ETV Bharat / bharat

ಕೊರೊನಾ ಸೋಂಕಿತರನ್ನು ಉಳಿಸಲು ಮಹಾರಾಷ್ಟ್ರದಲ್ಲಿ ‘ಆಕ್ಸಿಜನ್ ಸಿಸ್ಟರ್​ ’ ಪರಿಕಲ್ಪನೆ - ಆರೋಗ್ಯ ಸಚಿವ ರಾಜೇಶ್ ತೋಪೆ

ಮಹಾರಾಷ್ಟ್ರದಲ್ಲಿ ಕೊರೊನಾ ರೋಗಿಗಳನ್ನು ಉಳಿಸಲು ನಂದೂರ್‌ಬಾರ್‌ ಜಿಲ್ಲೆಯಲ್ಲಿ ‘ಆಕ್ಸಿಜನ್ ಸಿಸ್ಟರ್​’ ಎಂಬ ಪರಿಕಲ್ಪನೆ ಯಶಸ್ವಿಯಾಗುತ್ತಿದೆ.

Oxygen Sister
ಆಕ್ಸಿಜನ್ ಸಿಸ್ಟರ್​ ಪರಿಕಲ್ಪನೆ
author img

By

Published : Apr 29, 2021, 8:58 PM IST

ಮುಂಬೈ( ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್‌ಬಾರ್‌ ಜಿಲ್ಲೆಯಲ್ಲಿ ಆರಂಬಿಸಿರುವ ‘ಆಕ್ಸಿಜನ್ ಸಿಸ್ಟರ್​’ ಎಂಬ ನವೀನ ಪರಿಕಲ್ಪನೆ ಇಡೀ ದೇಶದಲ್ಲಿ ಜನಪ್ರಿಯತೆ ಗಳಿಸುತ್ತಿದೆ.

ಆಕ್ಸಿಜನ್ ಸಿಸ್ಟರ್​ ಪರಿಕಲ್ಪನೆ

ಸರಿಯಾಗಿ ಯೋಜಿತ ಆಮ್ಲಜನಕದ ಬಳಕೆಗೆ ‘ಆಕ್ಸಿಜನ್ ಸಿಸ್ಟರ್​ ಎಂಬ ಹೆಸರು ಇಡಲಾಗಿದೆ. ಬುಡಕಟ್ಟು ಜಿಲ್ಲೆಯಾದ ನಂದೂರ್ಬಾರ್, ಕೊರೊನಾವನ್ನು ಎದುರಿಸುವ ನವೀನ ಉಪಕ್ರಮಗಳಿಂದಾಗಿ ಪ್ರಸ್ತುತ ಭಾರಿ ಜನಪ್ರಿಯತೆ ಗಳಿಸಿಕೊಂಡಿದೆ. ತನ್ನದೇ ಆದ ಆಮ್ಲಜನಕ ಉತ್ಪಾದನಾ ಯೋಜನೆಯನ್ನು ಸ್ಥಾಪಿಸಿದ ನಂತರ ನಂದೂರ್‌ಬಾರ್‌ನಲ್ಲಿ ಪ್ರಾರಂಭಿಸಲಾದ ‘ಆಕ್ಸಿಜನ್ ಸಿಸ್ಟರ್​’ ಪರಿಕಲ್ಪನೆಯು ರಾಜ್ಯದಲ್ಲಿ ಪಾಮುಖ್ಯತೆ ಪಡೆದುಕೊಳ್ಳುತ್ತಿದೆ.

ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ರಾಜೇಶ್ ತೋಪೆ, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ರಘುನಾಥ್ ಭೋಯ್ ಮಾರ್ಗದರ್ಶನದಲ್ಲಿ ಇಪ್ಪತ್ತು ರೋಗಿಗಳಿಗೆ ಒಬ್ಬ ಆಕ್ಸಿಜನ್​ ಸಿಸ್ಟರ್​ ಅವರನ್ನು ನೇಮಕ ಮಾಡಿದ್ದು, ಅವರು ಅವಶ್ಯಕತೆ ಇದ್ದವರಿಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಈ ಪ್ರಯೋಗ ಈಗ ಯಶಸ್ವಿ ಆಗಿದೆ. ಹಲವಾರು ಸ್ಥಳಗಳಲ್ಲಿ ಹಾಸಿಗೆಗಳಿದ್ದರೆ, ಯಾವುದೇ ಆಮ್ಲಜನಕ ಸಿಲಿಂಡರ್ ಲಭ್ಯವಿಲ್ಲ. ಆದ್ದರಿಂದ, ನಂದೂರ್​ಬಾರ್ ಜಿಲ್ಲಾ ಆಸ್ಪತ್ರೆಯು ಆಮ್ಲಜನಕವನ್ನು ಬುದ್ಧಿವಂತಿಕೆಯಿಂದ ಹೇಗೆ ಬಳಸುವುದು ಎಂಬ ನವೀನ ಕಲ್ಪನೆಯನ್ನ ಯಶಸ್ವಿಯಾಗಿ ಬಳಸಿಕೊಂಡು ಅವಶ್ಯಕತೆ ಇದ್ದವರಿಗೆ ಸಕಾಲಕ್ಕೆ ಒದಗಿಸುವ ಯೋಜನೆ ಇದಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ‘ಆಕ್ಸಿಜನ್ ಸಿಸ್ಟರ್​ ’ ಎಂಬ ಪರಿಕಲ್ಪನೆಯನ್ನು ಜಾರಿಗೆ ತರಲಾಗುತ್ತಿದೆ. ಪ್ರತಿ 20 ರೋಗಿಗಳಿಗೆ ಒಬ್ಬ ‘ಆಕ್ಸಿಜನ್ ಸಿಸ್ಟರ್​ ನೇಮಕ ಮಾಡಲಾಗಿದೆ. ಇದರಿಂದ ಕೊರೊನಾ ಸೋಂಕಿತರ ಜೀವ ಉಳಿಸಲು ಇದು ಸಹಾಯಕಾರಿಯಾಗುತ್ತದೆ ಮಹಾ ಆರೋಗ್ಯ ಸಚಿವರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.