ಹೈದರಾಬಾದ್ (ತೆಲಂಗಾಣ): ದೇಶದಲ್ಲೇ ಅತಿ ಉದ್ದದ ಮೆಟ್ರೋ ರೈಲು ಜಾಲ ಹೊಂದಿರುವ ನಗರಗಳಲ್ಲಿ ಎರಡನೇ ಸ್ಥಾನ ಪಡೆದಿದ್ದ ಹೈದರಾಬಾದ್ ಇದೀಗ ಮೂರನೇ ಸ್ಥಾನಕ್ಕೆ ಕುಸಿದಿದೆ. ನೆಟ್‌ವರ್ಕ್ ವಿಷಯದಲ್ಲಿ ಹೈದರಾಬಾದ್ ಮೆಟ್ರೋ ಹಿಂದುಳಿದಿದೆ. ಇತರ ಮೆಟ್ರೋ ನಗರಿಗಳು ದೊಡ್ಡ ಪ್ರಮಾಣದ ವಿಸ್ತರಣೆ ಕಾರ್ಯಗಳಿಗೆ ಆದ್ಯತೆ ನೀಡಿದ್ದೇ ಇದಕ್ಕೆ ಕಾರಣ.
ಶನಿವಾರ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಹೊಸದಾಗಿ 13.71 ಕಿ.ಮೀ. ದೂರದ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದ್ದರು. ಇದರೊಂದಿಗೆ ಬೆಂಗಳೂರು ನಮ್ಮ ಮೆಟ್ರೋ ಜಾಲ 70 ಕಿ.ಮೀ. ದೂರದವರೆಗೆ ವಿಸ್ತರಣೆಯಾಗಿದೆ. ಈ ಮೂಲಕ ಹೈದರಾಬಾದ್ ಹಿಂದಿಕ್ಕಿ ಎರಡನೇ ಸ್ಥಾನವನ್ನು ನಮ್ಮ ಮೆಟ್ರೋ ಬೆಂಗಳೂರು ಪಡೆಯಿತು. ಮೊದಲನೇ ಸ್ಥಾನವನ್ನು ದೆಹಲಿ ಹೊಂದಿದೆ.
ಮೆಟ್ರೋ ರೈಲು ಏಕೆ?: ಟ್ರಾಫಿಕ್ ಸಮಸ್ಯೆ ಪರಿಹರಿಸಲು ಮತ್ತು ಆಧುನಿಕ ಸಾರ್ವಜನಿಕ ಸಾರಿಗೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಮೆಟ್ರೋ ರೈಲನ್ನು ನಗರಗಳಲ್ಲಿ ವೇಗವಾಗಿ ವಿಸ್ತರಿಸಲಾಗುತ್ತಿದೆ. ಮೊದಲೆರಡು ಸ್ಥಾನದಲ್ಲಿರುವ ದೆಹಲಿ ಮತ್ತು ಬೆಂಗಳೂರು ಬೃಹತ್ ಪ್ರಮಾಣದಲ್ಲಿ ಹಿಗ್ಗುತ್ತಿವೆ. ಎಲ್ಲ ಕಾಮಗಾರಿಗಳು ವಿವಿಧ ಹಂತಗಳಲ್ಲಿವೆ. ಚೆನ್ನೈನಲ್ಲೂ ಬೃಹತ್ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಹೈದರಾಬಾದ್ ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ. ಆ ಮಟ್ಟದಲ್ಲಿ ಆಯಾ ನಗರಗಳಲ್ಲಿ ಮೆಟ್ರೋ ವಿಸ್ತರಣೆ ಕಾಮಗಾರಿಗಳು ಪ್ರಗತಿಯಲ್ಲಿವೆ.
ಹೈದರಾಬಾದ್ ಮೆಟ್ರೋ ಯೋಜನೆ: ಈ ಮೂರು ನಗರಗಳಲ್ಲಿನ ಮೆಟ್ರೋ ಯೋಜನೆಗಳಿಗೆ ಕೇಂದ್ರವು ದೊಡ್ಡ ಪ್ರಮಾಣದ ಆರ್ಥಿಕ ನೆರವು ನೀಡುತ್ತಿದ್ದು ಕಾಮಗಾರಿಗಳು ಸುಗಮವಾಗಿ ಭರದಿಂದ ಸಾಗುತ್ತಿವೆ. ರಾಜ್ಯಗಳು ಕೂಡಾ ಅಷ್ಟೇ ಪ್ರಮಾಣದ ಹಣ ಖರ್ಚು ಮಾಡುತ್ತಿವೆ. ಕೇಂದ್ರ, ರಾಜ್ಯ ಸರ್ಕಾರಗಳು ಜಂಟಿಯಾಗಿ ಇವುಗಳನ್ನು ನಿರ್ಮಿಸುತ್ತಿವೆ. ಹೈದರಾಬಾದ್ ಮೆಟ್ರೋಗೆ ಸಂಬಂಧಿಸಿದಂತೆ, ಮೊದಲ ಹಂತವನ್ನು ಸಂಪೂರ್ಣವಾಗಿ ಪಿಪಿಪಿ ವ್ಯವಸ್ಥೆಯಡಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಆರ್ಥಿಕ ಸಹಭಾಗಿತ್ವ ಹೆಸರಿಗೆ ಮಾತ್ರ ಸೀಮಿತವಾಗಿದೆ.
ಎರಡನೇ ಹಂತಕ್ಕೆ ಸಂಬಂಧಿಸಿದಂತೆ 62 ಕಿ.ಮೀ. ಯೋಜನೆಗಳಿವೆ. ಈ ಪೈಕಿ 31 ಕಿ.ಮೀ. ರಾಯದುರ್ಗದಿಂದ ಶಂಶಾಬಾದ್ವರೆಗೆ ರಾಜ್ಯ ಸರ್ಕಾರದ ನಿಧಿಯಿಂದಲೇ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಹಣ ಮಂಜೂರಾದರೆ ಕೆಲಸ ಆರಂಭವಾಗುವ ಸಾಧ್ಯತೆ ಇದೆ. ಉಳಿದ 31 ಕಿ.ಮೀ. ವಿಸ್ತರಣೆಯನ್ನು ರಾಜ್ಯ ಸರ್ಕಾರವು ಬಿಎಚ್‌ಇಎಲ್‌ನಿಂದ ಲಕ್ಡಿಕಪೂಲ್ ಮತ್ತು ನಾಗೋಲ್‌ನಿಂದ ಎಲ್‌ಬಿನಗರದವರೆಗಿನ ಕಾಮಗಾರಿಗಳಿಗೆ ಹಣ ಮಂಜೂರು ಮಾಡುವಂತೆ ಕೇಂದ್ರವನ್ನು ಕೋರಿದೆ. ಕೇಂದ್ರ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ. ಎರಡನೇ ಹಂತದ ಕಾಮಗಾರಿಗೆ ರಾಜ್ಯ ಹಾಗೂ ಕೇಂದ್ರ ಹಣ ನೀಡದ ಕಾರಣ ಕಾಮಗಾರಿ ನಡೆಯುತ್ತಿಲ್ಲ. ಅವುಗಳ ಡಿಪಿಆರ್ ಸಿದ್ಧಗೊಂಡು ಮೂರು ವರ್ಷಗಳಾಗಿವೆ.
ಇದನ್ನೂ ಓದಿ: ಮಾ.30ರಿಂದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ನ್ಯಾಷನಲ್ ಕಾಮನ್ ಮೊಬಲಿಟಿ ಕಾರ್ಡ್ ಲಭ್ಯ: ಬಿಎಂಆರ್ಸಿಎಲ್
ಬೆಂಗಳೂರಿನಲ್ಲಿ ಶನಿವಾರ (25 ರಂದು) 4,249 ಕೋಟಿ ರೂ ವೆಚ್ಚದ 13.71 ಕಿಲೋಮೀಟರ್ ಉದ್ದದ ನೂತನ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಕೃಷ್ಣರಾಜಪುರದಿಂದ ವೈಟ್ ಫೀಲ್ಡ್‌ವರೆಗಿನ ಮಾರ್ಗದ ನಮ್ಮ ಮೆಟ್ರೋಗೆ ಹಸಿರು ನಿಶಾನೆ ತೋರುವ ಜೊತೆಗೆ ಮೆಟ್ರೋ ರೈಲಿನಲ್ಲಿ ಸಂಚರಿಸಿದ್ದಾರೆ. ನೂತನ ಮಾರ್ಗದಿಂದಾಗಿ ದೇಶದಲ್ಲೇ ಎರಡನೇ ಅತಿ ದೊಡ್ಡ ಮೆಟ್ರೋ ಜಾಲ ಹೊಂದಿದ ಹೆಗ್ಗಳಿಕೆಯನ್ನು ನಮ್ಮ ಮೆಟ್ರೋ ಪಡೆದುಕೊಂಡಿದೆ.