯದ ನಿಷೇಧಿತ ಡ್ರಗ್ಸ್ ಎಂಬುದು ತಿಳಿದು ಬಂದಿದೆ. ಎಲ್‌ಒಸಿ ಉದ್ದಕ್ಕೂ ಸೇನೆ ಕಟ್ಟೆಚ್ಚರವಹಿಸಿದೆ ಎಂದು ಬಾರಾಮುಲ್ಲಾ ಎಸ್‌ಎಸ್‌ಪಿ ಮಾಹಿತಿ ನೀಡಿದ್ದಾರೆ.