ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ಅಧ್ಯಕ್ಷ ಹುದ್ದೆಗೆ ನಾನಾ ಪಟೋಲೆ ಸ್ಪರ್ಧಿಸುತ್ತಿರುವ ಹಿನ್ನೆಲೆ ಅವರು ತಮ್ಮ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ.
ನಾನಾ ಪಟೋಲೆ ತಮ್ಮ ರಾಜೀನಾಮೆಯನ್ನು ಉಪ ಸ್ಪೀಕರ್ ನರ್ಹಾರಿ ಝಿರ್ವಾಲ್ ಅವರಿಗೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಏಕನಾಥ್ ಗಾಯಕ್ವಾಡ್ ಅವರನ್ನು ಮುಂಬೈ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕಿ, ಆ ಜವಾಬ್ದಾರಿಯನ್ನು ಭಾಯಿ ಜಗ್ತಾಪ್ ಅವರಿಗೆ ವಹಿಸಿದಾಗ, ರಾಜ್ಯ ಘಟಕದಲ್ಲಿ ಎಂಪಿಸಿಸಿ ಅಧ್ಯಕ್ಷ ಹುದ್ದೆಗೆ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ.
ಹಾಲಿ ಎಂಪಿಸಿಸಿ ಅಧ್ಯಕ್ಷ ಬಾಲಾಸಾಹೇಬ್ ಥೋರತ್ ತಕ್ಷಣ ದೆಹಲಿಗೆ ತೆರಳಿ ತಮ್ಮ ಹುದ್ದೆಯನ್ನು ಉಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದರೊಂದಿಗೆ ಬಾಲಾಸಾಹೇಬ್ ಥೋರಾಟ್ ತಮ್ಮ ಹುದ್ದೆಯನ್ನು ಉಳಿಸಿಕೊಳ್ಳುತ್ತಾರೆ ಎಂಬ ಚರ್ಚೆ ಎಂಪಿಸಿಸಿಯಲ್ಲಿ ನಡೆಯುತ್ತಿದೆ.
ಈ ಸುದ್ದಿಯನ್ನೂ ಓದಿ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಗೆ ಗಲ್ಲು.. ಯಾರು ಈ ಶಬ್ನಮ್!? ಏನು ಆಕೆ ಎಸಗಿದ ಅಪರಾದ!?
ಆದರೆ ಒಬ್ಬ ವ್ಯಕ್ತಿ- ಒಂದು ಹುದ್ದೆ ಎನ್ನುವ ತತ್ವವನ್ನು ಗಮನದಲ್ಲಿಟ್ಟುಕೊಂಡು, ಕಾಂಗ್ರೆಸ್ ಬಾಳಾ ಸಾಹೇಬ್ ಥೋರಾಟ್ ಅವರ ರಾಜೀನಾಮೆಯನ್ನು ತೆಗೆದುಕೊಳ್ಳಲು ಮನಸ್ಸು ಮಾಡಿದೆ. ಈ ಮಧ್ಯೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ನಾನಾ ಪಟೋಲೆ ರಾಜೀನಾಮೆ ಸಲ್ಲಿಸಿದ್ದಾರೆ.