ನವದೆಹಲಿ : ನಾರದಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಇತರರಿಗೆ ಸಂಬಂಧಿಸಿದಂತೆ ದಾಖಲಾದ ಅಫಿಡವಿಟ್‌ನ ತೆಗೆದುಕೊಳ್ಳಲು ನಿರಾಕರಿಸಿದ ಕೋಲ್ಕತಾ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಅಫಿಡವಿಟ್ ದಾಖಲೆಗಳನ್ನು ಮರು ಪರಿಶೀಲಿಸುವಂತೆ ಕೋರಿ ಹೈಕೋರ್ಟ್ಗೆ ಹೊಸದಾಗಿ ಮನವಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಮೂಲೊಯ್ ಘಟಕ್ ಅವರಿಗೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಇಂದಿರಾ ಬ್ಯಾನರ್ಜಿ ಈ ಪ್ರಕರಣದ ವಿಚಾರಣೆಯಿಂದ ಸ್ವತಃ ಹಿಂದೆ ಸರಿದ ನಂತರ ಸುಪ್ರೀಂಕೋರ್ಟ್ ಈ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ. ಕೊನೆಗೂ ಈ ಪ್ರಕರಣವನ್ನು ಮಂಗಳವಾರ ನ್ಯಾಯಮೂರ್ತಿ ವಿನೀತ್ ಶರಣ್ ಅವರು ಮರು ನಿಯೋಜನೆಗೆ ಸೂಚಿಸಿ, ಶುಕ್ರವಾರ ವಿಚಾರಣೆ ನಡೆಸುವಂತೆ ದಿನ ನಿಗದಿ ಮಾಡಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:BJP ತೊರೆದು TMC ಸೇರಿದ 150 ಜನ.. ಸ್ಯಾನಿಟೈಸ್ ಮಾಡಿ ಪಕ್ಷಕ್ಕೆ ಸೇರ್ಪಡೆ
ಜೂನ್ 9ರಂದು ಮಮತಾ ಬ್ಯಾನರ್ಜಿ ಮತ್ತು ಘಟಕ್ ಸಲ್ಲಿಸಿದ್ದ ಅಫಿಡವಿತ್ ಅನ್ನು ಸಿಜೆ ರಾಜೇಶ್ ಬಿಂದಾಲ್ ನೇತೃತ್ವದ ಕೋಲ್ಕತಾ ಹೈಕೋರ್ಟ್ನ ಐವರು ನ್ಯಾಯಾಧೀಶರ ಪೀಠ ಸ್ವೀಕರಿಸಲು ನಿರಾಕರಿಸಿತ್ತು.
ಜೂನ್ 28ರೊಳಗೆ ಅರ್ಜಿಯನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ಆದೇಶಿಸಿದೆ. ಸಿಬಿಐ ಮತ್ತು ಇತರೆ ಪಕ್ಷಗಳಿಗೆ ಪ್ರತಿಗಳನ್ನು ನೀಡಬೇಕು. ಈ ಪ್ರತಿಗಳಿಗೆ ಸಿಬಿಐ ಹಾಗೂ ಇತರೆ ಪಕ್ಷಗಳು ಪ್ರತ್ಯುತ್ತರ ಸಲ್ಲಿಸುವುದಕ್ಕೆ ಕೋರ್ಟ್ ಅವಕಾಶ ನೀಡಿದೆ.