ETV Bharat / bharat

ನರಸಿಂಹರಾವ್ ಸರ್ಕಾರ ನೇತಾಜಿ ಚಿತಾಭಸ್ಮ ದೇಶಕ್ಕೆ ತರಲು ಪ್ರಯತ್ನಿಸಿತ್ತು: ಆಶಿಶ್​ ರೇ - ಗುಪ್ತಚರ ಇಲಾಖೆ

ನರಸಿಂಹರಾವ್ ಸರ್ಕಾರವು ಬೋಸ್ ಚಿತಾಭಸ್ಮವನ್ನು ಮರಳಿ ತರಲು ಬಯಸಿತು, ಗಲಭೆಗಳ ಗುಪ್ತಚರ ಎಚ್ಚರಿಕೆ ನಂತರ ಕಲ್ಪನೆಯನ್ನು ಕೈಬಿಟ್ಟಿತು ಎಂದು ನೇತಾಜಿ ಅವರ ಮೊಮ್ಮಗ ಆಶಿಶ್​ ರೇ ಹೇಳಿದ್ದಾರೆ.

ಸುಭಾಷ್ ಚಂದ್ರ ಬೋಸ್​
ಸುಭಾಷ್ ಚಂದ್ರ ಬೋಸ್​
author img

By

Published : Oct 22, 2021, 7:22 PM IST

ಕೋಲ್ಕತ್ತಾ: 1990 ರ ದಶಕದಲ್ಲಿ ಪಿ.ವಿ.ನರಸಿಂಹರಾವ್ ಸರ್ಕಾರವು ಸುಭಾಷ್ ಚಂದ್ರ ಬೋಸ್​ ಅವರ ಚಿತಾಭಸ್ಮ ತರಲು ಪ್ರಯತ್ನಿಸಿತ್ತು. ಚಿತಾಭಸ್ಮ ತರುವುದರಿಂದ ಕೋಲ್ಕತ್ತಾದಲ್ಲಿ ಗಲಭೆ ಉಂಟಾಗಬಹುದು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನೆಲೆ, ಆ ವಿಚಾರವನ್ನು ಅಲ್ಲಿಯೇ ಕೈ ಬಿಡಲಾಯಿತು ಎಂದು ಅವರ ಸೋದರನ ಮೊಮ್ಮಗ ಹೇಳಿದ್ದಾರೆ.

ಸದ್ಯ ಜಪಾನ್​ನ ರೆಂಕೋಜಿ ದೇವಸ್ಥಾನದಲ್ಲಿ ಚಿತಾಭಸ್ಮವಿದೆಯೆಂದು ನಂಬಲಾಗಿದೆ. ವಿದೇಶಾಂಗ ಸಚಿವಾಲಯದ ಸಹಯೋಗದೊಂದಿಗೆ ಇಂಡೋ-ಜಪಾನ್ ಸಮುರಾಯ್ ಸೆಂಟರ್, ಗುರುವಾರ ಆಯೋಜಿಸಿದ್ದ ಬೋಸ್ ಅವರು ಆಜಾದ್ ಹಿಂದ್ ಸರ್ಕಾರವನ್ನು ಸ್ಥಾಪಿಸಿದ 78 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ವರ್ಚುಯಲ್ ಸೆಮಿನಾರ್‌ನಲ್ಲಿ ನೇತಾಜಿ ಸೋದರನ ಮೊಮ್ಮಗ, ಸಂಶೋಧಕ ಆಶಿಶ್​ ರೇ ಮಾತನಾಡಿದರು.

ಲೇಖಕ, ಸಂಶೋಧಕರಾಗಿರುವ ಆಶಿಶ್​ ರೇ, ಸೆಪ್ಪೆಂಬರ್ 1945 ರಿಂದ ಟೋಕಿಯೋದಲ್ಲಿನ ಬೌದ್ಧ ದೇಗುಲದಲ್ಲಿರುವ ಚಿತಾಭಸ್ಮ ಮರಳಿ ತರಲು ಯತ್ನಿಸಲಾಗುತ್ತಿದೆ. ಚಿತಾಭಸ್ಮವುದ ಜರ್ಮನಿಯಲ್ಲಿ ವಾಸಿಸುತ್ತಿರುವ ಸುಭಾಷ್ ಚಂದ್ರ ಬೋಸ್ ಮಗಳಾದ, ಅರ್ಥಶಾಸ್ತ್ರಜ್ಞೆ ಪ್ರೊ. ಅನಿತಾ ಬೋಸ್ ಪಿಫಾಫ್​ಗೆ ಸೇರಬೇಕು ಎಂದು ಹೇಳಿದರು.

ಅಲ್ಲದೇ, ಭಾರತ ಸರ್ಕಾರವು ಭಸ್ಮ ಮರಳಿ ಪಡೆಯುವುದರ ಉಸ್ತುವಾರಿ ವಹಿಸಿಕೊಳ್ಳಲು ಅವರಿಗೆ ಅವಕಾಶ ನೀಡಬೇಕು ಎಂದು ಇದೇ ವೇಳೆ ಆಶಿಶ್​ ರೇ ಹೇಳಿದ್ರು.

ರೇ ಅವರು, ನೇತಾಜಿ ಸಾವಿನ ವಿವಾದದ ಕುರಿತು ಲೈಡ್​ ಟು ರೆಸ್ಟ್ ಎಂಬ ಪುಸ್ತಕವನ್ನು ಬರೆದಿದ್ದಾರೆ. 1990 ರಲ್ಲಿಯೇ ಚಿತಾಭಸ್ಮ ಭಾರತಕ್ಕೆ ತರಲು ಯತ್ನಿಸಲಾಯಿತು. ಆದರೆ, ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ವಯ ಆ ನಿರ್ಧಾರವನ್ನು ಅಲ್ಲಿಗೇ ಕೈ ಬಿಡಲಾಯಿತು.

ನೇತಾಜಿ ಬದುಕುಳಿದಿದ್ದರು ಎಂದೇ ನಂಬಲಾಗಿತ್ತು

ದೇಶದ ಬಹುತೇಕರು ತೈಪೆಯಲ್ಲಿ ಆಗಸ್ಟ್ 18, 1945 ರಂದು ವಿಮಾನ ಅಪಘಾತದಲ್ಲಿ ಬೋಸ್ ಸಾಯಲಿಲ್ಲ ಎಂದು ನಂಬಿದ್ದಾರೆ. ನೇತಾಜಿ ಅಪಘಾತದಿಂದ ಬದುಕುಳಿದಿದ್ದಾರೆ.

ಅವರು ಮೃತಪಟ್ಟಿಲ್ಲ. ವಿಮಾನ ದುರಂತದಿಂದ ಬದುಕುಳಿದ ಅವರು ಸೋವಿಯತ್​ನಲ್ಲಿ ಬಂಧಿತರಾಗಿದ್ದರು ಎಂದು ಕೆಲವರು ನಂಬಿದ್ದರು. ಇನ್ನೂ ಕೆಲವರು, ಘಟನೆ ಬಳಿಕ ಬೋಸ್ ಭಾರತಕ್ಕೆ ಮರಳಿದ್ದು, ಸಾಧುವಾಗಿ ಬದುಕಿದರು ಎಂದು ಗಾಢವಾಗಿ ನಂಬಿದ್ದಾರೆ.

’ದಯಮಾಡಿ ಅರ್ಥಹೀನ ವಿವಾದ ಕೊನೆಗೊಳಿಸಿ’

ಬಳಿಕ ಮಾತನಾಡಿದ ಮಾಜಿ ಸಂಸದೆ, ಹಾರ್ವರ್ಡ್ ಯುನಿವರ್ಸಿಟಿಯ ಪ್ರಾಧ್ಯಾಪಕಿ ಪ್ರೊ.ಸುಗತ ಬೋಸ್​, ನೇತಾಜಿ ಸಾವಿನ ಕುರಿತಾದ ಅರ್ಥಹೀನ ವಿವಾದ ಕೊನೆಗೊಳ್ಳಬೇಕು ಎಂದರು. ಅಲ್ಲದೇ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೇತಾಜಿ ಅವರ ಚಿತಾಭಸ್ಮವು ಭಾರತಕ್ಕೆ ತರಬೇಕಿದೆ. ಇದು ಕೇವಲ ಕುಟುಂಬದ ಸಮಸ್ಯೆಯಲ್ಲ, ರಾಷ್ಟ್ರೀಯ ಸಮಸ್ಯೆ ಎಂದರು.

’ನೇತಾಜಿ ಸ್ಮಾರಕ ನಿರ್ಮಾಣ ಮಾಡಿ’

ಮಣಿಪಾಲ್ ಗ್ಲೋಬಲ್ ಎಜುಕೇಶನ್​ನ ಅಧ್ಯಕ್ಷ ಮತ್ತು ಇನ್ಫೋಸಿಸ್​​ನ ಮಾಜಿ ನಿರ್ದೇಶಕ ಟಿವಿ ಮೋಹನ್ ದಾಸ್ ಪೈ ಮಾತನಾಡಿ, ದೇಶವು ಮುಂದಿನ ವರ್ಷ ಬೋಸ್ ಅವರ 125 ನೇ ಜನ್ಮದಿನವನ್ನು ಆಚರಿಸುತ್ತದೆ. ಈ ಹಿನ್ನೆಲೆ ದೇಶದಲ್ಲಿ ಅವರ ಒಂದು ಸ್ಮಾರಕ ನಿರ್ಮಿಸಬೇಕಿದೆ ಎಂದು ಹೇಳಿದ್ದಾರೆ.

ಜಪಾನ್‌ನ ಮಾಜಿ ಭಾರತೀಯ ರಾಯಭಾರಿಯಾಗಿದ್ದ ಅಫ್ತಾಬ್ ಸೇಠ್ ವರ್ಚುಯಲ್ ಸೆಮಿನಾರ್‌ನಲ್ಲಿ ಮಾತನಾಡುತ್ತಾ, ನೇತಾಜಿಯನ್ನು ಜಪಾನಿಯರು ಗೌರವಿಸುತ್ತಿದ್ದರು. ಜಪಾನ್‌ನ ಸಂಸತ್ತಿನಲ್ಲಿ ಮಾತನಾಡಲು ಅವರನ್ನು ಆಹ್ವಾನಿಸಲಾಗಿತ್ತು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.